AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಮಕ್ಕಳ ಆರೈಕೆ ಹೇಗೆ? ತಜ್ಞರ ಸಲಹೆ ಇಲ್ಲಿದೆ

ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಬೆಳಕಿಗೆ ಬಂದ ತಕ್ಷಣ ಅಂತಹ ಅಪ್ರಾಪ್ತ ವಯಸ್ಕರರಿಗೆ ಆರೈಕೆಯ ಅಗತ್ಯವಿದೆ. ಆರೈಕೆಯಲ್ಲಿನ ವಿಳಂಬವು ಅವರ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಏಕೆಂದರೆ ಲೈಂಗಿಕ ದೌರ್ಜನ್ಯದ ಯಾವುದೇ ಘಟನೆಗಳು ಮಕ್ಕಳಿಗೆ ಆಘಾತಕಾರಿಯಾಗಿದೆ. ಇದರ ನಂತರ ಅವರು ಆತಂಕ, ಖಿನ್ನತೆ, ಕೋಪ, ಕಾರಣವಿಲ್ಲದೆ ಅಳುವುದು ಮತ್ತು ದುಃಸ್ವಪ್ನಗಳಂತಹ ಸಮಸ್ಯೆಗಳಿಗೆ ಬಲಿಯಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಮಕ್ಕಳ ಆರೈಕೆ ಹೇಗೆ? ತಜ್ಞರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 17, 2023 | 10:28 AM

Share

ಆಗಾಗ್ಗೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇತ್ತೀಚಿಗೆ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ವರ್ತೂರಿನಲ್ಲಿ ನಡೆದಿದ್ದು, ಆಗಸ್ಟ್ 3 ರಂದು ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿರುವ 10 ವರ್ಷದ ಬಾಲಕಿಯ ಮೇಲೆ ಆಕೆಯ ಶಾಲೆಯ ಪ್ರಾಂಶುಪಾಲ ಅತ್ಯಚಾರವೆಸಗಿದ್ದು, ಇದೀಗ ಪೋಲಿಸರು ಆತನ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ರೀತಿಯಾಗಿ ಲೈಂಗಿಕ ಕಿರುಕುಳದ ಯಾವುದೇ ಘಟನೆಗಳು ಮಕ್ಕಳಿಗೆ ಅಥವಾ ಅಪ್ರಾಪ್ತರಿಗೆ ಅಘಾತಕಾರಿಯಾಗಿರುತ್ತದೆ. ಇದರ ನಂತರ ಅವರು ಆತಂಕ, ಖಿನ್ನತೆ ಕೋಪ, ಕಾರಣವಿಲ್ಲದೆ ಅಳುವುದು ಮತ್ತು ದುಃಸ್ವಪ್ನಗಳಂತಹ ಸಮಸ್ಯೆಗಳಿಗೆ ಬಲಿಯಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ನ್ಯಾಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ದಿನ 109 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಪ್ರತಿ ವರ್ಷವೂ ಈ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಮಕ್ಕಳ ಮೇಲಿನ ಯಾವುದೇ ಲೈಂಗಿಕ ದೌರ್ಜನ್ಯವೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಮತ್ತು ಇದು ಅವರ ಜೀವನದುದ್ದಕ್ಕೂ ಪರಿಣಾಮ ಬೀರುತ್ತದೆ. ಇಂತಹ ಸಮಯದಲ್ಲಿ ಮಕ್ಕಳಿಗೆ ಆರೈಕೆಯ ಅವಶ್ಯಕತೆ ಇರುತ್ತದೆ.

ಪರಿಣಾಮಗಳು:

ಮನಶಾಸ್ತ್ರಜ್ಞೆ ಅಫೀಫಾ ಕೌಸರ್ ಹೇಳುವ ಪ್ರಕಾರ ಲೈಂಗಿಕ ದೌರ್ಜನ್ಯವು ಮಗುವಿನ ಸುರಕ್ಷತೆಯ ಪ್ರಜ್ಞೆ ಮತ್ತು ಅವರ ದೇಹದ ಮೇಲಿನ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಜನರನ್ನು ನಂಬುವ, ಸಂಬಂಧಗಳನ್ನು ಬೆಸೆಯುವ ಅಥವಾ ಇತರ ವಯಸ್ಕರರಂತೆ ಅನ್ಯೋನ್ಯತೆಯನ್ನು ಬೆಳೆಸುವ ಅವರ ಸಾಮರ್ಥ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಆರೈಕೆಯು ಈ ನಂಬಿಕೆಯ ಅಂಶವನ್ನು ಪುನಸ್ಥಾಪಿಸಲು ಸಹಾಯಕವಾಗುತ್ತದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬದುಕುಳಿದವರಲ್ಲಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಸಾಮಾನ್ಯವಾಗಿ ಕಂಡುಬರುತ್ತದೆ. ಮತ್ತು ಇದರಿಂದ ಆತಂಕ, ಖಿನ್ನತೆ, ಕೋಪ, ಕಾರಣವಿಲ್ಲದೆ ಅಳುವುದು ಮತ್ತು ದುಃಸ್ವಪ್ನಗಳಂತಹ ಸಮಸ್ಯೆಗಳಿಗೆ ಈ ಅಪ್ರಾಪ್ತರು ಬಲಿಯಾಗುತ್ತಾರೆ. ಅಲ್ಲದೆ ಅವರು ಸ್ವಯಂ ದೂಷಣೆ ಅಥವಾ ಸ್ವಯಂ ಹಾನಿಯಲ್ಲಿ ತೊಡಗಬಹುದು. ಈ ಮನೋಸಾಮಾಜಿಕ ಸ್ವರೂಪವು ಲೈಂಗಿಕ ದೌರ್ಜನ್ಯದ ಸ್ವರೂಪ, ಮಗುವಿನ ಮೇಲೆ ದೌರ್ಜನ್ಯ ಮಾಡಿದವರ ನಡವಳಿಕೆ, ಮಗುವಿನ ಮನೋಧರ್ಮ, ಪೋಷಕರ ನಡವಳಿಕೆ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ”ಎಂದು ಮುಕ್ತ ಫೌಂಡೇಶನ್ ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಅಶ್ವಿನಿ ಎನ್.ವಿ ಹೇಳುತ್ತಾರೆ.

ಇದನ್ನೂ ಓದಿ:  ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಆಗುತ್ತಿದೆಯೇ? ಈ ಸಮಸ್ಯೆಗೆ ಇಲ್ಲಿದೆ ಮುಕ್ತಿ

ಚೇತರಿಕೆ ಹೇಗೆ:

ಮಕ್ಕಳು ಆಘಾತದಿಂದ ಹೊರಬರಬಹುದು ಆದರೆ ಚೇತರಿಕೆಯು ನಿಂದನೆಯ ಸ್ವರೂಪ, ವೈಯಕ್ತಿಕ ಮನೋಧರ್ಮ, ಕುಟುಂಬ ಮತ್ತು ಸಾಂಸ್ಥಿಕ ಬೆಂಬಲ ಇವೆಲ್ಲವನ್ನು ಅವಲಂಬಿಸಿರುತ್ತದೆ. ಆಘಾತದ ತೀವ್ರತೆಯು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ. ಇದು ಸಾಮಾನ್ಯ ಜೀವನವನ್ನು ನಡೆಸಲು ಕೆಲವರನ್ನು ಅಸಮರ್ಥಗೊಳಿಸಬಹುದು ಎಂದು ಹನ್ನಾ ಅವೇಜ್ ಹೇಳುತ್ತಾರೆ.

ಮಕ್ಕಳು ತಮಗಾದ ಕರಾಳ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳುವ ಪದಬಳಕೆಯ ತಿಳುವಳಿಕೆಯನ್ನು ಹೊಂದಿಲ್ಲದ ಕಾರಣ ಆಟದ ಚಿಕಿತ್ಸೆಯ ಮೂಲಕ ಅವರಿಗೆ ಚಿಕಿತ್ಸೆ ನೀಡಬೇಕು. ಆಟಿಕೆಗಳು, ರೋಲ್-ಪ್ಲೇಯಿಂಗ್ ಮತ್ತು ಇನ್ನಿತರ ಆಟಗಳನ್ನು ಬಳಸಿಕೊಂಡು ತಮಗಾದ ನೋವನ್ನು ವ್ಯಕ್ತಪಡಿಸಲು ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪ್ಲೇ-ಥೆರಪಿ ಸಹಾಯ ಮಾಡುತ್ತದೆ.

ಕುಟುಂಬದ ಬೆಂಬಲ:

ದೌರ್ಜನ್ಯಕ್ಕೊಳಗಾದ ಮಕ್ಕಳ ಆರೈಕೆಯು ಮಗುವಿನ ಕುಟುಂಬ ಮತ್ತು ಅವರ ಭಾವನಾತ್ಮಕ ಯೋಗಕ್ಷೇಮವನ್ನು ಸಹ ಒಳಗೊಂಡಿರಬೇಕು. ಅವರು ಜನರ ಅಭಿಪ್ರಾಯದ ಬಗ್ಗೆ ಚಿಂತಿಸಬಾರದು ಎಂದು ಹನ್ನಾ ಅವೇಜ್ ಲೈಂಗಿಕ ದೌರ್ಜನ್ಯದ ಸುತ್ತಲೂ ಇರುವ ಅವಮಾನದ ಬಗ್ಗೆ ಹೇಳಿದ್ದಾರೆ. ಸಮಾಜದಲ್ಲಿನ ಅಂತಹ ಮನಸ್ಥಿತಿಯು ಕುಟುಂಬವು ಅನುಭವಿಸಿದ ಆಘಾತವನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಆ ಕುಟುಂಬವು ಇತರರ ಬೆಂಬಲವನ್ನು ಪಡೆಯುವುದನ್ನು ತಡೆಯುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಮಗುವಿನ ಕುಟುಂಬಕ್ಕೂ ಮಾನಸಿಕ ಬೆಂಬಲವನ್ನು ನೀಡಬೇಕು.

ಒಟ್ಟಾರೆಯಾಗಿ ಲೈಂಗಿಕ ದೌರ್ಜನ್ಯದಿಂದ ಬದುಕುಳಿದ ಅಪ್ರಾಪ್ತರ ಆರೈಕೆಯು ಕನಿಷ್ಟ ಮಕ್ಕಳ ತಜ್ಞರ ಸಮಲೋಚನೆ, ಪ್ಲೇ-ಥೆರಪಿ, ಮತ್ತು ಆ ಮಗುವಿನ ಕುಟುಂಬಕ್ಕೆ ಬೆಂಬಲವನ್ನು ನೀಡುವುದನ್ನು ಒಳಗೊಂಡಿರಬೇಕು.

ಹೆಲ್ಪ್ಲೈನ್ :

ನಿಮಾನ್ಸ್: 080-4611007

ಮುಕ್ತ ಫೌಂಡೇಶನ್: 88614 31673

ಸಮಾರಿಟನ್ಸ್: 84229 84528

ಸಹೋದರಿ: 76397 41916

ಪರಿವರ್ತನ್: 76766 02602

ಸಹಾಯ್: 080-65000111

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ