AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನದ ವೀಕೆಂಡ್‌ ಪ್ರವಾಸಕ್ಕೆ ಇದು ಒಳ್ಳೆಯ ಪ್ಯಾಕೇಜ್: ಕೆಎಸ್‌ಟಿಡಿಸಿಯಿಂದ ಕಡಿಮೆ ದರದಲ್ಲಿ ಜಲಪಾತಕ್ಕೆ ಟೂರ್

ಬೆಂಗಳೂರಿನ ಜಂಜಾಟದಿಂದ ದೂರವಿರಲು ಬಯಸುವಿರಾ? KSTDCಯು 1480 ರೂ,ಗೆ ಆಕರ್ಷಕ ಒಂದು ದಿನದ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಟು ಕೃಷ್ಣಗಿರಿ ಅಣೆಕಟ್ಟು ಮತ್ತು ಹೊಗೇನಕಲ್ ಜಲಪಾತದ ಸೌಂದರ್ಯ ಸವಿಯಬಹುದು. ಈ ಕಡಿಮೆ ವೆಚ್ಚದ ಪ್ರಕೃತಿಮಯ ಪ್ರವಾಸಕ್ಕೆ ಯಶವಂತಪುರದಲ್ಲಿ ಬುಕ್ ಮಾಡಿ, ಅನಾಯಾಸವಾಗಿ ಮಜಾ ಮಾಡಿ.

ಒಂದು ದಿನದ ವೀಕೆಂಡ್‌ ಪ್ರವಾಸಕ್ಕೆ ಇದು ಒಳ್ಳೆಯ ಪ್ಯಾಕೇಜ್: ಕೆಎಸ್‌ಟಿಡಿಸಿಯಿಂದ ಕಡಿಮೆ ದರದಲ್ಲಿ ಜಲಪಾತಕ್ಕೆ ಟೂರ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 20, 2026 | 12:12 PM

Share

ಬೆಂಗಳೂರು, ಜು.20: ವೀಕೆಂಡ್‌ನಲ್ಲಿ ಬೆಂಗಳೂರಿನ ಜಂಜಾಟದಿಂದ ದೂರ ಉಳಿದು ಪ್ರಕೃತಿಯ ಮಡಿಲಲ್ಲಿ ಒಂದು ದಿನ ಕಳೆಯಲು ಬಯಸುವ ಪ್ರವಾಸಿಗರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಹೊರಟು ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ಮತ್ತು ಹೊಗೇನಕಲ್ ಜಲಪಾತಕ್ಕೆ (Hogenakkal Falls) ಕೇವಲ 1,480 ರೂ ದರದಲ್ಲಿ ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ.

ಪ್ರವಾಸದ ದಿನಗಳು

ಪ್ರತಿ ವಾರ ರೂಟಿನ್ ಆಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಪ್ರವಾಸ ಲಭ್ಯವಿರುತ್ತದೆ. ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ (KSTDC) ಬುಕಿಂಗ್ ಕೌಂಟರ್​​ನಲ್ಲಿ ಬಸ್​​ ವ್ಯವಸ್ಥೆ ಮಾಡಲಾಗಿರುತ್ತದೆ. ಬೆಳಗ್ಗೆ 6.00 ಗಂಟೆಗೆ ಹೊರಡಬೇಕಾಗುತ್ತದೆ. ತಲಾ ಒಬ್ಬರಿಗೆ 1480 ದರವನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ; ಕಡಿಮೆ ವೆಚ್ಚದಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಿ: ಪ್ರವಾಸಿಗರಿಗಾಗಿ KSTDC ಬಿಡುಗಡೆ ಮಾಡಿದೆ ಅತ್ಯಾಕರ್ಷಕ ಟೂರ್ ಪ್ಯಾಕೇಜ್

ಒಂದು ದಿನದ ಪ್ರವಾಸದ ಸಂಪೂರ್ಣ ವೇಳಾಪಟ್ಟಿ: 

ಸಮಯ  ಭೇಟಿ ನೀಡುವ ಸ್ಥಳ
ಬೆಳಿಗ್ಗೆ 06:00 ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಬಸ್ ನಿರ್ಗಮನ.
ಬೆಳಿಗ್ಗೆ 09:00 – 09:30 ಮಾರ್ಗಮಧ್ಯೆ ರುಚಿಕರವಾದ ಉಪಹಾರಕ್ಕಾಗಿ (Breakfast) ಬಿಡುವು.
ಬೆಳಿಗ್ಗೆ 10:00 – 11:00 ಸುಂದರವಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ವೀಕ್ಷಣೆ ಮತ್ತು ಭೇಟಿ.
ಮಧ್ಯಾಹ್ನ 01:00 – 02:00 ಮಧ್ಯಾಹ್ನದ ಊಟದ (Lunch) ಸಮಯ.
ಮಧ್ಯಾಹ್ನ 02:00 – ಸಂಜೆ 05:00 ಭಾರತದ ನಯಾಗರಾ ಎಂದೇ ಪ್ರಸಿದ್ಧಿಯಾಗಿರುವ ಹೊಗೇನಕಲ್ ಜಲಪಾತದ (Hogenakkal Falls) ಅದ್ಭುತ ವೀಕ್ಷಣೆ.
ಸಂಜೆ 05:00 – ರಾತ್ರಿ 09:00 ಹೊಗೇನಕಲ್‌ನಿಂದ ಹೊರಟು ಮರಳಿ ಬೆಂಗಳೂರಿಗೆ ಆಗಮನ ಮತ್ತು ಪ್ರವಾಸ ಮುಕ್ತಾಯ.

ಕಡಿಮೆ ವೆಚ್ಚದಲ್ಲಿ, ಯಾವುದೇ ಆಯಾಸವಿಲ್ಲದೆ ಒಂದೇ ದಿನದಲ್ಲಿ ಸುಂದರ ಜಲಪಾತ ಹಾಗೂ ಅಣೆಕಟ್ಟನ್ನು ಕಣ್ತುಂಬಿಕೊಳ್ಳಲು ಈ ವೀಕೆಂಡ್ ಪ್ಯಾಕೇಜ್ ಅತ್ಯುತ್ತಮ ಅವಕಾಶವಾಗಿದೆ. ಪ್ರವಾಸದ ಹೆಚ್ಚಿನ ವಿವರ ಹಾಗೂ ಬುಕಿಂಗ್‌ಗಾಗಿ ಸಾರ್ವಜನಿಕರು ಕೆಎಸ್‌ಟಿಡಿಸಿ ಅಧಿಕೃತ ವೆಬ್‌ಸೈಟ್ ಅಥವಾ ಯಶವಂತಪುರ ಕೌಂಟರ್ ಅನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?