AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೀಡ್‌ಬ್ಯಾಕ್ ಸ್ವೀಕರಿಸುವುದರಿಂದ ಕ್ಷಮೆ ಕೇಳುವವರೆಗೆ: ಇಮೋಷನಲಿ ಮೆಚ್ಯೂರ್ ಆಗಲು ತಜ್ಞರ ಸಲಹೆ

ಮನೆಯವರು ಅಥವಾ ಸ್ನೇಹಿತರು ನಿಮ್ಮನ್ನು ಇಮೋಷನಲಿ ಇಮ್ಯಾಚೂರ್ ಎಂದು ಹೇಳುತ್ತಾರೆಯೇ? ಭಾವನಾತ್ಮಕ ಪ್ರಬುದ್ಧತೆ ಬೆಳೆಸಿಕೊಳ್ಳಲು ಕೆಲವು ಸರಳ ಅಭ್ಯಾಸಗಳು ಸಹಾಯ ಮಾಡಬಹುದು. ಹೌದು, ಕೆಲವು ಸರಳ ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಸರಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡಬಹುದು. ಈ ಬಗ್ಗೆ ಫ್ಲೋರಿಡಾದ ಥೆರಪಿಸ್ಟ್ ಜೆಫ್ರಿ ಮೆಲ್ಟ್ಜರ್ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಫೀಡ್‌ಬ್ಯಾಕ್ ಸ್ವೀಕರಿಸುವುದರಿಂದ ಕ್ಷಮೆ ಕೇಳುವವರೆಗೆ: ಇಮೋಷನಲಿ ಮೆಚ್ಯೂರ್ ಆಗಲು ತಜ್ಞರ ಸಲಹೆ
Emotional Maturity TipsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Oct 02, 2026 | 9:25 PM

Share

ಕೆಲವೊಮ್ಮೆ ನಮ್ಮ ವರ್ತನೆಯ ಬಗ್ಗೆ ಮನೆಯವರು, ಸ್ನೇಹಿತರು ಅಥವಾ ಸಹೋದ್ಯೋಗಿಗಳು ನೀನು ತುಂಬಾ ಇಮೋಷನಲಿ ಇಮ್ಯಾಚೂರ್ ಎಂದು ಹೇಳಬಹುದು. ಇಂತಹ ಮಾತು ಕೇಳಿದಾಗ ಬೇಸರವಾಗುವುದು ಸಹಜ. ಆದರೆ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ತಪ್ಪಾದಾಗ ಒಪ್ಪಿಕೊಳ್ಳುವುದು ಮತ್ತು ನಮ್ಮ ಪ್ರತಿಕ್ರಿಯೆಗಳ ಜವಾಬ್ದಾರಿ ತೆಗೆದುಕೊಳ್ಳುವುದು ಭಾವನಾತ್ಮಕ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಬಹುದು. ಫ್ಲೋರಿಡಾದ ಥೆರಪಿಸ್ಟ್ ಜೆಫ್ರಿ ಮೆಲ್ಟ್ಜರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸಲಹೆಗಳ ಪ್ರಕಾರ, ದೈನಂದಿನ ವರ್ತನೆಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಭಾವನೆಗಳನ್ನು ಹೆಚ್ಚು ಆರೋಗ್ಯಕರವಾಗಿ ನಿರ್ವಹಿಸಲು ಪ್ರಯತ್ನಿಸಬಹುದು.

ಫೀಡ್‌ಬ್ಯಾಕ್ ಸ್ವೀಕರಿಸಲು ಕಲಿಯಿರಿ

ಯಾರಾದರೂ ನಮ್ಮ ಕೆಲಸ ಅಥವಾ ವರ್ತನೆಯ ಬಗ್ಗೆ ಪ್ರತಿಕ್ರಿಯೆ ನೀಡಿದಾಗ ಅದನ್ನು ವೈಯಕ್ತಿಕ ದಾಳಿಯಂತೆ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಪ್ರತಿಯೊಂದು ಫೀಡ್‌ಬ್ಯಾಕ್‌ಗೂ ಒಪ್ಪಿಕೊಳ್ಳಬೇಕೆಂದಿಲ್ಲ. ಅದರಲ್ಲಿರುವ ಉಪಯುಕ್ತ ಅಂಶವೇನಾದರೂ ಇದೆಯೇ ಎಂದು ಮೊದಲು ಯೋಚಿಸುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಅಗೌರವ ಅಥವಾ ಅವಮಾನವನ್ನು ಸಹಿಸಿಕೊಳ್ಳುವುದು ಭಾವನಾತ್ಮಕ ಪ್ರಬುದ್ಧತೆಯ ಭಾಗವಲ್ಲ ಎಂಬುದನ್ನೂ ನೆನಪಿಡಬೇಕು.

ತಪ್ಪಾದಾಗ ಕ್ಷಮೆ ಕೇಳಿ

ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ದೌರ್ಬಲ್ಯದ ಸಂಕೇತವಲ್ಲ. ನಮ್ಮ ಮಾತು ಅಥವಾ ವರ್ತನೆಯಿಂದ ಮತ್ತೊಬ್ಬರಿಗೆ ನೋವಾಗಿದ್ದರೆ ಅದನ್ನು ಗುರುತಿಸಿ ಜವಾಬ್ದಾರಿ ತೆಗೆದುಕೊಳ್ಳುವುದು ಆರೋಗ್ಯಕರ ಸಂಬಂಧಗಳಿಗೆ ಸಹಾಯ ಮಾಡಬಹುದು. ಅಹಂಕಾರವನ್ನು ಬದಿಗಿಟ್ಟು, ನನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಲು ಕಲಿಯುವುದು ಒಳ್ಳೆಯದು.

ಇದನ್ನೂ ಓದಿ: ಕಾಫಿಗಿಂತ ಕಂಪನಿ ಮುಖ್ಯ! ಡಾಗ್ ಕ್ಯಾಫೆಗಳು ಜನಪ್ರಿಯವಾಗುತ್ತಿರುವುದು ಇದೆ ಕಾರಣಕ್ಕೆ!

ಸಮಸ್ಯೆಯನ್ನು ನೇರವಾಗಿ ಮಾತನಾಡಿ

ಯಾವುದಾದರೂ ವಿಷಯ ನಮ್ಮನ್ನು ಕಾಡುತ್ತಿದ್ದರೆ ಅದನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಶಾಂತವಾಗಿ ಮಾತನಾಡುವುದು ಇಂತಹ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡಬಹುದು. ಆದರೆ ಮಾತನಾಡುವಾಗ ಎದುರಿನ ವ್ಯಕ್ತಿಯನ್ನು ದೂಷಿಸುವ ಬದಲು, ಅವರ ವರ್ತನೆಯಿಂದ ನಮಗೆ ಹೇಗೆ ಅನಿಸಿತು ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಉತ್ತಮ.

ನಿಮ್ಮ ಪ್ರತಿಕ್ರಿಯೆಯ ಜವಾಬ್ದಾರಿ ತೆಗೆದುಕೊಳ್ಳಿ

ಕೋಪ, ಬೇಸರ ಅಥವಾ ನಿರಾಶೆ ಅನುಭವಿಸುವುದು ಸಹಜ. ಆದರೆ ಆ ಭಾವನೆಗಳ ಕಾರಣದಿಂದ ಮತ್ತೊಬ್ಬರೊಂದಿಗೆ ಕೆಟ್ಟದಾಗಿ ವರ್ತಿಸುವುದು ಸರಿಯಲ್ಲ. ಭಾವನೆಗಳನ್ನು ಒಪ್ಪಿಕೊಳ್ಳುವುದರ ಜೊತೆಗೆ ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು.

ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ

ಭಾವನಾತ್ಮಕ ಪ್ರಬುದ್ಧತೆ ಎಂದರೆ ಎಂದಿಗೂ ಕೋಪಗೊಳ್ಳದಿರುವುದು ಅಥವಾ ದುಃಖಪಡದಿರುವುದು ಎಂದಲ್ಲ. ಬದಲಿಗೆ, ನಮ್ಮ ಭಾವನೆಗಳನ್ನು ಗುರುತಿಸಿ, ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸುವುದು ಮತ್ತು ನಮ್ಮ ವರ್ತನೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಬದಲಾವಣೆಗಳು ಒಂದೇ ದಿನದಲ್ಲಿ ಆಗುವುದಿಲ್ಲ. ನಿರಂತರ ಅಭ್ಯಾಸ ಮತ್ತು ಆತ್ಮಾವಲೋಕನದ ಮೂಲಕ ನಿಧಾನವಾಗಿ ಬೆಳೆಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Fri, 2 October 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More