International Olympic Day 2024: ಅಂತಾರಾಷ್ಟ್ರೀಯ ಒಲಿಂಪಿಕ್ ದಿನವು ಶುರುವಾದದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ
ದೈಹಿಕ ಚಟುವಟಿಕೆಗಳಲ್ಲಿ ಒಂದಾದ ಆಟಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಒಲಿಂಪಿಕ್ ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಒಲಂಪಿಕ್ ಆರಂಭವಾಯಿತೇಂದರೆ ಎಲ್ಲರಿಗೂ ಈ ಬಗ್ಗೆ ಕುತೂಹಲ ಹೆಚ್ಚು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ. ಅಂತಾರಾಷ್ಟ್ರೀಯರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾ ಕೂಟ ಇದಾಗಿದೆ. ಎಲ್ಲಾ ದೇಶಗಳ ನಡುವೆ ನಡೆಯುವ ಪಂದ್ಯವಾಗಿರುವ ಕಾರಣ ಎಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಈ ಒಲಂಪಿಕ್ ಪಂದ್ಯದ ಮಹತ್ವ ಹಾಗೂ ಈ ಕ್ರೀಡೆಯಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಇತಿಹಾಸ:
1948ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಈ ದಿನವನ್ನು ಆಚರಿಸಲು ಮುಂದಾಯಿತು. ಹೀಗಾಗಿ ಜೂನ್ 23, 1948ರಂದು ಒಲಿಂಪಿಕ್ ದಿನವನ್ನು ಉದ್ಘಾಟನೆಗೊಂಡಿತು. ಈ ಸಮಾರಂಭದಲ್ಲಿ ಗ್ರೀಸ್, ಆಸ್ಟ್ರೀಯಾ ಪೋರ್ಚುಗಲ್, ಕೆನಡಾ, ಗ್ರೇಟ್ ಬ್ರಿಟನ್, ಸ್ವಿಟ್ಜರ್ಲೆಂಡ್, ವೆನೆಜುವೆಲ್ಲಾ, ಉರುಗ್ವೆ, ಬೆಲ್ಚಿಯುಂ ದೇಶಗಳು ಭಾಗವಹಿಸಿದ್ದವು. ಆದರೆ ಅದಕ್ಕೂ ಮುಂಚಿತವಾದ ಇತಿಹಾಸವನ್ನು ಒಲಂಪಿಕ್ ಹೊಂದಿದೆ. ಈ ಒಲಿಂಪಿಕ್ ಕ್ರೀಡಾಕೂಟದ ಮೂಲ ಗ್ರೀಸ್ ದೇಶವಾಗಿದೆ. ಹೌದು, ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೂರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡುತ್ತಾ ಬರಲಾಗಿತ್ತಾದರೂ ಕ್ರಮೇಣವಾಗಿ ನಿಂತು ಹೋಯಿತು. ಆದಾದ ಬಳಿಕ 1859 ರಲ್ಲಿ ಮತ್ತೆ ಈ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು. ಒಲಿಂಪಿಕ್ ಕ್ರೀಡಾಕೂಟವನ್ನು ಇವಾಂಜೆಲಾಸ್ ಝಪ್ಪಾನ್ ಎಂಬುವವರೂ ಪ್ರಾಯೋಜಿಸಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ರಾಜಾಧಾನಿಯಾದ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ ಮಾಡಲಾಯಿತು. 1894ರಲ್ಲಿ ಪ್ಯಾರಿಸ್‌ನ ಸೊರ್ಬೊನೆಯಲ್ಲಿ ಈ ದಿನದಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಸ್ಥಾಪಿಸಲಾಯಿತು. ಆದರೆ ಇದೀಗ ಪ್ರತಿ ವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಥೀಮ್:
ಈ ಬಾರಿ ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು “ವೈವಿಧ್ಯತೆಯಲ್ಲಿ ಏಕತೆ” ಎನ್ನುವ ಥೀಮ್ ನಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯತೆ, ಜನಾಂಗೀಯತೆ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲಾ ವರ್ಗದ ಜನರನ್ನು ಒಂದುಗೂಡಿಸುವ ಕ್ರೀಡೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರಗಳ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಬೆಳೆಸುವುದಾಗಿದೆ.
ಇದನ್ನೂ ಓದಿ: ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನದ ಕುರಿತು ನೀವು ತಿಳಿಯಬೇಕಾದ ವಿಷಯಗಳಿವು
ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮಹತ್ವ ಹಾಗೂ ಆಚರಣೆ:
ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮುಖ್ಯ ಉದ್ದೇಶವೇ, ಒಲಂಪಿಕ್ ಕ್ರೀಡೆಯಲ್ಲಿ ಹೆಚ್ಚಿನ ಜನರನ್ನು ಭಾಗವಹಿಸುವಂತೆ ಪ್ರೇರೇಪಿಸುವುದು. ಅದರೊಂದಿಗೆ ಒಲಿಂಪಿಕ್ ಕ್ರೀಡಾಕೂಟಗಳ ಮೂಲ ಮತ್ತು ಪ್ರಾಮುಖ್ಯತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ದಿನದಂದು ಹಲವಾರು ನ್ಯಾಷನಲ್ ಒಲಿಂಪಿಕ್ ಕಮಿಟಿಗಳು ಪ್ರದರ್ಶನಗಳನ್ನು ಆಯೋಜಿಸುತ್ತವೆ. ಪ್ರಪಂಚದಾದ್ಯಂತ ಕ್ರೀಡಾಪಟುಗಳು ವಿವಿಧ ಕ್ರೀಡೆಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಭಾಗವಹಿಸುವ ಮೂಲಕ ಆಚರಿಸುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:19 am, Sun, 23 June 24