AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗ ಮಾಡುವಾಗ ಭಯಬೇಡಿ, ಈ ಸುಲಭ ಯೋಗಾಸನಗಳನ್ನು ಮಾಡಿ

ನಾಳೆ ವಿಶ್ವ ಯೋಗದಿನ, ಈ ದಿನದಂದು ಎಲ್ಲರೂ ಯೋಗ ಮಾಡಿ, ಆರೋಗ್ಯವನ್ನು ಕಾಪಾಡಿ, ಪ್ರತಿದಿನ ಯೋಗ ಮಾಡುವುದರಿಂದ ಅನೇಕ ರೀತಿ ಆರೋಗ್ಯ ಪ್ರಯೋಜನಗಳು ಇದೆ. ಅದಕ್ಕಾಗಿ ಈ ಯೋಗಗಳನ್ನು ಮಾಡಿ. ಕೆಲವರಿಗೆ ಯೋಗ ಮಾಡಲು ಭಯ, ಆದರೆ ಇಲ್ಲಿ ನೀಡಿರುವ ಸುಲಭ ಯೋಗಗಳನ್ನು ಮಾಡಿ. ಈ ಪ್ರಯೋಜನಗಳನ್ನು ಮಾಡಿ.

ಯೋಗ ಮಾಡುವಾಗ ಭಯಬೇಡಿ, ಈ ಸುಲಭ ಯೋಗಾಸನಗಳನ್ನು ಮಾಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಸಾಯಿನಂದಾ|

Updated on:Jun 20, 2025 | 3:06 PM

Share

ನಾಳೆ ಅಂತಾರಾಷ್ಟ್ರೀಯ ಯೋಗ ದಿನ (ಜೂ.21) (international yoga day 2025) ಆಚರಣೆ ಮಾಡಲಾಗುತ್ತದೆ. ಪ್ರತಿದಿನ ಯೋಗ ಮಾಡಬೇಕು, ಆದರೆ ನಾಳೆ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.  ಕೆಲವರಿಗೆ ಯೋಗ ಮಾಡಲು ಹೆದರಿಕೆ. ಯೋಗದ ಬಗ್ಗೆ ಯಾವುದೇ ತರಬೇತಿಗೆ ಹೋಗದೇ, ಕೆಲವೊಂದು ರೀಲ್ಸ್​​ ನೋಡಿ ಮಾಡುವುದು ಸರಿಯಾದ ಕ್ರಮವಲ್ಲ ಎಂಬ ಭಯ ಇರುತ್ತದೆ. ಇನ್ನು ಕೆಲವರಿಗೆ ಯೋಗ ಮಾಡುವುದು ಮಧ್ಯೆದಲ್ಲಿ ಬಿಟ್ಟರೆ ಎಲ್ಲಿ ಮತ್ತೆ ಸಮಸ್ಯೆ ಆಗುತ್ತದೆ ಎಂಬ ಭಯ ಕೂಡ ಇದೆ. ಯೋಗ ಮಾಡಲು ಯಾವುದೇ ತರಬೇತಿ ಬೇಕಿಲ್ಲ. ಯೋಗ ಮಾಡಲು ಮನೆಯ ಒಂದು ಮೂಲೆ, ಯೋಗ ಮ್ಯಾಟ್ ಸಾಕು, ಯಾವುದೇ ದುಬಾರಿ ಖರ್ಚುಗಳನ್ನು ಮಾಡಬೇಕಿಲ್ಲ. ಯೋಗ ಎನ್ನುವುದು ಎಲ್ಲಾ ವಯಸ್ಸಿನವರಿಗೆ ಮತ್ತು ಎಲ್ಲಾ ದೇಹಗಳಿಗೂ ಸುಲಭ ಮತ್ತು ಸೂಕ್ತವಾಗಿದೆ. ಈ ಅಂತಾರಾಷ್ಟ್ರೀಯ ಯೋಗ ದಿನದಂದು, ಆರಂಭದಲ್ಲಿ ಈ ಸುಲಭ ಯೋಗಗಳನ್ನು ಮಾಡಿ ಇಲ್ಲಿದೆ ನೋಡಿ.

ತಾಡಾಸನ (ಪರ್ವತ ಭಂಗಿ): ನೇರವಾಗಿ ನಿಂತುಕೊಳ್ಳಿ, ಪಾದಗಳನ್ನು ಒಟ್ಟಿಗೆ ಇರಿಸಿ, ತೋಳುಗಳನ್ನು ದೇಹಕ್ಕೆ ಹತ್ತಿರ ಇರಿಸಿ. ಭುಜಗಳನ್ನು ಸಡಿಲವಾಗಿ ಮತ್ತು ಕುತ್ತಿಗೆ ಎತ್ತಿ ಈ ಯೋಗವನ್ನು ಮಾಡಿ.

ಪ್ರಯೋಜನ:

  • ದೇಹವನ್ನು ಸಮತೋಲನಗೊಳಿಸುತ್ತದೆ
  • ಭಂಗಿಯನ್ನು ಸುಧಾರಿಸುತ್ತದೆ
  • ಸ್ವಯಂ ಅರಿವು ಹೆಚ್ಚಿಸುತ್ತದೆ.

ಬಾಲಾಸನ (ಮಗುವಿನ ಭಂಗಿ): ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ, ನಿಮ್ಮ ಹಣೆಯನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಿ.

ಇದನ್ನೂ ಓದಿ
Image
ಜೂನ್‌ 21 ರಂದೇ ಯೋಗ ದಿನಾಚರಣೆ ಆಚರಿಸುವುದರ ಹಿಂದಿದೆ ಅಚ್ಚರಿಯ ಕಾರಣ
Image
ಯೋಗ ಅಂದ್ರೆ ಆಸನಗಳಲ್ಲ ಬದಲಿಗೆ ಕಲ್ಪನೆ, ನಿದ್ದೆ ಮತ್ತು ಸ್ಮೃತಿ
Image
ಮೊದಲ ಬಾರಿಗೆ ಯೋಗ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ
Image
ಯೋಗಾಭ್ಯಾಸ ವೇಳೆ ಈ ತಪ್ಪು ಬೇಡ; ಇಲ್ಲಿದೆ ಕೆಲ ಮುಖ್ಯ ಯೋಗ ಟಿಪ್ಸ್

ಪ್ರಯೋಜನ:

  • ಬೆನ್ನು ಮತ್ತು ಭುಜಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ
  • ಮನಸ್ಸನ್ನು ಶಾಂತಗೊಳಿಸುತ್ತದೆ
  • ವಿಶ್ರಾಂತಿ ಭಂಗಿಯಾಗಿ ಕಾರ್ಯನಿರ್ವಹಿಸುತ್ತದೆ.

ಮಾರ್ಜರಿ ಆಸನ : ಎರಡು ಕೈ ಹಾಗೂ ಕಾಲಿನ ಮೇಲೆ ನಿಂತು, ಉಸಿರನ್ನು ಒಳಗೆಳೆದುಕೊಳ್ಳುತ್ತಾ ಸೊಂಟವನ್ನು ಕೆಳಕ್ಕೆ ಇಳಿಸಿ ತಲೆಯನ್ನು ಮೇಲಕ್ಕೆತ್ತಿ ನಿಲ್ಲಬೇಕು. ಹಸುವಿನಂತಿರಬೇಕು. ನಂತರ ಉಸಿರನ್ನು ಬಿಡುತ್ತಾ ಸೊಂಟ ಮತ್ತು ಗಲ್ಲವನ್ನು ಎದೆಯೆತ್ತರಕ್ಕೆ ಎತ್ತಬೇಕು.

ಇದನ್ನಓದಿ; ವಿಶ್ವ ನಿರಾಶ್ರಿತರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ

ಪ್ರಯೋಜನಗಳು:

• ಬೆನ್ನುಮೂಳೆಯನ್ನು ನಮ್ಯವಾಗಿಸುತ್ತದೆ • ಕುತ್ತಿಗೆ ಮತ್ತು ಬೆನ್ನಿನಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ • ನಿಮ್ಮ ಉಸಿರಾಟದ ಮೇಲೆ ಗಮನಹರಿಸಲು ನಿಮಗೆ ಕಲಿಸುತ್ತದೆ.

ಕೋಬ್ರಾ ಭಂಗಿ :ಹೊಟ್ಟೆಯ ಮೇಲೆ ಮಲಗಿ, ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಕೆಳಗೆ ಇರಿಸಿ. ಉಸಿರಾಡುವಾಗ, ನಿಮ್ಮ ಎದೆಯನ್ನು ಮೇಲಕ್ಕೆತ್ತಿ, ಸೊಂಟವನ್ನು ನೆಲದ ಮೇಲೆ ಇರಿಸಿ.

ಪ್ರಯೋಜನಗಳು:

• ಬೆನ್ನನ್ನು ಬಲಪಡಿಸುತ್ತದೆ • ಮನೋಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ • ದೇಹದ ಭಂಗಿಯನ್ನು ಸುಧಾರಿಸುತ್ತದೆ.

ವೃಕ್ಷಾಸನ : ಒಂದು ಕಾಲಿನ ಮೇಲೆ ನಿಂತು, ಇನ್ನೊಂದು ಕಾಲಿನ ಹಿಮ್ಮಡಿಯನ್ನು ತೊಡೆಯ ಮೇಲೆ ಇರಿಸಿ, ಕೈಮುಗಿದು ಮೇಲಕ್ಕೆ ಎತ್ತಬೇಕು.

ಪ್ರಯೋಜನಗಳು:

• ಸಮತೋಲನ ಮತ್ತು ಗಮನವನ್ನು ಸುಧಾರಿಸುತ್ತದೆ • ಕಾಲುಗಳು ಮತ್ತು ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ • ಮಾನಸಿಕ ಶಾಂತಿಯನ್ನು ಒದಗಿಸುತ್ತದೆ.

ಉತ್ತರಾಸನ: ನೇರವಾಗಿ ನಿಂತು ಉಸಿರು ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಾಗಿ. ನೀವು ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು.

ಪ್ರಯೋಜನಗಳು:

•  ಸ್ನಾಯುಗಳು ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ • ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ • ನಮ್ಯತೆಯನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Fri, 20 June 25

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್