Guru Gobind Singh Jayanti 2022: ಇಂದು ಗುರು ಗೋಬಿಂದ್ ಸಿಂಗ್ ಜಯಂತಿ
ಸಿಖ್ ಸಮುದಾಯದ ಹತ್ತನೇ ಗುರುವಾದ ಗುರು ಗೋಬಿಂದ್ ಸಿಂಗ್ ಅವರ 355 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಗುರು ಗೋಬಿಂದ್ ಸಿಂಗ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಡಿಸೆಂಬರ್ 29 ರಂದು ಆಚರಿಸಲಾಗುತ್ತದೆ.
ಸಿಖ್(Sikh) ಸಮುದಾಯದ ಹತ್ತನೇ ಗುರುವಾದ ಗುರು ಗೋಬಿಂದ್ ಸಿಂಗ್(Guru Gobind Singh) ಅವರ 356 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಗುರು ಗೋಬಿಂದ್ ಸಿಂಗ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಡಿಸೆಂಬರ್ 29 ರಂದು ಆಚರಿಸಲಾಗುತ್ತದೆ. ಭಾರತದ ಬಿಹಾರ ರಾಜ್ಯದಲ್ಲಿನ ಪಾಟ್ನಾ ನಗರದಲ್ಲಿ ಡಿಸೆಂಬರ್ 22, 1666 ರಂದು ಜನಿಸಿದರು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ದಿನಾಂಕವು ಪ್ರತಿವರ್ಷ ಬದಲಾಗುತ್ತದೆ. ಈ ವರ್ಷ ಡಿಸೆಂಬರ್ 29 ರಂದು ಅವರ 356 ನೇ ಜನ್ಮದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನದಂದು ಗುರುದ್ವಾರಗಳನ್ನು ಅಲಂಕರಿಸಲಾಗುತ್ತದೆ. ಜೊತೆಗೆ ಸಿಖ್ರ ಸಾಂಪ್ರದಾಯದಂತೆ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಭಜನೆಗಳು, ಕೀರ್ತನೆಗಳನ್ನು ಅವರ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಅವನ ತಂದೆ ಗುರು ತೇಜ್ ಬಹದ್ದೂರ್ ರ ಶಿರಚ್ಛೇದ ಮಾಡಿದ ಮಾಡಿದ ನಂತರ ಗುರು ಗೋಬಿಂದ್ ರನ್ನು ಒಂಬತ್ತನೆಯ ವಯಸ್ಸಿನಲ್ಲಿ ಹತ್ತನೇ ಸಿಖ್ ಗುರು ಎಂದು ಪಟ್ಟಾಭಿಷೇಕವಾಯಿತು.
ಗುರು ಗೋಬಿಂದ್ ಸಿಂಗ್ ತಮ್ಮ ತಂದೆ ಗುರು ತೇಜ್ ಬಹದ್ದೂರ್‌ರ ಉತ್ತರಾಧಿಕಾರಿಯಾಗಿ 11ನವೆಂಬರ್ 1675 ರಂದು ತನ್ನ ಒಂಬತ್ತನೇ ವಯಸ್ಸಿನಲ್ಲೇ ಗುರುವಾದರು. ಕಾಲ ನಂತರದಲ್ಲಿ ಸಿಖ್ ಸಮುದಾಯವನ್ನು ಬೆಳೆಸುವಲ್ಲಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಗುರು ಗೋಬಿಂದ್ ಸಿಂಗ್ ಜಿ ಅವರ ಬೋಧನೆಗಳು ಸಿಖ್ಖರ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ತನ್ನ ಜೀವಿತಾವಧಿಯಲ್ಲಿ, ಅವರು ಮೊಘಲ್ ದೊರೆಗಳ ವಿರುದ್ಧ ನಿಂತು ಅನ್ಯಾಯದ ವಿರುದ್ಧ ಹೋರಾಡಿದರು. ಇವರು ಕೇವಲ ಗುರುವಾಗಿರದೇ ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ. ಗುರು ಗೋಬಿಂದ್ ಸಿಂಗ್‌ರು ಮಾನವತ್ವಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದ್ದರು. ಉನ್ನತ ಶಿಕ್ಷಣ ಪಡೆದಿದ್ದ, ಕುದುರೆ ಸವಾರಿಯಲ್ಲಿ ನಿಷ್ಣಾತರಾಗಿದ್ದ, ಶಸ್ತ್ರಾಸ್ತ್ರಸಜ್ಜಿತ ಹೋರಾಟದಲ್ಲಿ ನಿಷ್ಣಾತ, ಶೌರ್ಯ, ಹಾಗೂ ಧಾರಾಳ ಸ್ವಭಾವದ ವ್ಯಕ್ತಿಯಾಗಿದ್ದರು.
ದೇವರಿಗೆ ಅವರ ಸಮರ್ಪಣೆ, ಅವರ ನಿರ್ಭಯತೆ ಮತ್ತು ಜನರನ್ನು ತುಳಿತಕ್ಕೊಳಗಾಗದಂತೆ ರಕ್ಷಿಸುವ ಅವರ ಬಯಕೆಯೇ ಗುರು ಗೋಬಿಂದ್ ಸಿಂಗ್ ಜಿ ಅವರು ದೀಕ್ಷಾಸ್ನಾನ ಮಾಡಿದ ಸಂತ-ಸೈನಿಕರ ಮಿಲಿಟರಿ ಪಡೆಯಾದ ಖಾಲ್ಸಾವನ್ನು ಸ್ಥಾಪಿಸಲು ಕಾರಣವಾಯಿತು. ಖಲ್ಸಾವನ್ನು ಸಾಂಸ್ಥೀಕರಣಗೊಳಿಸುವುದರ ಜೊತೆಗೆ, ಹತ್ತನೇ ಗುರು ದಾಸಮ್ ಗ್ರಂಥವನ್ನು ರಚಿಸಿದರು. ಜೊತೆಗೆ ಗುರು ಗ್ರಂಥ ಸಾಹಿಬ್ ಅನ್ನು ಸಿಖ್ ಧರ್ಮದ ಮೂಲಭೂತ ಗ್ರಂಥವೆಂದು ನಾಮಕರಣಗೊಳಿಸಿದರು.
ಇದನ್ನೂ ಓದಿ: ಕುವೆಂಪು ಜನ್ಮದಿನ: ಇಲ್ಲಿದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಪುಟ್ಟಪ್ಪನವರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ
ಗುರು ಗೋಬಿಂದ್ ಸಿಂಗ್ ಜಿ ಅವರ ಮಾರ್ಗದರ್ಶನ ಮತ್ತು ಸ್ಫೂರ್ತಿಯ ಅಡಿಯಲ್ಲಿ, ಖಾಲ್ಸಾ ಕಟ್ಟುನಿಟ್ಟಾದ ನೈತಿಕ ಸಂಹಿತೆ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಅನುಸರಿಸಿದರು. ಆ ಸಮಯದಲ್ಲಿ ಭಾರತದಲ್ಲಿ ಮೊಘಲ್ ದೊರೆಗಳ ದಬ್ಬಾಳಿಕೆಯ ವಿರುದ್ಧ ಜನರು ಬಂಡೆದ್ದದ್ದು ಅವರ ಧೈರ್ಯದಿಂದಲೇ ಸಾಧ್ಯವಾಯಿತು ಎಂದು ಹೇಳಲಾಗುತ್ತದೆ. ಗುರು ಗೋಬಿಂದ್ ಸಿಂಗ್ ಜಿ ಆಧ್ಯಾತ್ಮಿಕ ಮತ್ತು ಮಿಲಿಟರಿ ನಾಯಕರಲ್ಲದೆ, ದೊಡ್ಡ ಸಾಹಿತ್ಯ ಕೃತಿಯನ್ನು ಬರೆದ ಪ್ರತಿಭಾನ್ವಿತ ಬರಹಗಾರರಾಗಿದ್ದರು. 1708 ರಲ್ಲಿ ಅವರ ಮರಣದ ಮೊದಲು, ಅವರು ಸಿಖ್ ಧರ್ಮದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಶಾಶ್ವತ ಸಿಖ್ ಗುರು ಎಂದು ಘೋಷಿಸಿದರು. ಗುರು ಗೋಬಿಂದ್ ಸಿಂಗ್’ರ ಜೀವನ ಹಾಗೂ ಬೋಧನೆಗಳು ಸಿಖ್ ಸಿದ್ಧಾಂತ ಹಾಗೂ ಅದನ್ನು ಪಾಲಿಸುವವರ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅವರು ಖಾಲ್ಸಾವನ್ನು ಸ್ಥಾಪಿಸಿದ್ದನ್ನು ಸಿಖ್ ಧರ್ಮದ ಇತಿಹಾಸದ ಬಹು ಪ್ರಮುಖ ಘಟನೆಗಳಲ್ಲೊಂದನ್ನಾಗಿ ಪರಿಗಣಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:23 pm, Thu, 29 December 22