ಮುಖದ ಅಂದ ಹೆಚ್ಚಿಸಲು ಉಳಿದ ಚಹಾ ಪುಡಿಯನ್ನು ಹೀಗೆ ಬಳಸಿ

ಟೀ ಕುಡಿಯುವ ಅಭ್ಯಾಸವಿರುವವರು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಚಹಾ ಕುಡಿಯುತ್ತಾರೆ. ಆದರೆ ಚಹಾ ಮಾಡಿದ ಮೇಲೆ ಚಹಾ ಪುಡಿಯನ್ನು ಎಸೆದು ಬಿಡುವುದು ಸರ್ವೇ ಸಾಮಾನ್ಯ. ನೀವು ಹೀಗೆ ಎಸೆಯುವ ಬದಲು ಅದನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇದು ಚರ್ಮ, ಕೂದಲಿನ ಆರೈಕೆ ಸೇರಿದಂತೆ ಮನೆ ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ಹಾಗಾದ್ರೆ ಚಹಾ ಪುಡಿಯ ಮರುಬಳಕೆಯನ್ನು ಹೇಗೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

ಮುಖದ ಅಂದ ಹೆಚ್ಚಿಸಲು ಉಳಿದ ಚಹಾ ಪುಡಿಯನ್ನು ಹೀಗೆ ಬಳಸಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 08, 2024 | 5:21 PM

ಕೆಲವರಿಗಂತೂ ಬೆಳಗ್ಗೆ ಎದ್ದ ತಕ್ಷಣ ಟೀ ಕಾಫಿ ಇರಲೇಬೇಕು. ಇನ್ನು ದಿನಕ್ಕೆ ಮೂರು ನಾಲ್ಕು ಸಲವಾದರೂ ಕಾಫಿ ಹೀರುವ ಚಟವಿರುತ್ತದೆ. ಈ ಕೆಲಸದ ಒತ್ತಡದಲ್ಲಿದ್ದಾಗ ಬಿಸಿ ಬಿಸಿ ಟೀ ಕುಡಿದರೆ ಮನಸ್ಸು ಹಾಗೂ ದೇಹ ಎರಡು ಕೂಡ ರಿಲ್ಯಾಕ್ಸ್ ಆಗುತ್ತದೆ. ಅದಲ್ಲದೇ, ನಮ್ಮಲ್ಲಿ ಹೆಚ್ಚಿನವರು ಚಹಾವನ್ನು ಸೋಸಿದ ಬಳಿಕ ಆ ಚಹಾ ಪುಡಿಯನ್ನು ಎಸೆದು ಬಿಡುತ್ತಾರೆ. ಆದರೆ ಈ ನಿರುಪಯುಕ್ತ ಚಹಾ ಪುಡಿಯೂ ವಿವಿಧ ರೀತಿಯ ಉಪಯೋಗಗಳನ್ನು ಹೊಂದಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಚಹಾ ಸೋಸಿದ ಬಳಿಕ ಚಹಾ ಪುಡಿ ಬಿಸಾಡುವ ಮುನ್ನ ಈ ಬಗ್ಗೆ ನಿಮಗೆ ತಿಳಿದಿರುವುದು ಉತ್ತಮ.

  1. ಅಡುಗೆ ಮನೆಯಲ್ಲಿ ನೊಣಗಳ ಕಾಟಗೂ ಹೆಚ್ಚಾಗಿದ್ದರೆ ಅವುಗಳನ್ನು ಓಡಿಸಲು, ಉಳಿದ ಚಹಾ ಪುಡಿಯನ್ನು ಬಳಸಿಕೊಳ್ಳಬಹುದು. ಚಹಾಪುಡಿಯನ್ನು ಎಸೆಯುವ ಬದಲು ಹತ್ತಿ ಬಟ್ಟೆಯಲ್ಲಿ ಸುತ್ತಿ ಅಡುಗೆಮನೆಯಲ್ಲಿ ಇರಿಸಿದರೆ ನೊಣಗಳು ಆ ಕಡೆ ಸುಳಿಯುವುದಿಲ್ಲ.
  2. ಮನೆಯಲ್ಲಿ ಹಳೆಯ ಪೀಠೋಪಕರಣಗಳಿಂದ ಹೊಳಪು ಕಳೆದುಕೊಂಡಿದ್ದರೆ ಬಳಸಿದ ಚಹಾ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಸ್ಪ್ರೇ ಬಾಟಲಿಯಲ್ಲಿ ಬೆರೆಸಿ ಪೀಠೋಪಕರಣಗಳ ಮೇಲೆ ಸ್ಪ್ರೇ ಮಾಡುವುದರಿಂದ ಕಳೆಗುಂದಿದ ಉಪಕರಣಗಳು ಹೊಳೆಯುತ್ತದೆ.
  3. ನಿರುಪಯುಕ್ತ ಚಹಾ ಪುಡಿಯೂ ಕೂದಲಿಗೆ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಚಹಾ ಪುಡಿಯನ್ನು ಎಸೆಯುವ ಬದಲು, ಕುದಿಸಿ ಈ ನೀರನ್ನು ಕಂಡಿಷನರ್ ಆಗಿ ಬಳಸಬಹುದು. ಇದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.
  4. ಚಹಾ ಪುಡಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಉಳಿದ ಚಹಾ ಪುಡಿಯನ್ನು ತೊಳೆದು, ಬಿಸಿ ನೀರಿನಲ್ಲಿ ಕುದಿಸಿ ಗಾಯದ ಜಾಗಕ್ಕೆ ಹಚ್ಚಿ ನಂತರ ತೊಳೆಯುವುದರಿಂದ ಗಾಯವು ಮಾಗುತ್ತದೆ.
  5. ಚಹಾ ಸೋಸಿದ ಬಳಿಕ ಉಳಿದ ಚಹಾ ಪುಡಿಯನ್ನು ಬಿಸಾಡುವ ಬದಲು ಇದರಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ ಇದರಲ್ಲಿ ಪಾತ್ರೆಯನ್ನು ತೊಳೆದರೆ ಎಣ್ಣೆಯ ಕಲೆಗಳು ಮಾಯವಾಗಿ ಪಾತ್ರೆಯೂ ಸ್ವಚ್ಛವಾಗುವುದಲ್ಲದೆ ಫಳಫಳನೇ ಹೊಳೆಯುತ್ತದೆ.
  6. ಚರ್ಮವು ಟ್ಯಾನ್ ಆದಾಗ ಉಳಿದ ಚಹಾ ಪುಡಿಯನ್ನು ಬಿಸಿಲಿನಲ್ಲಿ ಒಣಗಿಸಿ ರುಬ್ಬಿ ಅದಕ್ಕೆ ಸೋಡಾ ಮತ್ತು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮೊಣಕಾಲುಗಳು, ಮೊಣಕೈಗಳು, ಕುತ್ತಿಗೆ ಸೇರಿದಂತೆ ಚರ್ಮಕ್ಕೆ ಅನ್ವಯಿಸುವುದರಿಂದ ಕಲೆಗಳನ್ನು ನಿವಾರಿಸಿ ಆ ಜಾಗವನ್ನು ಬಿಳುಪಾಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?