ಮೊದಲು ನಿಮ್ಮ ಮಕ್ಕಳನ್ನು ನೀವು ನಂಬಿ: ಪೋಷಕರು, ಶಿಕ್ಷಕರಿಗೆ ಮನಃಶಾಸ್ತ್ರಜ್ಞರು ಹೇಳುತ್ತಿರುವ ಕಾಳಜಿಯ ಕಿವಿಮಾತಿದು

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಹಾಗೆಯೇ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಕೆಲವೊಂದು ಸಣ್ಣ ಪುಟ್ಟ ವಿಚಾರಗಳನ್ನು ಮಕ್ಕಳು ದೊಡ್ಡದಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದಾರೆ.

ಮೊದಲು ನಿಮ್ಮ ಮಕ್ಕಳನ್ನು ನೀವು ನಂಬಿ: ಪೋಷಕರು, ಶಿಕ್ಷಕರಿಗೆ ಮನಃಶಾಸ್ತ್ರಜ್ಞರು ಹೇಳುತ್ತಿರುವ ಕಾಳಜಿಯ ಕಿವಿಮಾತಿದು
KidImage Credit source: Unsplash
Follow us
TV9 Web
| Updated By: ನಯನಾ ರಾಜೀವ್

Updated on:Nov 15, 2022 | 11:05 AM

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಹಾಗೆಯೇ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಕೆಲವೊಂದು ಸಣ್ಣ ಪುಟ್ಟ ವಿಚಾರಗಳನ್ನು ಮಕ್ಕಳು ದೊಡ್ಡದಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಅವರಲ್ಲಿ ಇಲ್ಲದಂತಾಗಿದೆ ಹಾಗಾದರೆ ಇದಕ್ಕೆ ಕಾರಣವೇನು ಎಂಬುದರ ಕುರಿತು ಡಾ. ರಜನಿ ಹಾಗೂ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಮಕ್ಕಳಿಗೆ ಬೇಕಾದ ಪೂರಕ ವಾತಾವರಣ ಸಿಗುತ್ತಿಲ್ಲವೇ?, ಅವಮಾನಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಮಕ್ಕಳಿಗಿಲ್ಲವೇ? ಮಕ್ಕಳು ದಿನಕಳೆದಂತೆ ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದುತ್ತಿದ್ದಾರೆಯೇ? ಮಕ್ಕಳನ್ನು ಕಾಡುತ್ತಿದೆಯಾ? ಕುಟುಂಬಸ್ಥರ ಪ್ರೀತಿಯ ಕೊರತೆ ಹಾಗಾದರೆ ಮಕ್ಕಳು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾದರೂ ಏನು?

ಕೋವಿಡ್ ಸಮಯದಲ್ಲಿ ಮಕ್ಕಳ ಮನಸ್ಥಿತಿ ತುಂಬಾ ಸೂಕ್ಷ್ಮವಾಗಿತ್ತು, ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಎರಡು ವರ್ಷಗಳ ಕಾಲ ಮನೆಯಲ್ಲಿಯೇ ಕುಳಿತು ಖಿನ್ನತೆಗೆ ಒಳಗಾಗಿದ್ದರು.

ಆಮೇಲೆ ಶಾಲೆ, ಕಾಲೇಜುಗಳು ಶುರುವಾದ ಬಳಿಕ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಾಗಿತ್ತು, ರ್ಯಾಂಕ್ ಬರಲೇಬೇಕು ಎನ್ನುವ ಒತ್ತಡ, ಕಡಿಮೆ ಅಂಕ ಬಂದರೆ ಮನೆ, ಶಾಲೆಯಲ್ಲಿ ಬೈಗುಳ, 8,9ನೇ ತರಗತಿಯನ್ನು ಪರೀಕ್ಷೆ ಇಲ್ಲದೆ ಪಾಸ್ ಆಗಿ 10ನೇ ತರಗತಿಗೆ ಬಂದಾಗ ಪರೀಕ್ಷೆಯ ಒತ್ತಡ ಒಂದು ಕಡೆ ಮನೆ, ಶಾಲೆಯ ಒತ್ತಡ ಇನ್ನೊಂದು ಕಡೆ ಇದು ಮಕ್ಕಳನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡುತ್ತಿದೆ.

ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಅವರು ಹೇಳುವಂತೆ, ಅನಾರೋಗ್ಯಕರ ಸ್ಪರ್ಧೆ, ಬೋರ್ಡ್​ ಎಕ್ಸಾಂ, ನೂರಕ್ಕೆ ನೂರು ಫಲಿತಾಂಶ ಬರಬೇಕೆನ್ನುವ ಶಾಲೆಯ ಹಂಬಲ, ಮನೆಯಲ್ಲಿನ ಒತ್ತಡವು ಮಕ್ಕಳ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಮಕ್ಕಳ ಮನಸ್ಸಿನಲ್ಲಿ ಒಮ್ಮೆ ಆತ್ಮಹತ್ಯೆ ಎನ್ನುವ ವಿಚಾರ ಬಂದರೆ ಆ ಕ್ಷಣ ಆ ವಿಚಾರವನ್ನು ಮನಸ್ಸಿನಿಂದ ನಾವು ತೆಗೆದು ಹಾಕಿದರೆ ಇನ್ಯಾವತ್ತೂ ಅಂತಹ ವಿಚಾರಗಳು ಬಾರದು.

ಎಲ್ಲರೂ ಹೊಣೆ

ಮಕ್ಕಳು ಈ ಪರಿಸ್ಥಿತಿ ಯಾರೋ ಒಬ್ಬರು ಹೊಣೆಯಲ್ಲ ಶಿಕ್ಷಕರು, ಪೋಷಕರು, ಸಮಾಜ , ಶಾಲೆಯ ಆಡಳಿತ ಎಲ್ಲವೂ ಹೊಣೆಯಾಗಿರುತ್ತದೆ, ಮಕ್ಕಳ ಮನಸ್ಸಿನ ಸೂಕ್ಷ್ಮತೆಯನ್ನು ಅರಿಯುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎಂದರ್ಥ.

ಡಾ. ರಜನಿಯವರು ಹೇಳುವಂತೆ, ಮಾನಸಿಕವಾಗಿ ಮಕ್ಕಳನ್ನು ಪ್ರಿಪೇರ್ ಮಾಡುವುದು ಹೇಗೆ ಎಂಬುದನ್ನು ತಿಳಿದಿರಬೇಕು, ಈಗೇನಾಗಿದೆ ಎನಗರೀಕರಣದಿಂದ ಪ್ರತಿಯೊಂದು ಶಾಲೆ, ಮನೆ, ಸಮಾಜದಲ್ಲಿ ಓದಿಗೆ ಮಾತ್ರ ಒತ್ತು ಹೆಚ್ಚಾಗಿದೆ. ನಾವು ಎಷ್ಟು ಮಾರ್ಕ್ಸ್​ ತೆಗೆದುಕೊಳ್ಳುತ್ತೇವೆ ಎಂಬುದು ಮಾತ್ರ ಮುಖ್ಯವಾಗಿರುತ್ತದೆ, ದೈಹಿಕ ಆರೋಗ್ಯ, ಹವ್ಯಾಸ, ಜೀವನಕೌಶಲ್ಯ ಎಲ್ಲವನ್ನೂ ಮರೆತಿರುತ್ತೇವೆ. ನಮ್ಮ ಶಾಲೆ ನಂಬರ್ ಒನ್ ಆಗಬೇಕು ಎಂಬುದಷ್ಟೇ ಶಾಲಾ ಆಡಳಿತ ಮಂಡಳಿಗಿರುತ್ತದೆ.

ಶೇ.100ರಷ್ಟು ಮಕ್ಕಳಲ್ಲಿ ಶೇ.3ರಷ್ಟು ಮಕ್ಕಳು ಮಾತ್ರ ಹೈ ಐಕ್ಯೂ ಹೊಂದಿರುತ್ತಾರೆ, ಇವರಿಗೆ ಹೆಚ್ಚು ಒತ್ತು ಕೊಡುವ ಅಗತ್ಯವಿಲ್ಲ, ಒಂದು ಬಾರಿ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಶೇ. 20ರಷ್ಟು ರಷ್ಟು ಮಕ್ಕಳು ಅಬೌ ಆವರೇಜ್ ವಿದ್ಯಾರ್ಥಿಗಳಾಗಿರುತ್ತಾರೆ. ಶೇ.3ರಷ್ಟು ಮಕ್ಕಳು ಮಂದ ಮಕ್ಕಳಾಗಿರುತ್ತಾರೆ, ಇನ್ನು ಶೇ.70ರಷ್ಟು ಮಕ್ಕಳು ಆವರೇಜ್ ಮಕ್ಕಳಾಗಿರುತ್ತಾರೆ. ಈ ಮಕ್ಕಳು ಎಲ್ಲಿಗೆ ಹೋಗಬೇಕು.

ಕೆಲವು ಮಕ್ಕಳು ಸೂಕ್ಷ್ಮ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಕೆಲವು ಮಕ್ಕಳಿಗೆ ಏಕಾಏಕಿ ಸಂತೋಷ ವ್ಯಕ್ತಪಡಿಸುತ್ತಾರೆ, ಕೆಲವು ಮಕ್ಕಳಿಗೆ ಏಕಾಏಕಿ ದುಃಖ ಬರುತ್ತೆ.

ಮಕ್ಕಳ ಸೂಕ್ಷ್ಮತೆ ಅರ್ಥಮಾಡಿಕೊಳ್ಳುವ ಮನೋಭಾವ ಬೇಕು

ಶಿಕ್ಷಕರಿಗೂ ಕೂಡ ಒತ್ತಡ ಇರುತ್ತೆ ಹಾಗಾಗಿ ಇಂತಹ ಸೂಕ್ಷ್ಮ ಮನಸ್ಥಿತಿಯುಳ್ಳ ಮಕ್ಕಳನ್ನು ಮನೋವೈದ್ಯರು ಅಥವಾ ಕೆಲವು ಶಾಲೆಗಳಲ್ಲಿ ಕೌನ್ಸಿಲರ್​ಗಳು ಇರುತ್ತಾರೆ ಅವರ ಬಳಿ ಕರೆದುಕೊಂಡು ಹೋಗಬೇಕು.

ಇನ್ನು ಪೋಷಕರು ವಿಚಾರಕ್ಕೆ ಬಂದರೆ, ಮೊದಲು ನಿಮ್ಮ ಮಕ್ಕಳನ್ನು ನೀವು ನಂಬಬೇಕು, ಮಕ್ಕಳು ಯಾರ ವಿರುದ್ಧವಾದರೂ ಏನಾದರೂ ದೂರು ಹೇಳಿದರೆ ಅದನ್ನು ನೀವು ನಂಬಬೇಕು ಅದರ ಬದಲು ನೀನೇ ಏನೋ ಮಾಡಿರ್ತೀಯಾ ಅದಕ್ಕೆ ಹೊಡೆದಿದ್ದಾರೆ ಎಂದು ಹೇಳಿ ನಿಮ್ಮ ಮಕ್ಕಳನ್ನು ನೋಯಿಸಬೇಡಿ, ಮುಂದೊಂದು ದಿನ ಗಂಭೀರವಾದ ಸಮಸ್ಯೆಗಳನ್ನು ಕೂಡ ನಿಮ್ಮ ಬಳಿ ಹೇಳಿಕೊಳ್ಳಲು ಅವರು ಹಿಂಜರಿಯಬಹುದು ಎಂದು ಡಾ. ರಜನಿ ಹೇಳಿದ್ದಾರೆ.

ಪೋಷಕರಿಗೊಂದು ಕಾಳಜಿಯ ಕಿವಿಮಾತು

ಹೀಗಾಗಿ ನೀವು ಮಕ್ಕಳು ದಿನ ಶಾಲೆಯಿಂದ ಬಂದ ತಕ್ಷಣ ಇವತ್ತು ಶಾಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಸ್ವಲ್ಪ ಸಮಯ ಕೊಟ್ಟು ವಿವರವಾಗಿ ಕೇಳಿ. ಮಕ್ಕಳಿಗೆ ಏನಾದರೂ ಸಮಸ್ಯೆಯುಂಟಾಗುತ್ತಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ ಎಂದು ವೈದ್ಯರು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Tue, 15 November 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ