AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮ ಜೊತೆಗಿರುವವರು ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಚಿಹ್ನೆಗಳಿವು

ಕೆಲವೊಂದು ಸಂದರ್ಭದಲ್ಲಿ ನಮ್ಮವರು ಎಂದುಕೊಂಡವರೇ ನಮಗೆ ಮೋಸ ಮಾಡುತ್ತಾರೆ. ಒಳ್ಖೆಯವರಂತೆ ಇದ್ದುಕೊಂಡು ಅವರು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಾರೆ. ಇಂತಹ ಜನರಿಂದ ಒಳ್ಳೆಯದಕ್ಕಿಂತ ಕೆಟ್ಟದಾಗುವುದೇ ಹೆಚ್ಚು ಎನ್ನುತ್ತಾರೆ ಚಾಣಕ್ಯ. ಅಲ್ಲದೆ ಇಂತಹ ಸ್ವಾರ್ಥಿ ಜನರನ್ನು ಗುರುತಿಸುವು ಹೇಗೆ ಎಂಬುದನ್ನು ಸಹ ತಿಳಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ನಿಮ್ಮ ಜೊತೆಗಿರುವವರು ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಚಿಹ್ನೆಗಳಿವು
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Apr 15, 2026 | 5:51 PM

Share

ಆಚಾರ್ಯ ಚಾಣಕ್ಯರು (Acharya Chanakya) ಯಶಸ್ಸು, ಶ್ರೀಮಂತಿಕೆ ಮಾತ್ರವಲ್ಲದೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯರ ಈ ತತ್ವಗಳು  ನಮ್ಮನ್ನು ಸರಿ ದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತವೆ. ಅಲ್ಲದೆ ಆಚಾರ್ಯ ಚಾಣಕ್ಯರು ತಮ್ಮ  ತತ್ವಗಳಲ್ಲಿ, ನಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಯಾವಾಗಲೂ ಗಮನಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತ ಇರುವ ಎಲ್ಲವರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ, ಕೆಲವರು ನಮ್ಮನ್ನು ಅವರ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸ್ವಾರ್ಥಿ ಜನರನ್ನು ಗುರುತಿಸುವುದು ಹೇಗೆ ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ:

ತಮ್ಮ ಅಗತ್ಯಗಳಿಗಾಗಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತರೆ: ನಿಮ್ಮ ಸುತ್ತಮುತ್ತಲಿರುವ ಯಾರಾದರೂ ನಿಮ್ಮನ್ನು ಅವರ ಅಗತ್ಯ ಕಾರ್ಯಗಳಿರುವಾಗ ಮಾತ್ರ ನೆನಪಿಸಿಕೊಂಡರೆ ಅವರು ಸ್ವಾರ್ಥಿಗಳೆಂದು ಅರ್ಥ. ಅಂತಹ ಜನರು ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಿಲ್ಲ, ಬದಲಾಗಿ ಅವರ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಸಹಾಯ ಪಡೆದ ಬಳಿಕ ನಿಮ್ಮ ಜೊತೆ ಮಾತನಾಡದೆ ಇರಬಹುದು.  ಇಂತಹ ಜನರು ಸಂಬಂಧ ಮತ್ತು ಭಾವನೆಗಳಿಗೆ ಎಂದೂ ಬೆಲೆ ಕೊಡುವುದಿಲ್ಲ. ಹಾಗಾಗಿ ಇಂತಹ ಜನರೊಂದಿಗೆ ಸ್ನೇಹ ಮಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು.

ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು: ನಿಮ್ಮನ್ನು ಅವರವರ ಸ್ವಾರ್ಥಗಳಿಗಾಗಿ ಬಳಸಿಕೊಳ್ಳುವ ಜನ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ನೀವು ಸಮಸ್ಯೆಯಿಂದ ಬಳಲುತ್ತಿದ್ದರೂ, ಒತ್ತಡದಲ್ಲಿದ್ದರೂ ಅಥವಾ ದುಃಖಿತರಾಗಿದ್ದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಅವರಿಗೆ ಸಹಾಯ ಬೇಕಾದಾಗ ಮಾತ್ರ ಸ್ನೇಹಪರವಾಗಿ ವರ್ತಿಸುತ್ತಾರೆ.  ಈ ಜನರಲ್ಲಿ ನೀವು ಎರಡು ರೀತಿಯ ನಡವಳಿಕೆಯನ್ನು ನೋಡಬಹುದು. ಒಂದೆಡೆ, ಅವರಿಗೆ ನಿಮಗೆ ಅಗತ್ಯವಿರುವಾಗ ಅವರು ನಿಮಗೆ ತುಂಬಾ ಹತ್ತಿರವಾಗುತ್ತಾರೆ, ಆದರೆ ನಿಮಗೆ ಅಗತ್ಯವಿರುವಾಗ, ಅವರು ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಇದನ್ನೂ ಓದಿ: ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ

 ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡದಿರುವುದು: ನೀವು ಈ ಮನುಷ್ಯ ನಮ್ಮವರು ಎಂದು ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತೀರಿ. ಅದೇ ನಿಮ್ಮ ಕೈಯಿಂದ ಸಹಾಯ ಪಡೆದ ಆ ಮನುಷ್ಯ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡದಿದ್ದರೆ, ಅವನಷ್ಟು ಸ್ವಾರ್ಥಿ ಮತ್ತೊಬ್ಬನಿರಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಜವಾದ ಸ್ನೇಹಿತ ನಮ್ಮ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿಯೂ ನಮಗೆ ಸಹಾಯ ಹಸ್ತ ಚಾಚುತ್ತಾನೆ.  ನಿಮ್ಮ ಸಹಾಯಕ್ಕಾಗಿ ಧಾವಿಸದ ಸ್ನೇಹಿತ, ಆತ್ಮೀಯರ ಜೊತೆ ನೀವು ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು. ಏಕೆಂದರೆ ಅಂತಹ ಜನರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಅಥವಾ ಬೆಂಬಲದ ಕೊರತೆ: ಮುಂದೆಯಿಂದ ನಗುನಗುತ್ತಾ ವರ್ತಿಸಿ ಆದ್ರೆ ಮನಸ್ಸಿನಿಂದ ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುವ ಒಂದಷ್ಟು ಜನರಿದ್ದಾರೆ.  ಅವರು ನಿಮ್ಮ ಪ್ರಗತಿಯನ್ನು ಎಂದಿಗೂ ಪೂರ್ಣ ಹೃದಯದಿಂದ ಸ್ವೀಕರಿಸುವುದಿಲ್ಲ. ಅಲ್ಲದೆ ಅವರು ನಿಮಗೆ ಯಾವುದೇ ಬೆಂಬಲವನ್ನು ಸಹ ನೀಡುವುದಿಲ್ಲ. ಅವರು ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us