ರಕ್ಷಾ ಬಂಧನ 2023: ನೂಲು ಹುಣ್ಣಿಮೆ ಹಬ್ಬಕ್ಕೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಕುಂಬಳಕಾಯಿ ಹಲ್ವಾ
Pumpkin Halwa: ಇನ್ನೇನು ರಕ್ಷಾಬಂಧನ ಹಬ್ಬ ಬರಲಿದೆ. ಈ ಬಾರಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಬೇಕೆಂದು ಬಯಸುತ್ತಿದ್ದೀರಾ? ಹಾಗಿದ್ದರೆ ಈ ಬಾರಿಯ ಹಬ್ಬವನ್ನು ವಿಶೇಷವಾಗಿಸಬೇಕೆಂದರೆ ನಿಮ್ಮ ಕೈಯಾರೆ ಪ್ರೀತಿಯ ಸಹೋದರನಿಗಾಗಿ ಸಿಹಿಯನ್ನು ತಯಾರಿಸಿ. ಅದರಲ್ಲೂ ವಿಭಿನ್ನವಾದ ಸಿಹಿಯನ್ನು ಮಾಡಲು ಇಚ್ಛಿಸಿದರೆ ನೀವು ಕುಂಬಳಕಾಯಿ ಹಲ್ವಾ ಮಾಡಬಹುದು. ಈ ಒಂದು ಸಿಹಿ ರುಚಿಕರವಾದುದು ಮಾತ್ರವಲ್ಲದೆ ಆರೋಗ್ಯಕರವಾಗಿದೆ. ಕುಂಬಳಕಾಯಿ ಹಲ್ವಾ ತಯಾರಿಸುವುದು ಹೇಗೆ ಎಂಬ ಪಾಕವಿಧಾನದ ಮಾಹಿತಿ ಇಲ್ಲಿದೆ.

ಅಣ್ಣ ತಂಗಿಯರ ಪ್ರೀತಿಯ ಪ್ರತೀಕವಾದ ರಕ್ಷಾಬಂಧನ ಹಬ್ಬ ಇನ್ನೇನು ಬರಲಿದೆ. ಈ ಹಬ್ಬದ ಸಂದರ್ಭದಲ್ಲಿ ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆಯನ್ನು ಕಟ್ಟಿ ಸಿಹಿಯನ್ನು ತಿನ್ನಿಸುವ ವಾಡಿಕೆಯಿದೆ. ನೀವು ಈ ಬಾರಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಬೇಕೆಂದು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕೈಯಾರೆ ಪ್ರೀತಿಯ ಸಹೋದರನಿಗಾಗಿ ಸಿಹಿಯನ್ನು ತಯಾರಿಸುವ ಮೂಲಕ ಹಬ್ಬವನ್ನು ವಿಶೇಷವಾಗಿಸಿ. ಪಾಯಸ, ಕ್ಯಾರೆಟ್ ಹಲ್ವಾ ಕೇಸರಿ ಬಾತ್, ಖೀರ್ ಇದೆಲ್ಲಾ ಮಾಮೂಲು ಸಿಹಿ ತಿನಿಸುಗಳು, ಇದರ ಬದಲು ಏನಾದರೂ ವಿಭಿನ್ನವಾದ ಸಿಹಿ ತಯಾರಿಸಬೇಕೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಕುಂಬಳಕಾಯಿ ಹಲ್ವಾ ಮಾಡಬಹುದು. ಈ ಒಂದು ಸಿಹಿ ರುಚಿಕರವಾದುದು ಮಾತ್ರವಲ್ಲದೆ ಆರೋಗ್ಯಕರವಾಗಿದೆ. ಹಾಗಾದರೆ ಟೇಸ್ಟಿ ಕುಂಬಳಕಾಯಿ ಹಲ್ವಾ ಮಾಡುವುದು ಹೇಗೆಂದು ನೋಡೋಣ.
ಕುಂಬಳಕಾಯಿ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು:
1 ಕೆಜಿ ಕುಂಬಳಕಾಯಿ
1 1/2 ದಾಲ್ಚಿನ್ನಿ
2 ಚಮಚ ಹುರಿದ ತೆಂಗಿನಕಾಯಿ ತುರಿ
ಸಕ್ಕರೆ (ನಿಮ್ಮ ಸಿಹಿಗೆ ಅನುಗುಣವಾಗಿ)
ತುಪ್ಪ
ಒಣದ್ರಾಕ್ಷಿ
ಗೋಡಂಬಿ
ಬಾದಾಮಿ
ಇದನ್ನೂ ಓದಿ:ಉಡುಪಿಯ ಪ್ರಸಿದ್ಧ ಕಾಶಿ ಹಲ್ವಾ ಮಾಡುವ ವಿಧಾನ ಇಲ್ಲಿದೆ
ಕುಂಬಳಕಾಯಿ ಹಲ್ವಾ ತಯಾರಿಸುವ ವಿಧಾನ:
ಕುಂಬಳಕಾಯಿ ಹಲ್ವಾ ಮಾಡಲು ಮೊದಲು ಕುಂಬಳಕಾಯಿಯನ್ನು ತುಂಡರಿಸಿ ಅದರ ಸಿಪ್ಪೆಯನ್ನು ಮತ್ತು ಬೀಜವನ್ನು ತೆಗೆದು ನಂತರ ಒಂದು ಪಾತ್ರೆಯಲ್ಲಿ ತುಂಡರಿಸಿದ ಕುಂಬಳಕಾಯಿ ಹಾಕಿ ಅದಕ್ಕೆ ನೀರು ಮತ್ತು ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ ಅದು ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ನಂತರ ಅದು ಬೆಂದ ಬಳಿಕ ನೀರನ್ನು ಸೋಸಿ ಕುಂಬಳಕಾಯಿಯನ್ನು ಮ್ಯಾಶ್ ಮಾಡಿ. ಈಗ ಒಂದು ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ಬಳಿಕ ಮ್ಯಾಶ್ ಮಾಡಿದ ಕುಂಬಳಕಾಯಿಯನ್ನು ಸೇರಿಸಿ. ಆ ಮಿಶ್ರಣ ದಪ್ಪವಾಗುವವರೆಗೆ ಅದನ್ನು ಬೆರೆಸುತ್ತಾ ಇರಿ, ನಂತರ ಅದರ ಬಣ್ಣ ಬದಲಾದಾಗ ಅದಕ್ಕೆ ಸಕ್ಕರೆ ಹಾಕಿ ಬೇಯಿಸಿಕೊಳ್ಳಿ . ಕೊನೆಯಲ್ಲಿ ಹುರಿದ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ನಿಮ್ಮ ಇಷ್ಟದ ಪಿಸ್ತಾ, ಬಾದಮಿಯಂತಹ ನಟ್ಸ್ ಗಳನ್ನು ಸಹ ಸೇರಿಸಬಹುದು. ನಂತರ ಒಂದು ಬೌಲ್ ಗೆ ಸಿದ್ಧವಾದ ಹಲ್ವಾವನ್ನು ಹಾಕಿ ಅದರ ಮೇಲೆ ನಟ್ಸ್ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಅಲಂಕರಿಸಿ ನಿಮ್ಮ ಪ್ರೀತಿಯ ಸಹೋದರನಿಗೆ ನೀಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:47 pm, Fri, 25 August 23




