AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯಿಂದ ಇರುವೆಗಳನ್ನು ತೊಡೆದುಹಾಕಲು ಈ ಮನೆಮದ್ದುಗಳು ಸಖತ್‌ ಪ್ರಯೋಜನಕಾರಿ

ಬೇಸಿಗೆಯ ಸಮಯದಲ್ಲಿ ಇರುವೆಗಳ ಕಾಟ ತುಸು ಹೆಚ್ಚೇ ಇರುತ್ತದೆ. ಅದರಲ್ಲೂ ಅಡುಗೆಮನೆಯ ಮೂಲೆ ಮೂಲೆಗಳಲ್ಲೂ ರಾಶಿ ರಾಶಿ ಇರುವೆಗಳಿರುತ್ತವೆ. ಇವುಗಳನ್ನು ತೊಡೆದು ಹಾಕಲು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಅಷ್ಟೊಂದು ಸೂಕ್ತವಲ್ಲ. ಹೀಗಿರುವಾಗ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಇರುವೆಗಳ ಕಾಟದಿಂದ ಮುಕ್ತಿ ಪಡೆಯಿರಿ.

ಅಡುಗೆ ಮನೆಯಿಂದ ಇರುವೆಗಳನ್ನು ತೊಡೆದುಹಾಕಲು ಈ ಮನೆಮದ್ದುಗಳು ಸಖತ್‌ ಪ್ರಯೋಜನಕಾರಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Apr 19, 2026 | 6:30 PM

Share

ಸೊಳ್ಳೆ, ಜಿರಳೆ, ಇಲಿಗಳ ಕಾಟ ಇರಿವಂತೆ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇರುವೆಗಳ  (ants) ಕಾಟ ಕೂಡ ಇದ್ದೇ ಇರುತ್ತದೆ. ಅದರಲ್ಲೂ ಈ ಬೇಸಿಗೆಯ ಸಮಯದಲ್ಲಿ ಇರುವೆಗಳ ಓಡಾಟ ತೀರಾ ಹೆಚ್ಚಿರುತ್ತವೆ. ಇವು ಆರೋಗ್ಯಕ್ಕೆ ಅಂತಹ ಹೇಳಿಕೊಳ್ಳುವಂತಹ ಹಾನಿ ಮಾಡದೇ ಇದ್ದರೂ ಸಹ, ಮನೆಯೊಳಗೆ ಸೇರಿಕೊಂಡರೆ ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ಇವುಗಳನ್ನು ತೊಡೆದುಹಾಕಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಉತ್ಪನ್ನಗಳು ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಕೆಲವೊಂದು ಮನೆಮದ್ದುಗಳನ್ನು ಬಳಸುವುದು ಸೂಕ್ತ.

ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳ ಸಹಕಾರಿ:

ವಿನೆಗರ್‌ ಸ್ಪ್ರೇ:  ಇರುವೆಗಳನ್ನು ತೊಡೆದು ಹಾಕಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ವಿನೆಗರ್ ಸ್ಪ್ರೇ. ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಯಾರಿಸಿದ ದ್ರಾವಣವು ಇರುವೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿದೆ. ಇರುವೆಗಳಿರುವ ಜಾಗಕ್ಕೆ ವಿನೆಗರ್‌ ಸ್ಪ್ರೇ ಸಿಂಪಡಿಸಿ. ಹೆಚ್ಚುವರಿಯಾಗಿ, ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ವಿನೆಗರ್ ಸೇರಿಸುವುದರಿಂದ ಇರುವೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವಿನೆಗರ್‌ನ ಬಲವಾದ ವಾಸನೆಯು ಇರುವೆಗಳ ಇಷ್ಟವಾಗುವುದಿಲ್ಲ. ಅವು ಅಲ್ಲಿಂದ ಓಡಿ ಹೋಗುತ್ತವೆ.

ಕರಿಮೆಣಸು: ಇರುವೆಗಳನ್ನು ಹಿಮ್ಮೆಟ್ಟಿಸಲು ಕರಿಮೆಣಸು ಕೂಡ ಒಂದು ಅತ್ಯುತ್ತಮ ಮನೆಮದ್ದು. ಇರುವೆಗಳು ಕಟುವಾದ ಮತ್ತು ಬಲವಾದ ವಾಸನೆಗಳಿಂದ ಆದಷ್ಟು ದೂರ ಓಡುತ್ತವೆ.  ಹೀರುವಾಗ ಅಡುಗೆಮನೆಯಲ್ಲಿ ಅಥವಾ ಮನೆಯ ಯಾವುದೇ ಮೂಲೆಯಲ್ಲಿ ಇರುವೆಗಳ ಹಿಂಡು ಇದ್ದರೆ, ಅಲ್ಲಿ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ.  ಇದರಿಂದ ಪರಿಣಾಮಕಾರಿಯಾಗಿ ಇರುವೆಗಳನ್ನು ತೊಡೆದುಹಾಕಬಹುದು.

ದಾಲ್ಚಿನ್ನಿ: ದಾಲ್ಚಿನ್ನಿ ಇರುವೆಗಳನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಇರುವೆಗಳು ಇದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆಗಳು ಹೆಚ್ಚು ಕಾಣಿಸಿಕೊಳ್ಳುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ.  ಇಲ್ಲದಿದ್ದರೆ ಸಣ್ಣ ಹತ್ತಿಯ ತುಂಡುಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಇಡಬಹುದು. ಈ ಮನೆಮದ್ದು ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ತುಂಬಾ ಪರಿಣಾಮಕಾರಿ.

ಇದನ್ನೂ ಓದಿ: ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ

ನಿಂಬೆ ರಸ: ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಅತಿಯಾಗಿ ಕಾಣಿಸಿಕೊಳ್ಳುವ ಇರುವೆಗಳನ್ನು ತೊಡೆದುಹಾಕಲು ನಿಂಬೆ ರಸವು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ ಗುಣಗಳು ಇರುವೆಗಳ ವಾಸನೆಯ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತವೆ, ಅವು ಮತ್ತೆ ಆ ಕಡೆ ಬರದಂತೆ ತಡೆಯುತ್ತವೆ. ಇರುವೆಗಳು ಹೆಚ್ಚಾಗಿ ಬರುವ ಪ್ರದೇಶಗಳಲ್ಲಿ ನಿಂಬೆ ರಸವನ್ನು ಸಿಂಪಡಿಸಿ. ಇದಲ್ಲದೆ, ನಿಂಬೆ ಸಿಪ್ಪೆಗಳನ್ನು ಅಡುಗೆಮನೆಯ ಕ್ಯಾಬಿನೆಟ್‌ಗಳು, ಬಾಗಿಲುಗಳು ಅಥವಾ ಕಿಟಕಿಗಳ ಬಳಿ ಇಡುವುದರಿಂದ ಇರುವೆಗಳನ್ನು ದೂರವಿಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us