AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಮನೆಯಲ್ಲಿ ಬಿಸಿ ಬಿಸಿ ಸೂಪ್ ಕುಡಿಯಬೇಕಾ? ಇಲ್ಲಿದೆ ಸುಲಭ ರೆಸಿಪಿ

ಚಳಿಗಾಲದ ಶೀತ ನಿಮಗೆ ಬಿಸಿ ಬಿಸಿ ಆಹಾರ ತಿನ್ನಲು ಪ್ರೇರೇಪಿಸುತ್ತಿದ್ದರೆ ಬೆಚ್ಚಗಿನ ಬಿಸಿ ಬಿಸಿ ಸೂಪ್ ಗಳನ್ನು ಸೇವಿಸುವುದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ನೀವು ಪ್ರಯತ್ನಿಸಬಹುದಾದ ಕೆಲವು ಚಳಿಗಾಲದ ಆರೋಗ್ಯಕರ ತರಕಾರಿ ಸೂಪ್ ಗಳ ಪಾಕವಿಧಾನಗಳು ಇಲ್ಲಿವೆ. ಇವುಗಳನ್ನು ಪ್ರಯತ್ನಿಸಿ ಚಳಿಗಾಲವನ್ನು ಹಿತವಾಗಿ ಕಳೆಯಿರಿ.

ಚಳಿಗಾಲದಲ್ಲಿ ಮನೆಯಲ್ಲಿ ಬಿಸಿ ಬಿಸಿ ಸೂಪ್ ಕುಡಿಯಬೇಕಾ? ಇಲ್ಲಿದೆ ಸುಲಭ ರೆಸಿಪಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Nov 29, 2023 | 4:09 PM

Share

ಚಳಿಗಾಲ ಆರಂಭವಾದರೆ ತಂಪು ಮಾತ್ರವಲ್ಲ ಬದಲಾಗಿ ವಿವಿಧ ಪೌಷ್ಟಿಕ ತರಕಾರಿಗಳು ಕೂಡ ಈ ಕಾಲದಲ್ಲಿಯೇ ನಮಗೆ ಕಾಣಸಿಗುತ್ತದೆ. ಪಾಲಕ್, ಮೆಂತ್ಯ, ಕ್ಯಾರೆಟ್ ಮತ್ತು ಬೀಟ್ರೂಟ್​​​ನಿಂದ ಹಿಡಿದು ಹೂಕೋಸು, ಎಲೆಕೋಸು ಮತ್ತು ಬಟಾಣಿಗಳವರೆಗೆ, ಈ ಶೀತವಿರುವ ತಿಂಗಳು ನೀವು ಆನಂದಿಸಬಹುದಾದ ಅನೇಕ ತರಕಾರಿಗಳನ್ನು ಹೊತ್ತು ತರುತ್ತದೆ. ಅವುಗಳನ್ನು ನೀವು ಅನೇಕ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು, ಅದರ ಜೊತೆಗೆ ಮುಖ್ಯವಾಗಿ ಬಿಸಿ ಬಿಸಿ ಆಹಾರಗಳನ್ನು, ಅದರಲ್ಲಿಯೂ ಆರೋಗ್ಯಕ್ಕೆ ಹಿತವಾಗುವಂತ ಆಹಾರಗಳನ್ನು ಮಾಡಿಕೊಂಡು ಸವಿಯಬಹುದು. ಇಂತಹ ಆಯ್ಕೆಗಳಲ್ಲಿ ಮೊದಲು ಬರುವುದು ಸೂಪ್ ಇವುಗಳನ್ನು ನೀವು ಬಿಸಿ ಬಿಸಿಯಾಗಿ ಕುಡಿಯಬಹುದು ಜೊತೆಗೆ ಇದು ಉತ್ತಮ ರುಚಿಯನ್ನು ಸಹ ಹೊಂದಿರುತ್ತವೆ. ಶೀತ ವಾತಾವರಣದಲ್ಲಿ ನೀವು ಬೆಚ್ಚಗಿರಲು ಬಯಸುತ್ತಿದ್ದರೇ, ಇಲ್ಲಿ ನೀಡಿರುವ ಚಳಿಗಾಲಕ್ಕೆ ಹೇಳಿ ಮಾಡಿಸುವಂತ ತರಕಾರಿ ಸೂಪ್ ಗಳ ಕೆಲವು ಪಾಕವಿಧಾನಗಳನ್ನು ಮನೆಯಲ್ಲಿ ಮಾಡಿ ನೋಡಿ.

ನಿಮ್ಮನ್ನು ಬೆಚ್ಚಗಿಡಲು ಚಳಿಗಾಲದಲ್ಲಿ ಮಾಡಬಹುದಾದ ತರಕಾರಿ ಸೂಪ್​​​​ಗಳ ಸರಳ ಪಾಕವಿಧಾನ

1. ಪಾಲಕ್ ಮತ್ತು ಆಲೂಗಡ್ಡೆ ಸೂಪ್

ಬೇಕಾಗುವ ಸಾಮಗ್ರಿಗಳು

• 2 ಚಮಚ ಆಲಿವ್ ಎಣ್ಣೆ

• 1 ಈರುಳ್ಳಿ (ಕತ್ತರಿಸಿದ್ದು)

• ಬೆಳ್ಳುಳ್ಳಿಯ 2 ಎಸಳುಗಳು (ಕತ್ತರಿಸಿದ್ದು)

• 4 ಆಲೂಗಡ್ಡೆ (ಸಿಪ್ಪೆ ಸುಲಿದು ಕತ್ತರಿಸಿದ)

• 4 ಕಪ್ ತರಕಾರಿ ಬ್ರೋತ್ (ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ)

• 1 ಟೀ ಸ್ಪೂನ್ ಒಣಗಿದ ಥೈಮ್ (ಥೈಮ್ ಪುದೀನಾ ಕುಟುಂಬಕ್ಕೆ ಸೇರಿದ ಪರಿಮಳಯುಕ್ತ ಗಿಡಮೂಲಿಕೆ)

• ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು

• 6 ಕಪ್ ತಾಜಾ ಪಾಲಕ್ (ಕತ್ತರಿಸಿದ್ದು)

• 1 ಕಪ್ ಹಾಲು (ಐಚ್ಛಿಕ)

ಮಾಡುವ ವಿಧಾನ

• ಒಂದು ದೊಡ್ಡ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಮಧ್ಯಮ ಶಾಖದಲ್ಲಿ ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಮೃದುವಾಗುವವರೆಗೆ ಹುರಿಯಿರಿ.

• ಕತ್ತರಿಸಿದ ಆಲೂಗಡ್ಡೆಯನ್ನು ಅದಕ್ಕೆ ಹಾಕಿ ಕಲಕಿ.

• ಅದಕ್ಕೆ ತರಕಾರಿ ಬ್ರೋತ್ ಹಾಕಿ, ಒಣಗಿದ ಥೈಮ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ.

• ಮಿಶ್ರಣವನ್ನು ಕುದಿಸಿ, ನಂತರ ಶಾಖವನ್ನು ಕಡಿಮೆ ಮಾಡಿ ಮತ್ತು ಆಲೂಗಡ್ಡೆ ಮೃದುವಾಗುವವರೆಗೆ ಕುದಿಯಲು ಬಿಡಿ.

• ಕತ್ತರಿಸಿದ ಪಾಲಕ್ ಅನ್ನು ಅದೇ ಪಾತ್ರೆಗೆ ಸೇರಿಸಿ ಚೆನ್ನಾಗಿ ಕಲಕಿ.

• ನೀವು ಕೆನೆಯುಕ್ತ ಸೂಪ್ ಅನ್ನು ಬಯಸಿದರೆ, ಈ ಹಂತದಲ್ಲಿ ನೀವು ಒಂದು ಕಪ್ ಹಾಲನ್ನು ಸೇರಿಸಬಹುದು ಎಂದು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಅಭಿಲಾಷಾ ವಿ ಸಲಹೆ ನೀಡುತ್ತಾರೆ.

• ಚೆನ್ನಾಗಿ ಕಲಕಿ ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಸೂಪ್ ಅನ್ನು ಸವಿಯಿರಿ ಮತ್ತು ಅಗತ್ಯವಿದ್ದರೆ ಮಸಾಲೆಗಳನ್ನು ಸೇರಿಸಿಕೊಳ್ಳಿ.

ಇದನ್ನೂ ಓದಿ:ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

3. ಕ್ಯಾರೆಟ್ ಮತ್ತು ಶುಂಠಿ ಸೂಪ್

ಬೇಕಾಗುವ ಸಾಮಗ್ರಿಗಳು

• 1 ಟೇಬಲ್ ಚಮಚ ಆಲಿವ್ ಎಣ್ಣೆ

• 1 ಈರುಳ್ಳಿ

• 450 ಗ್ರಾಂ ಕ್ಯಾರೆಟ್ (ಸಿಪ್ಪೆ ಸುಲಿದು ಕತ್ತರಿಸಿದ)

• 1 ಚಮಚ ತಾಜಾ ಶುಂಠಿ (ತುರಿದದ್ದು)

• 3 ಕಪ್ ತರಕಾರಿ ಬ್ರೋತ್

• 1 ಟೀ ಚಮಚ ಜೀರಿಗೆ

• ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು

• 1 ಕಪ್ ತೆಂಗಿನ ಹಾಲು

ಮಾಡುವ ವಿಧಾನ

• ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಆಲಿವ್ ಎಣ್ಣೆಯನ್ನು ಮಧ್ಯಮ ಶಾಖದಲ್ಲಿ ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ.

• ಹೆಚ್ಚಿಟ್ಟುಕೊಂಡ ಕ್ಯಾರೆಟ್ ಮತ್ತು ತುರಿದ ಶುಂಠಿಯನ್ನು ಪಾತ್ರೆಗೆ ಸೇರಿಸಿ. ಕ್ಯಾರೆಟ್ ಮೃದುವಾಗಲು ಪ್ರಾರಂಭಿಸುವವರೆಗೆ ಕೆಲವು ನಿಮಿಷಗಳ ಕಾಲ ಕಲಕಿ ಬೇಯಿಸಿಕೊಳ್ಳಿ.

• ಬ್ರೋತ್ ಹಾಕಿದ ನಂತರ, ರುಬ್ಬಿದ ಜೀರಿಗೆಯನ್ನು ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ. ಕುದಿಯಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಉರಿ ಕಡಿಮೆ ಮಾಡಿ ಮತ್ತು ಕ್ಯಾರೆಟ್ ಮೃದುವಾಗುವವರೆಗೆ ಕುದಿಯಲು ಬಿಡಿ.

• ಕ್ಯಾರೆಟ್ ಮೃದುವಾದ ನಂತರ, ಸೂಪ್ ಅನ್ನು ಪ್ಯೂರಿ ಮಾಡಲು ಬ್ಲೆಂಡರ್ ಬಳಸಿ.

• ನೀವು ಕೆನೆಯುಕ್ತ ಸೂಪ್ ಅನ್ನು ಬಯಸಿದರೆ, ಮಡಕೆಗೆ ತೆಂಗಿನ ಹಾಲನ್ನು ಸೇರಿಸಿ ಚೆನ್ನಾಗಿ ಕಲಕಿ. ಸೂಪ್ ಅನ್ನು ಕೆಲವು ನಿಮಿಷಗಳ ಕಾಲ ಕುದಿಯಲು ಬಿಟ್ಟರೆ ಸೂಪ್ ತಯಾರಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Wed, 29 November 23

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?