ಲಾಕ್ಡೌನ್ ದಿನಗಳಲ್ಲಿ ಮಕ್ಕಳಿಗಾಗಿ ತಯಾರಿಸಬಹುದಾದ ಆರೋಗ್ಯಕರ ತಿನಿಸು ಹೀಗಿರಬೇಕು
ತಾಜಾವಾಗಿ ಖರೀದಿಸಿದ ಹಣ್ಣು ಅಥವಾ ತರಕಾರಿಯಿಂದ ಮಕ್ಕಳಿಗೆ ಸೂಪ್ ಅಥವಾ ಇನ್ನಿತರ ತಿನಿಸು ಮಾಡಿಕೊಡುವುದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತಾರೆ.
ಕೊರೊನಾ ಸೋಂಕು ದೇಶದಾದ್ಯಂತ ಹರಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಶಾಲೆಗಳು ಮತ್ತು ಶಿಶುಪಾಲನಾ ಕೇಂದ್ರಗಳು ಮುಚ್ಚಿವೆ. ಇದು ಪೋಷಕರ ಮೇಲೆ ಹೆಚ್ಚಿನ ಹೊರೆ ಉಂಟುಮಾಡಿದ್ದು, ಮಗುವಿನ ಆರೈಕೆ, ಬೆಳಿಗ್ಗೆ ತಿಂಡಿಗೆ ಏನು? ಮನೆಯವರ ಆರೋಗ್ಯವನ್ನು ಕಾಪಾಡಲು ಹೇಗೆ ಮುತುವರ್ಜಿ ವಹಿಸಬೇಕು ಎಂಬ ಹತ್ತಾರು ಗೊಂದಲಕ್ಕೆ ಸಿಲುಕುವಂತಾಗಿದೆ. ಇನ್ನು ಲಾಕ್ಡೌನ್ ಆರ್ಥಿಕ ಸಮಸ್ಯೆಯನ್ನು ಉಂಟುಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಹೋಗುವುದು ಕೂಡ ಅಸಾಧ್ಯವಾಗಿದೆ.
ಹೀಗಿರುವಾಗ ಹೆಚ್ಚಿನ ಪೋಷಕರು ತಮ್ಮ ಕುಟುಂಬಕ್ಕಾಗಿ ಮೊದಲೇ ಸಿದ್ಧಪಡಿಸಿದ (ಫ್ರಂಚ್ಫ್ರೈಸ್)ಆಹಾರಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಇದು ತ್ವರಿತ ಮತ್ತು ಕಡಿಮೆ ವೆಚ್ಚದ ಊಟವನ್ನು ತಯಾರಿಸುವಲ್ಲಿ ಸಹಕಾರಿಯಾಗಿದೆ ಎನ್ನುವುದಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಅಷ್ಟು ಸಮಂಜಸವಲ್ಲ. ಹೀಗಾಗಿ ಕೊರೊನಾದಂತಹ ಈ ಸಂದರ್ಭದಲ್ಲಿ ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ಹೆಚ್ಚು ಆರೋಗ್ಯಕರ, ಪೌಷ್ಠಿಕ ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಹಾರ ಪದ್ಧತಿಯನ್ನು ತಿಳಿದುಕೊಳ್ಳುವುದು ಸೂಕ್ತ ಎನಿಸಿಕೊಳ್ಳುತ್ತದೆ.
5 ಆರೋಗ್ಯಕರ ಆಹಾರ ಪದ್ಧತಿಗಳು:
1. ಹಣ್ಣು ಮತ್ತು ತರಕಾರಿ ಸೇವನೆಯನ್ನು ಮುಂದುವರಿಸಿ ತಾಜಾ ತರಕಾರಿಗಳನ್ನು ಖರೀದಿಸುವುದು, ಸಂಗ್ರಹಿಸುವುದು ಮತ್ತು ಬೇಯಿಸುವುದು ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸವಾಲಾಗಿ ಪರಿಣಮಿಸುತ್ತದೆ. ವಿಶೇಷವಾಗಿ ಮನೆಯ ಹೊರಗಿನ ಪ್ರಯಾಣದ ಮಿತಿಯನ್ನು ಸೂಚಿಸಲಾಗಿದೆ. ಆದರೆ ಸಾಧ್ಯವಾದಗಲೆಲ್ಲಾ, ಮಕ್ಕಳು ತಮ್ಮ ಆಹಾರದಲ್ಲಿ ಇನ್ನೂ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವಂತೆ ನೊಡಿಕೊಳ್ಳುವುದು ಬಹಳ ಮುಖ್ಯ.
ತಾಜಾ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾದಾಗಲೆಲ್ಲ ಈ ಅಭ್ಯಾಸವನ್ನು ಮುಂದುವರಿಸಿ,. ಜತೆಗೆ ಹಣ್ಣು ಮತ್ತು ತರಕಾರಿಯ ಪರಿಮಳ ಮತ್ತು ಪೋಷಕಾಂಶ ಇರುವ ರೀತಿಯಲ್ಲಿ ಅವುಗಳನ್ನು ಸಂಗ್ರಹಿಸಿ ಇಡಿ. ತಾಜಾವಾಗಿ ಖರೀದಿಸಿದ ಹಣ್ಣು ಅಥವಾ ತರಕಾರಿಯಿಂದ ಮಕ್ಕಳಿಗೆ ಸೂಪ್ ಅಥವಾ ಇನ್ನಿತರ ತಿನಿಸು ಮಾಡಿಕೊಡುವುದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತಾರೆ. ಅಲ್ಲದೆ ಸೂಪ್ಗಳನ್ನು ತಯಾರು ಮಾಡಿ ಬೇಕಾದಾಗ ಮತ್ತೆ ಅವುಗಳನ್ನು ಬಿಸಿ ಮಾಡಿ ಕೂಡ ಕೊಡಬಹುದು.
2. ತಾಜಾ ಉತ್ಪನ್ನಗಳು ಲಭ್ಯವಿಲ್ಲದಿದ್ದಾಗ ಒಣಗಿದ ಅಥವಾ ಪೂರ್ವಸಿದ್ಧ ಉತ್ಪನ್ನಗಳನ್ನು ಬಳಸಿ ತಾಜಾ ಉತ್ಪನ್ನಗಳು ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಆದರೆ ಅದು ಲಭ್ಯವಿಲ್ಲದಿದ್ದಾಗ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಪೂರ್ವಸಿದ್ಧ ಬೀನ್ಸ್ ಮತ್ತು ಕಡಲೆ ಹಿಟ್ಟನ್ನು ತಿಂಗಳು ಅಥವಾ ವರ್ಷಗಳವರೆಗೆ ಸಂಗ್ರಹಿಸಬಹುದು ಮತ್ತು ಅನೇಕ ವಿಧಗಳಲ್ಲಿ ಇದನ್ನು ಊಟದ ಜತೆ ಸೇರಿಸಬಹುದು. ಪೂರ್ವಸಿದ್ಧ ಎಣ್ಣೆಯುಕ್ತ ಮೀನುಗಳಾದ ಸಾರ್ಡೀನ್ಗಳು, ಬಂಗಡೆ ಮತ್ತು ಸಾಲ್ಮನ್ಗಳಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಹಲವಾರು ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿ ಇದೆ. ಇವುಗಳನ್ನು ಸ್ಯಾಂಡ್‌ವಿಚ್‌ಗಳು, ಸಲಾಡ್‌ಗಳು ಅಥವಾ ಪಾಸ್ಟ್ ಫುಡ್ಗಳಲ್ಲಿ ಕೂಡ ಬಳಸಬಹುದಾಗಿದೆ.
ಟೊಮೆಟೊದಂತಹ ಪೂರ್ವಸಿದ್ಧ ತರಕಾರಿಗಳು ತಾಜಾ ಉತ್ಪನ್ನಗಳಿಗಿಂತ ಕಡಿಮೆ ಪ್ರಮಾಣದ ಜೀವಸತ್ವಗಳನ್ನು ಹೊಂದಿರುತ್ತವೆ. ಆದರೆ ತಾಜಾ ಉತ್ಪನ್ನಗಳು ಅಥವಾ ತರಕಾರಿಗಳು ಇರದಿದ್ದಾಗ ಇವುಗಳನ್ನು ಆಹಾರ ಪದ್ಧತಿಯಲ್ಲಿ ಪರ್ಯಾಯವಾಗಿ ಬಳಸಬಹುದಾಗಿದೆ.
ಒಣಗಿದ ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳಾದ ಬಟಾಣಿ, ಅಕ್ಕಿ, ಬಾರ್ಲಿ, ಜೋಳ ಪೌಷ್ಠಿಕಾಂಶಯುಕ್ತವಾಗಿದೆ. ಇವುಗಳು ದೀರ್ಘಕಾಲೀನ ಆಯ್ಕೆಗಳಾಗಿದ್ದು, ಅವು ರುಚಿಕರ, ಕೈಗೆಟುಕುವ ಮತ್ತು ಆರೋಗ್ಯಯುತವಾಗಿದ್ದು, ದೇಹಕ್ಕೆ ಹೆಚ್ಚು ಪುಷ್ಟಿ ನೀಡುತ್ತದೆ. ಹಾಲು ಅಥವಾ ನೀರಿನಿಂದ ಬೇಯಿಸಿದ ಓಟ್ಸ್ ಅತ್ಯುತ್ತಮ ಉಪಾಹಾರ ಆಯ್ಕೆಯಾಗಿದ್ದು, ಮೊಸರು, ಕತ್ತರಿಸಿದ ಹಣ್ಣುಗಳು ಅಥವಾ ಒಣದ್ರಾಕ್ಷಿಗಳನ್ನು ಮಿಶ್ರಣ ಮಾಡಿ ಕೂಡ ಉತ್ತಮ ಆಹಾರ ತಯಾರಿಸಬಹುದು.
3. ಆರೋಗ್ಯಕರ ತಿಂಡಿಗಳನ್ನು ಸಂಗ್ರಹಿಸಿಯಿಡಿ ಮಕ್ಕಳು ಹೆಚ್ಚಾಗಿ ಬೆಳಗ್ಗಿನ ವೇಳೆ ಲಘುವಾಗಿ ತಿಂಡಿ ಸೇವಿಸುತ್ತಾರೆ. ಮಕ್ಕಳಿಗೆ ಸಿಹಿತಿಂಡಿ ಅಥವಾ ಹೆಚ್ಚು ಉಪ್ಪಾದ ತಿಂಡಿಗಳನ್ನು ನೀಡುವ ಬದಲು, ಬೀಜಗಳು, ಚೀಸ್, ಮೊಸರು (ಸಿಹಿಗೊಳಿಸದ), ಕತ್ತರಿಸಿಟ್ಟ ಅಥವಾ ಒಣಗಿದ ಹಣ್ಣುಗಳು, ಬೇಯಿಸಿದ ಮೊಟ್ಟೆಗಳು ಅಥವಾ ಸ್ಥಳೀಯವಾಗಿ ಲಭ್ಯವಿರುವ ಇತರ ಆರೋಗ್ಯಕರ ತಿನಿಸುಗಳನ್ನು ಆಯ್ಕೆ ಮಾಡಿಕೊಳ್ಳಿ. ಇವುಗಳು ಪೌಷ್ಟಿಕ, ಹೆಚ್ಚು ಉಪಯುಕ್ತ, ಮತ್ತು ಜೀವಿತಾವಧಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ.
4. ಸಂಸ್ಕರಿಸಿದ ಆಹಾರವನ್ನು ಮಿತಿಗೊಳಿಸಿ ತಾಜಾ ಉತ್ಪನ್ನಗಳನ್ನು ಬಳಸುವುದು ಯಾವಾಗಲೂ ಸಾಧ್ಯವಾಗದಿದ್ದರೂ, ಸಂಸ್ಕರಿಸಿದ ಆಹಾರವನ್ನು ತಿನ್ನುವ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ. ಸಿದ್ಧ ಊಟ, ತಿಂಡಿಗಳು ಮತ್ತು ಸಿಹಿತಿಂಡಿಗಳಲ್ಲಿ ಹೆಚ್ಚಾಗಿ ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಾಂಶ ಹೆಚ್ಚಿರುತ್ತವೆ. ನೀವು ಸಂಸ್ಕರಿಸಿದ ಆಹಾರವನ್ನು ಖರೀದಿಸಿದರೆ, ಲೇಬಲ್ ಅನ್ನು ನೋಡಿ ಅದು ಅವಧಿ ಮುಗಿದ ಆಹಾರ ವಸ್ತುವೇ ಎನ್ನುವುದರ ಬಗ್ಗೆ ಗಮನ ಇರಲಿ. ಸಿಹಿ ಪಾನೀಯಗಳನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ಬದಲಿಗೆ ಸಾಕಷ್ಟು ನೀರು ಕುಡಿಯಿರಿ. ನಿಂಬೆ ರಸ, ಸೌತೆಕಾಯಿ ತುಂಡುಗಳು ಅಥವಾ ಹಣ್ಣುಗಳನ್ನು ನೀರಿಗೆ ಸೇರಿಸುವುದರಿಂದ ರುಚಿ ಹೆಚ್ಚುತ್ತದೆ ಮತ್ತು ಆರೋಗ್ಯವನ್ನು ಕಾಪಾಡಲು ಇದು ಉತ್ತಮ ಮಾರ್ಗವಾಗಿದೆ.
5. ನಿಮ್ಮ ಕುಟುಂಬಕ್ಕಾಗಿ ನೀವು ಸಿದ್ಧಪಡಿಸುವ ಅಡುಗೆಯನ್ನು ಹೆಚ್ಚು ರುಚಿಕರ ಮತ್ತು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳಿ ಒಟ್ಟಿಗೆ ಅಡುಗೆ ಮಾಡುವುದು ಮತ್ತು ತಿನ್ನುವುದು ಆರೋಗ್ಯಕರ ದಿನಚರಿಯನ್ನು ರಚಿಸಲು ಸಹಾಯ ಮಾಡುತ್ತದೆ. ಜತೆಗೆ ಮನೆಯವರೊಂದಿಗಿನ ಸಂಬಂಧವನ್ನು ಬಲಪಡಿಸಲು ಮತ್ತು ಆನಂದದಿಂದ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಉತ್ತಮ ಮಾರ್ಗವಾಗಿದೆ. ಸಾಧ್ಯವಾದಲ್ಲೆಲ್ಲಾ ಮಕ್ಕಳನ್ನು ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ. ಸಣ್ಣ ಮಕ್ಕಳಾಗಿದ್ದರೆ ಆಹಾರ ಪದಾರ್ಥಗಳನ್ನು ತೊಳೆಯಲು ಅಥವಾ ಸೊಪ್ಪು, ತರಕಾರಿಯನ್ನು ಬೆರ್ಪಡಿಸಲು ಸೇರಿಸಿಕೊಳ್ಳಿ ಇದರಿಂದ ಆಹಾರ ಪದ್ಧತಿಯ ಬಗ್ಗೆ ಮಕ್ಕಳಿಗೂ ಸ್ವಲ್ಪ ಜ್ಞಾನ ಲಭಿಸಿದಂತಾಗುತ್ತದೆ. ಇದರ ಜತೆಗೆ ನಿಗದಿತ ಸಮಯಕ್ಕೆ ಊಟ ಮಾಡಿ ಇದು ಒತ್ತಡವನ್ನು ದೂರ ಮಾಡಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ:
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ; ಕೊರೊನಾ ಸಮಯದಲ್ಲಿ ದೇಹದ ಸದೃಢತೆ ಮುಖ್ಯ