Women’s Equality Day 2023: ಮಹಿಳಾ ಸಮಾನತೆ ದಿನವನ್ನು ಏಕೆ ಆಚರಿಸಲಾಗುತ್ತದೆ? ಆಚರಣೆ ಹಿಂದಿನ ಇತಿಹಾಸ

ಸಮಾಜ ಎಷ್ಟೇ ಮುಂದುವರೆದಿದ್ದರೂ, ಪರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಇನ್ನೂ ಇದೆ. ಸಮಾಜದಲ್ಲಿ ಇಂದಿಗೂ ಹೆಣ್ಣಿಗೆ ಪರುಷರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಸಿಕ್ಕಿಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಗೌರವ, ಸಮಾನ ಹಕ್ಕುಗಳನ್ನು ನೀಡುವ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 26 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿನ್ನೆಲೆ ಏನು ಎಂಬುದನ್ನು ನೋಡೋಣ.

Women's Equality Day 2023: ಮಹಿಳಾ ಸಮಾನತೆ ದಿನವನ್ನು ಏಕೆ ಆಚರಿಸಲಾಗುತ್ತದೆ? ಆಚರಣೆ ಹಿಂದಿನ ಇತಿಹಾಸ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2023 | 7:52 AM

ಹಿಂದಿನಿಂದಲೂ ಈ ಸಮಾಜದಲ್ಲಿ ಪುರುಷರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಬರಲಾಗುತ್ತಿದೆ. ಇಂದು ಈ ಸಮಾಜ ಎಷ್ಟೇ ಮುಂದುವರೆದಿದ್ದರೂ, ಒಬ್ಬ ಮಹಿಳೆ ತಾನು ಏನನ್ನಾದರೂ ಸಾಧಿಸಿ ತೋರಿಸುತ್ತೇನೆ ಎಂದರೆ, ಆಕೆಯನ್ನು ಪ್ರೋತ್ಸಾಹಿಸುವವರಿಗಿಂತ ಟೀಕಿಸುವವರೇ ಹೆಚ್ಚು. ಸಮಾಜ ಬದಲಾದರೂ ಜನರ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಪುರುಷರಂತೆ ಮಹಿಳೆಯರು ಕೂಡಾ ಸಮಾನರು ಎಂದು ಹೆಚ್ಚಿನವರು ಒಪ್ಪಿಕೊಂಡಿಲ್ಲ. ಮಹಿಳೆಯರು ಪುರುಷರಂತೆ ಕಾನೂನುಬದ್ಧವಾಗಿ ಸಮಾನ ಹಕ್ಕುಗಳನ್ನು ಪಡೆದಿರಬಹುದು, ಆದರೆ ಸಮಾಜದಲ್ಲಿ ಅವರ ಸ್ಥಾನಮಾನದ ಬಗ್ಗೆ ಅಸಮಾನತೆ ಇದೆ. ಪುರುಷರಿಗೆ ಹೋಲಿಸಿದರೆ ಹೆಣ್ಣಿನ ಬಗ್ಗೆ ದ್ವಂದ್ವ ಮನೋಭಾವನೆ ಜನರ ಮನಸಿನಲ್ಲಿದೆ. ಸಮಾಜದಲ್ಲಿ ಇಂದಿಗೂ ಹೆಣ್ಣಿಗೆ ಪರುಷರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶವನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡುವ ಮತ್ತು ಸಮಾಜದಲ್ಲಿ ಅವರ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 26 ರಂದು ಮಹಿಳಾ ಸಮಾನತೆಯ ದಿನವನ್ನು ಆಚರಿಸಲಾಗುತ್ತದೆ. ಈ ಮಹಿಳಾ ಸಮಾನತೆಯ ಆಚರಣೆ ಮೊದಲು ಯಾವ ದೇಶದಲ್ಲಿ ಪ್ರಾರಂಭವಾಯಿತು. ಈ ಆಚರಣೆಯ ಹಿಂದಿನ ಇತಿಹಾಸದ ಕುರಿತ ಮಾಹಿತಿ ಇಲ್ಲಿದೆ.

ಮಹಿಳಾ ಸಮಾನತೆಯ ದಿನದ ಆಚರಣೆಯ ಹಿಂದಿನ ಇತಿಹಾಸ:

ಮಹಿಳಾ ಸಮಾನತೆಯ ದಿನವನ್ನು ಅಮೇರಿಕಾದಲ್ಲಿ ಮೊದಲು ಆಚರಿಸಲಾಯಿತು. ಅಮೇರಿಕಾದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಈ ನಿಟ್ಟಿನಲ್ಲಿ 1853ರಲ್ಲಿ ಅಮೇರಿಕಾದಲ್ಲಿ ಮಹಿಳೆಯರ ಹಕ್ಕುಗಳ ಹೋರಾಟ ಆರಂಭವಾಯಿತು. ಮಹಿಳೆಯರ ಸಮಾನತೆಗಾಗಿ ಸುದೀರ್ಘ 50 ವರ್ಷಗಳ ಕಾಲ ಈ ಹೋರಾಟ ನಡೆಯಿತು. 1920 ರ ವೇಳೆಯಲ್ಲಿ ಅಮೇರಿಕಾದಲ್ಲಿ ಸಮಾನತೆಗಾಗಿ ಮಹಿಳೆಯರ ಮುಷ್ಕರ ಹಾಗೂ ಸಮಾನ ಹಕ್ಕುಗಳ ತಿದ್ದುಪಡಿಗಾಗಿ ಹೋರಾಟವು ಉಲ್ಬಣಗೊಂಡಾಗ ಅದೇ ವರ್ಷ ಆಗಸ್ಟ್ 26 ರಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಅದರ ನಂತರ 1971 ರಲ್ಲಿ ಅಮೇರಿಕಾದ ಸಂಸತ್ತು ಆಗಸ್ಟ್ 26 ನ್ನು ಮಹಿಳಾ ಸಮಾನತೆಯ ದಿನವಾಗಿ ಆಚರಿಸಲು ಘೋಷಿಸಿತು, ನಂತರ ಈ ದಿನವನ್ನು ಪ್ರಪಂಚದ ಎಲ್ಲಾ ದೇಶಗಳಲ್ಲೂ ಆಚರಿಸಲಾಯಿತು.

ಇದನ್ನೂ ಓದಿ: ವಿಶ್ವ ಛಾಯಾಗ್ರಹಣ ದಿನದ ಇತಿಹಾಸ, ಮಹತ್ವ ಏನು? ಫೋಟೋಗ್ರಾಫಿಯ ಈ ವಿಚಾರಗಳು ಗೊತ್ತಾ?

ಮಹಿಳಾ ಸಮಾನತೆ ದಿನದ ಆಚರಣೆಯ ಮಹತ್ವ ಮತ್ತು ಉದ್ದೇಶ:

ಮಹಿಳೆಯರು ಮಾಡಿದ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು, ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು, ಮತ್ತೊಂದೆಡೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ತಾರತಮ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ. ಅಲ್ಲದೆ ಈ ದಿನದಂದು ಪ್ರಪಂಚದ ಅನೇಕ ದೇಶಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾಗಿ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಮಹಿಳೆಯರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಹಿಳಾ ಸಂಘಟನೆಗಳು ಅಭಿಯಾನವನ್ನು ನಡೆಸುತ್ತವೆ. ಮುಖ್ಯವಾಗಿ ಲಿಂಗ ಸಮಾನತೆಯನ್ನು ಸಾಧಿಸುವ ಸಲುವಾಗಿ ಈ ದಿನವು ಕಾರ್ಯನಿರ್ವಹಿಸುತ್ತದೆ. ಜೊತೆಗೆ ರಾಜಕೀಯ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸಲು ಅವಕಾಶವನ್ನು ನೀಡುತ್ತದೆ.

ಈ ಬಾರಿಯ ಮಹಿಳಾ ಸಮಾನತೆ ದಿನದ ಥೀಮ್:

ಈ ವರ್ಷದ ಮಹಿಳಾ ಸಮಾನತೆಯ ದಿನದ ಥೀಮ್ #Embrace Equity. ಈ ಥೀಮ್ 2021ರಿಂದ 2026ರ ವರೆಗಿನ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ. ಇದು ಲಿಂಗ ಸಮಾನತೆಯನ್ನು ಸಾಧಿಸುವ ಪ್ರಾಮುಖ್ಯತೆಯನು ಒತ್ತಿ ಹೇಳುತ್ತದೆ. ಹಾಗೂ ಇದು ಆರ್ಥಿಕ ಪ್ರಗತಿಗೆ ನಿರ್ಣಾಯಕ ಮಾತ್ರವಲ್ಲದೆ ಮೂಲಭೂತ ಮಾನವ ಹಕ್ಕುಗಳಿಗೂ ಅವಶ್ಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್