AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cold Water Bath: ಬೆಳಗ್ಗೆ ತಣ್ಣೀರು ಸ್ನಾನ ಮಾಡುವುದರಿಂದಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಅಪ್ಪಿ ತಪ್ಪಿ ಒಂದು ದಿನ ತಣ್ಣೀರು ಸ್ನಾನ ಮಾಡು ಎಂದರೂ ಅಯ್ಯೋ ತಣ್ಣೀರು ಸ್ನಾನವೇ ಬೇಡಪ್ಪ ಎಂದು ಮೂಗುಮುರಿಯುವವರೇ ಹೆಚ್ಚು.

Cold Water Bath: ಬೆಳಗ್ಗೆ ತಣ್ಣೀರು ಸ್ನಾನ ಮಾಡುವುದರಿಂದಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ
Cold Water Bath
TV9 Web
| Updated By: ನಯನಾ ರಾಜೀವ್|

Updated on: Jul 22, 2022 | 5:23 PM

Share

ಅಪ್ಪಿ ತಪ್ಪಿ ಒಂದು ದಿನ ತಣ್ಣೀರು ಸ್ನಾನ ಮಾಡು ಎಂದರೂ ಅಯ್ಯೋ ತಣ್ಣೀರು ಸ್ನಾನವೇ ಬೇಡಪ್ಪ ಎಂದು ಮೂಗುಮುರಿಯುವವರೇ ಹೆಚ್ಚು. ಬೆಳಗ್ಗೆ ಎದ್ದ ಕೂಡಲೇ ತಣ್ಣೀರು ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನೀವು ಅರಿತರೆ ನಿತ್ಯವೂ ತಣ್ಣೀರು ಸ್ನಾನವೇ ಮಾಡುತ್ತೇನೆ ಎಂದು ಹೇಳುತ್ತೀರಿ.

ಬೆಳಗ್ಗೆ ಎದ್ದ ಬಳಿಕ ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ದೇಹದ ಜತೆಗೆ ಮನಸ್ಸು ಕೂಡ ಫ್ರೆಶ್ ಆಗುತ್ತದೆ. ಹೇಗೆ ಕಾಫಿಯು ಬೆಳಗಿನ ಜಡತ್ವವನ್ನು ಹೋಗಲಾಡಿಸಿ ಇಡೀ ದಿನವನ್ನು ಪ್ರೆಶ್​ ಆಗಿ ಕಳೆಯಲು ಅನುವು ಮಾಡಿಕೊಡುತ್ತದೋ ಹಾಗೆಯೇ ತಣ್ಣೀರು ಸ್ನಾನ ಕೂಡ ನಿಮ್ಮ ಮನಸ್ಸನ್ನು ಆಹ್ಲಾದಕರವಾಗಿಸುತ್ತದೆ.

ಸಾಮಾನ್ಯವಾಗಿ ಬೆಳಗ್ಗೆ ಚಳಿ ಅಥವಾ ತಂಪಾದ ವಾತಾವರಣವಿರುವ ಕಾರಣ ತಣ್ಣೀರು ಸ್ನಾನವನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದರೆ ತಣ್ಣೀರು ಸ್ನಾನವು ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿಸುವ ಜತೆಗೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಕೂಡ ನೆರವಾಗುತ್ತದೆ.

ತಣ್ಣನೆಯ ಸ್ನಾನದಿಂದ ಪ್ರಯೋಜನಗಳೇನಿವೆ?

– ಬೆಳಿಗ್ಗೆ ಶಕ್ತಿಯನ್ನು ಹೆಚ್ಚಿಸುತ್ತದೆ – ರಕ್ತಪರಿಚಲನೆಯನ್ನು ಸುಧಾರಿಸಿ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ – ಚಯಾಪಚಯವನ್ನು ಹೆಚ್ಚಿಸಿ. ದುಗ್ಧರಸ ಶುದ್ಧೀಕರಣವನ್ನು ಹೆಚ್ಚಿಸುತ್ತದೆ – ಮನಸ್ಥಿತಿ ಮತ್ತು ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ – ದೀರ್ಘಕಾಲದ ನೋವನ್ನು ಕಡಿಮೆ ಮಾಡುತ್ತದೆ – ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ – ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ

“ತಣ್ಣನೆಯ ಶವರ್‌ನಲ್ಲಿ ಸ್ನಾನ ಮಾಡುವುದು 300mg ಕೆಫೀನ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಿದ್ರೆಯಿಂದ ಸಂಪೂರ್ಣವಾಗಿ ಎಚ್ಚರಗೊಳ್ಳುವಂತೆ ಮಾಡುತ್ತದೆ.

ಪ್ರತಿ ದಿನ ಹತ್ತು ಸೆಕೆಂಡುಗಳ ಕಾಲ ನಿಮ್ಮ ಶವರ್ ಅನ್ನು ಬಿಸಿಯಿಂದ ತಣ್ಣಗೆ ಆನ್ ಮಾಡಿ ಮತ್ತು ನಂತರ ಒಂದು ನಿಮಿಷದವರೆಗೆ ಇರಿಸಿ, ಹಾಗೆಯೇ ಅಭ್ಯಾಸ ರೂಢಿಸಿಕೊಳ್ಳಿ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್