AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips : ಮಕ್ಕಳ ವಯಸ್ಸು 13 ದಾಟುವ ಮೊದಲೇ ಪೋಷಕರು ಈ ವಿಷಯಗಳನ್ನು ತಪ್ಪದೇ ಕಲಿಸಿ ಕೊಡಿ

ಮಕ್ಕಳ ಸಂಪೂರ್ಣ ವ್ಯಕ್ತಿತ್ವ ರೂಪಿಸುವುದು ಕೂಡ ತಂದೆ ತಾಯಿಗಳ ಜವಾಬ್ದಾರಿಯಾಗಿದೆ. ಈ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಬೆಳೆಸುವ ರೀತಿಯಲ್ಲಿ ಸ್ವಲ್ಪ ಬದಲಾವಣೆಗಳಾದರೂ ಕೂಡ ಅದು ಮಗುವಿನ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಮಕ್ಕಳು ಹದಿಹರೆಯದ ವಯಸ್ಸಿಗೆ ಬರುವ ಮೊದಲು ಪ್ರತಿಯೊಬ್ಬ ಪೋಷಕರು ಈ ಕೆಲವು ವಿಷಯಗಳನ್ನು ಮಕ್ಕಳಿಗೆ ಕಲಿಸಿಕೊಡಲೇ ಬೇಕಂತೆ. ಹಾಗಾದ್ರೆ ಮಕ್ಕಳಿಗೆ ಕಲಿಸಿ ಕೊಡಬೇಕಾದ ಜೀವನ ಪಾಠಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Parenting Tips : ಮಕ್ಕಳ ವಯಸ್ಸು 13 ದಾಟುವ ಮೊದಲೇ ಪೋಷಕರು ಈ ವಿಷಯಗಳನ್ನು ತಪ್ಪದೇ ಕಲಿಸಿ ಕೊಡಿ
Parenting Tips
ಸಾಯಿನಂದಾ
| Edited By: |

Updated on: Nov 08, 2024 | 8:42 PM

Share

ಮಕ್ಕಳನ್ನು ಹೆತ್ತರೇ ಸಾಕಾಗುವುದಿಲ್ಲ. ಅವರ ಬೆಳೆವಣಿಗೆಯ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಬೇಕು. ಆದರೆ ಈಗಿನ ಕಾಲದಲ್ಲಿ ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರಾಗಿರುವ ಕಾರಣ ಮಕ್ಕಳಿಗೆ ಏನನ್ನೂ ಹೇಳಿಕೊಡಲು ಸಮಯವೇ ಇಲ್ಲ. ಇದರಿಂದ ಮಗುವಿನ ಭವಿಷ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಲ್ಲದೇ, ಬಾಲ್ಯದಲ್ಲಿ ಮಕ್ಕಳಿಗೆ ಏನೇ ಕಲಿಸಿದರೂ ಆ ವಿಷಯಗಳನ್ನು ಬೇಗನೇ ಕಲಿತುಕೊಂಡು ಬಿಡುತ್ತಾರೆ. ಹೀಗಾಗಿ ಮಗುವಿಗೆ 13 ವರ್ಷ ತುಂಬುವ ಮೊದಲೇ ಜೀವನಕ್ಕೆ ಅಗತ್ಯವಿರುವ ಈ ವಿಷಯಗಳ ಬಗ್ಗೆ ಕಲಿಸಿಕೊಡುವುದು ಬಹಳ ಮುಖ್ಯ.

ಹಣದ ನಿರ್ವಹಣೆ ಬಗ್ಗೆ ತಿಳಿಸಿ :

ಈಗಿನ ಮಕ್ಕಳಿಗೆ ಹಣದ ಬೆಲೆ ಗೊತ್ತಿಲ್ಲ, ಹೀಗಾಗಿ ಈ ಬಗ್ಗೆ ಹೇಳಿಕೊಡುವುದು ಬಹಳ ಮುಖ್ಯ. ಭವಿಷ್ಯಕ್ಕಾಗಿ ಹಣವನ್ನು ಹೇಗೆ ಉಳಿತಾಯ ಮಾಡುವುದು, ಹಣವನ್ನು ಹೇಗೆ ಖರ್ಚು ಮಾಡುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿಕೊಡಬೇಕು. ಇದರಿಂದ ಮಕ್ಕಳು ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ತಪ್ಪುತ್ತದೆ ಹಾಗೂ ಹಣ ನಿರ್ವಹಣೆ ಹೇಗೆ ಮಾಡುವುದೆನ್ನುವ ಬಗ್ಗೆ ತಿಳಿಯುತ್ತದೆ.

ಸ್ವಚ್ಛತೆಯ ಬಗ್ಗೆ ಹೇಳಿ ಕೊಡಿ :

ಮಕ್ಕಳ ವಯಸ್ಸು 13 ತುಂಬುವ ಮೊದಲೇ ಸ್ವಚ್ಛತೆಯ ಬಗ್ಗೆ ಹೇಳಿಕೊಡುವುದು ಅತ್ಯವಶ್ಯಕ. ಮನೆಯನ್ನು ಹೇಗೆ ಅಚ್ಚು ಕಟ್ಟಾಗಿ ಇಡಬೇಕು ಹಾಗೂ ಶುಚಿಗೊಳಿಸುವುದನ್ನು ಕಲಿಸಿಕೊಡಬೇಕು. ಅದಲ್ಲದೇ ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿ ಹೇಳಬೇಕು. ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಟ್ಟರೆ ಮನೆ ಹಾಗೂ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಸಮಯ ನಿರ್ವಹಣೆ ಬಗ್ಗೆ ತಿಳಿಸಿ :

ಈಗಿನ ಕಾಲದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಸಾಲುವುದಿಲ್ಲ. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಮಗುವಿಗೆ ಸಮಯ ನಿರ್ವಹಣೆಯ ತಿಳಿಸಿಕೊಡಿ. ಯಾವ ಕೆಲಸಗಳಿಗೆ ಎಷ್ಟು ಆದ್ಯತೆ ನೀಡಬೇಕು, ಇರುವ ಸ್ವಲ್ಪ ಸಮಯದಲ್ಲಿ ಕೆಲಸವನ್ನು ಹೇಗೆ ಮಾಡಿ ಮುಗಿಸುವುದು ಹಾಗೂ ವೇಳಾ ಪಟ್ಟಿ ರಚಿಸುವುದು ಹೇಗೆ ಈ ಕುರಿತು ಹೇಳಿಕೊಟ್ಟರೆ, ಮಕ್ಕಳು ಬೆಳೆಯುತ್ತ ದೊಡ್ಡವರಾಗುತ್ತಿದ್ದಂತೆ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತಾರೆ.

ಭಾವನೆಗಳನ್ನು ನಿಯಂತ್ರಿಸುವುದು :

ಕೆಲ ಮಕ್ಕಳು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ. ಇಲ್ಲವಾದರೆ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವುದೇ ಇಲ್ಲ. ಮಗುವಿನ ವಯಸ್ಸು 13 ದಾಟುವ ಮುನ್ನ ಈ ಬಗ್ಗೆ ತಿಳಿಸಿಕೊಡಬೇಕಾದದ್ದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ಈ ಸೂಕ್ಷ್ಮ ವಿಷಯಗಳು ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಸನ್ನಿವೇಶಕ್ಕೆ ತಕ್ಕಂತೆ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಜವಾಬ್ದಾರಿಗಳನ್ನು ನಿಭಾಯಿಸುವುದು :

ಸಣ್ಣ ವಯಸ್ಸಿನಲ್ಲಿ ಮಗುವಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಂತೆ ಹೇಳಿ, ಅದರ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿ ಬಿಡಿ. ಒಂದು ವೇಳೆ ಜವಾಬ್ದಾರಿಯನ್ನು ನಿಭಾಯಿಸುವ ವೇಳೆ ಏನಾದರೂ ತಪ್ಪಾದರೆ ಕ್ಷಮೆ ಕೇಳಬೇಕು ಎಂದು ಹೇಳುವುದನ್ನು ಮರೆಯದಿರಿ. ಮಾಡಿದ ತಪ್ಪನ್ನು ತಿದ್ದಿಕೊಂಡು ಮತ್ತೊಮ್ಮೆ ಕೆಲಸದ ವಿಚಾರದಲ್ಲಿ ಆ ತಪ್ಪುಗಳು ಆಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಈ ಜೀವನ ಪಾಠದಿಂದ ದೊಡ್ಡವರಾಗುತ್ತಿದ್ದಂತೆ ಅವರವರ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸ್ವತಃ ಅವರಿಗೆ ತಿಳಿಸಿದಂತಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಮೋದಿ ಬಹಳ ಸುಂದರ ವ್ಯಕ್ತಿ; ಗೆಳೆಯನನ್ನು ಹೊಗಳಿದ ಟ್ರಂಪ್
ಮೋದಿ ಬಹಳ ಸುಂದರ ವ್ಯಕ್ತಿ; ಗೆಳೆಯನನ್ನು ಹೊಗಳಿದ ಟ್ರಂಪ್
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ