AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stain Removal Tips: ಬಟ್ಟೆಗಳ ಮೇಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ

ಬಟ್ಟೆಯಲ್ಲಿ ಒಂದು ಸಣ್ಣ ಕಲೆಯಾದರೆ ಅದನ್ನು ತೆಗೆದುಹಾಕುವುದು ತುಂಬಾ ಕಷ್ಟ. ಆ ಬಟ್ಟೆಯನ್ನು ಜಾಸ್ತಿ ಉಜ್ಜಿ ತೊಳೆದರೆ, ಇದರಿಂದಾಗಿ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಿರುವಾಗಿ ನೀವು ಈ ಕೆಲವು ಸರಳ ವಿಧಾನಗಳ ಮೂಲಕ ಬಟ್ಟೆಗಳಲ್ಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

Stain Removal Tips: ಬಟ್ಟೆಗಳ ಮೇಲಿನ  ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ
ಮಾಲಾಶ್ರೀ ಅಂಚನ್​
| Edited By: |

Updated on: Nov 09, 2023 | 5:41 AM

Share

ಬಟ್ಟೆಯ ಮೇಲೆ ಆಗಾಗ್ಗೆ ಕಲೆಗಳಾಗುತ್ತಿರುತ್ತವೆ. ಆದರೆ ಆ ಕಲೆಗಳು ಬಟ್ಟೆಯ ಬಣ್ಣವನ್ನು ಮತ್ತು ಅಂದವನ್ನು ಹಾಳುಮಾಡಿಬಿಡುತ್ತವೆ. ಬಟ್ಟೆಯಲ್ಲಿ ಒಂದು ಸಣ್ಣ ಕಲೆಯಾದರೂ ಅದನ್ನು ತೆಗೆದುಹಾಕುವುದು ಬಹಳ ಕಷ್ಟ. ಅದರಲ್ಲೂ ವಿಶೇಷವಾಗಿ ಬಿಳಿ ಬಟ್ಟೆಯ ಮೇಲೆ ಕಲೆಗಳು ಕಾಣಿಸಿಕೊಂಡರೆ ಅವುಗಳನ್ನು ತೆಗೆದುಹಾಕುವುದೇ ಒಂದು ದೊಡ್ಡ ತಲೆನೋವಾಗಿರುತ್ತದೆ. ಬಟ್ಟೆಯನ್ನು ಜಾಸ್ತಿ ಉಜ್ಜಿ ತೊಳೆದರೆ, ಇದರಿಂದ ಆ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಕೆಲವು ಸರಳ ವಿಧಾನಗಳ ಮೂಲಕ ಬಟ್ಟೆಗಳಲ್ಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಅದು ಹೇಗೆ ಎಂಬುದನ್ನು ನೋಡೋಣ.

ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕುವ ಸುಲಭ ವಿಧಾನ:

ಶಾಯಿ ಕಲೆಗಳನ್ನು ತೆಗೆದುಹಾಕುವ ವಿಧಾನ:

ಬಟ್ಟೆಯಲ್ಲಿ ಶಾಯಿ ಕಲೆಗಳಾದರೆ, ಅದನ್ನು ಸ್ವಚ್ಛಗೊಳಿಸಲು ನೀವು ಡೆಟಾಲ್ ಬಳಸಬಹುದು. ಇದಕ್ಕಾಗಿ ಹತ್ತಿ ಉಂಡೆಯನ್ನು ಡೆಟಾಲ್ನಲ್ಲಿ ನೆನೆಸಿ, ಕಲೆಯಿರುವ ಸ್ಥಳದಲ್ಲಿ ಅದನ್ನು ಉಜ್ಜಿ, ಬಟ್ಟೆ ತೊಳೆಯಿರಿ. ಇದರಿಂದ ಕಲೆಯನ್ನು ಸುಲಭವಾಗಿ ತೆಗೆದುಹಾಕಬಹುದು. ಅಥವಾ ಕಲೆಗಳನ್ನು ತೆಗೆದುಹಾಕಲು ಟೂತ್ಪೇಸ್ಟ್ ಬಳಸಬಹುದು. ಇದಕ್ಕಾಗಿ ಮೊದಲು ಶಾಯಿ ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, 10 ರಿಂದ 15 ನಿಮಿಷಗಳ ಕಾಲ ಹಾಗೇನೆ ಬಿಡಿ. ನಂತರ ಆ ಬಟ್ಟೆಯನ್ನು ಲಿಕ್ವಿಡ್ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿ.

ಎಣ್ಣೆ ಅಥವಾ ಮಸಾಲೆ ಕಲೆಗಳನ್ನು ತೆಗೆದುಹಾಕುವ ಮಾರ್ಗ:

ಅನೇಕ ಬಾರಿ ಅಡುಗೆ ಮಾಡುವಾಗ ಅಥವಾ ತಿನ್ನುವಾಗ ಬಟ್ಟೆಗಳಲ್ಲಿ ಎಣ್ಣೆ ಮತ್ತು ಮಸಾಲೆಗಳ ಕಲೆಯಾಗುತ್ತವೆ. ಸಾಬೂನಿನಿಂದ ಆ ಕಲೆಗಳನ್ನು ತೆಗೆದುಹಾಕುವುದು ಅಸಾಧ್ಯವಾಗಿದೆ. ಹಾಗಿರುವಾಗ ಈ ವಿಧಾನದ ಮೂಲಕ ಆ ಕಲೆಗಳನ್ನು ತೆಗೆದುಹಾಬಹುದು. ಬಟ್ಟೆಯಲ್ಲಿ ಎಣ್ಣೆಯ ಕಲೆಯಾಗಿದ್ದರೆ, ಎರಡು ಚಮಚ ಅಡಿಗೆ ಸೋಡಾಕ್ಕೆ ಒಂದು ಚಮಚ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ನ್ನು ಬಟ್ಟೆಯಲ್ಲಿನ ಕಲೆಯ ಮೇಲೆ ಅನ್ವಯಿಸಿ, ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ಬ್ರಶ್ನಿಂದ ಉಜ್ಜಿಕೊಂಡರೆ ಕಲೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ದೀಪಾವಳಿಯಂದು ಮನೆ ಸುಂದರವಾಗಿ ಕಾಣಲು ಹೀಗೆ ಮಾಡಿ, ಇಲ್ಲಿದೆ ಅಲಂಕಾರಿಕ ಸಲಹೆ

ಟೀ ಕಾಫಿ ಕಲೆಗಳನ್ನು ತೆಗೆದುಹಾಕುವುದು ಹೇಗೆ?

ಟೀ ಕಾಫಿಯ ಕಲೆಗಳನ್ನು ಹೋಗಲಾಡಿಸಲು ಬಟ್ಟೆಗೆ ಟೆರ್ಜೆಂಟ್ ಪೌಡರ್ ಅಥವಾ ಸೋಪು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ 5 ರಿಂದ 10 ನಿಮಿಷಗಳ ಕಾಲ ಅದ್ದಿಡಿ, ನಂತರ ಶುದ್ಧ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಇದರಿಂದ ಕಲೆಗಳು ನಿವಾರಣೆಯಾಗುತ್ತದೆ. ಅಥವಾ ಬಟ್ಟೆಯನ್ನು ಸ್ವಲ್ಪ ನೀರಿನಿಂದ ಅದ್ದಿ, ಕಲೆಯಿರುವ ಪ್ರದೇಶಕ್ಕೆ ಅಡಿಗೆ ಸೋಡಾ ಹಾಕಿ, ಸ್ವಲ್ಪ ಉಜ್ಜಿಕೊಂಡು 15 ನಿಮಿಷಗಳ ಕಾಲ ಬಿಡಿ. ಈ ರೀತಿ ಮಾಡುವುದರಿಂದ ಅಡಿಗೆ ಸೋಡಾ ಬಟ್ಟೆಯ ಕಲೆಗಳನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.

ಚಾಕೋಲೇಟ್, ಐಸ್ಕ್ರೀಮ್ ಕಲೆಗಳನ್ನು ತೆಗೆದುಹಾಕುವುದು ಹೇಗೆ:

ಬಟ್ಟೆಯ ಮೇಲೆ ಚಾಕಲೇಟ್ ಬಿದ್ದು, ಕಲೆಯಾದರೆ ತಕ್ಷಣವೇ ಆ ಕಲೆಗಳನ್ನು ತೆಗೆದುಹಾಕಲು ಟಾಲ್ಕಮ್ ಪೌಡರ್ ಹಾಕಿ ನಂತರ ಬೆಚ್ಚಗಿನ ನೀರಿನಿಂದ ಆ ಬಟ್ಟೆಯನ್ನು ತೊಳೆಯಿರಿ. ಮತ್ತು ಬಟ್ಟೆಗಳಲ್ಲಿ ಐಸ್ಕ್ರೀಮ್ ಕಲೆಯಿದ್ದರೆ, ಅಮೋನಿಯಾ ಲಿಕ್ವಿಡ್ ಬಳಸಿ. ಈ ಲಿಕ್ವಿಡ್ ನ್ನು ಕಲೆಯಿರುವ ಪ್ರದೇಶಕ್ಕೆ ಹಾಕಿ ನಿಧಾನವಾಗಿ ಉಜ್ಜಿ, ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.

ಬಟ್ಟೆಯಿಂದ ರಕ್ತದ ಕಲೆಗಳನ್ನು ತೆಗೆದುಹಾಕುವುದು ಹೇಗೆ?

ಒಂದು ವೇಳೆ ಬಟ್ಟೆಗಳಲ್ಲಿ ರಕ್ತದ ಕಲೆಗಳು ಅಂಟಿಕೊಂಡಿದ್ದರೆ, ಆ ಬಟ್ಟೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ನಂತರ ರಕ್ತದ ಕಲೆಯರುವಲ್ಲಿ ನಿಂಬೆ ರಸವನ್ನು ಹಚ್ಚಿ, 15 ನಿಮಿಷಗಳ ಕಾಲ ಹಾಗೇನೇ ಬಿಡಿ, ನಂತರ ಚೆನ್ನಾಗಿ ಬಟ್ಟೆಯನ್ನು ಒಗೆಯಿರಿ, ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು