AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zumba Dance: ತೂಕ ಇಳಿಸಿಕೊಳ್ಳಲು ಜುಂಬಾ ಡ್ಯಾನ್ಸ್ ಉತ್ತಮ ಮಾರ್ಗ

ನೃತ್ಯವೆಂದರೆ ಇಷ್ಟಪಡದವರುಂಟೇ, ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವ ಈ ನೃತ್ಯವು ನಿಮ್ಮ ತೂಕ ಇಳಿಕೆಗೂ ಸಹಕಾರಿ ಎಂದರೆ ನೀವು ನಂಬಲೇಬೇಕು. ಜಾನಪದ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು.

Zumba Dance: ತೂಕ ಇಳಿಸಿಕೊಳ್ಳಲು ಜುಂಬಾ ಡ್ಯಾನ್ಸ್ ಉತ್ತಮ ಮಾರ್ಗ
Zumba Dance
TV9 Web
| Edited By: |

Updated on: Jun 06, 2022 | 6:00 PM

Share

ನೃತ್ಯವೆಂದರೆ ಇಷ್ಟಪಡದವರುಂಟೇ, ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವ ಈ ನೃತ್ಯವು ನಿಮ್ಮ ತೂಕ ಇಳಿಕೆಗೂ ಸಹಕಾರಿ ಎಂದರೆ ನೀವು ನಂಬಲೇಬೇಕು. ಜಾನಪದ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು. ಮ್ಯೂಸಿಕ್ ಆನ್ ಮಾಡಿದರೆ ಸಾಕು, ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಹಲವು ನೃತ್ಯ ಪ್ರಕಾರಗಳಲ್ಲಿ ಜುಂಬಾ ಡ್ಯಾನ್ಸ್ ಕೂಡ ಒಂದು, ಇದು ನೋಡಲು ನೃತ್ಯದಂತೆ ಕಂಡರೂ ಒಂದು ರೀತಿಯ ವ್ಯಾಯಾಮವೇ ಆಗಿದೆ, ಕೊಬ್ಬು ಕರಗಿಸಲು ಸಹಾಯಕವಾಗಿದೆ.

ನೃತ್ಯವು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಉತ್ತಮವಾದ ಮಾರ್ಗವಾಗಿದ್ದರು ಕೂಡ ಇದು ಇತರ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನೃತ್ಯವು ವಾಸ್ತವವಾಗಿ ವ್ಯಾಯಾಮ ಮಾಡಲು ಹಾಗು ಕೊಬ್ಬು ಕರಗಿಸಲು ಸಹಾಯಕವಾಗುತ್ತದೆ. ನೃತ್ಯದಿಂದ ಕ್ಯಾಲೋರಿಯನ್ನು ಸುಡಲು ಮತ್ತು ತೂಕ ಇಳಿಸಿಕೊಳ್ಳಲು ಅತ್ಯುತ್ತಮವಾದ ಮಾರ್ಗ ಎಂದೇ ಹೇಳಬಹುದು.

ಕೆಲವರಿಗೆ ವಾಕಿಂಗ್ ಮಾಡಲು ಇಷ್ಟ, ಮತ್ತೊಬ್ಬರಿಗೆ ಫಿಟ್ ನೆಸ್ ಇಷ್ಟ, ಇನ್ನೊಬ್ಬರಿಗೆ ಯೋಗ ಇಷ್ಟ. ಹೀಗೆ ಒಬ್ಬೊಬ್ಬರ ಅಭಿರುಚಿ ಒಬ್ಬೊಬ್ಬರಿಗೆ, ದೇಹದಂಡನೆ ಮಾಡಲು ಪ್ರಮುಖವಾಗಿ ಮನಸ್ಸು ದೃಢವಾಗಿರಬೇಕು. ಸುಖಾಸುಮ್ಮನೆ ಒಂದೆರಡು ದಿನಗಳು ಮಾಡಿ ಮತ್ತೇ ತೂಕ ಇಳಿಕೆಯ ಮೇಲೆ ಉತ್ಸಹ ಕಡಿಮೆಯಾಗಬಾರದು.

​ಏರೋಬಿಕ್ ವ್ಯಾಯಾಮ ತೂಕ ನಷ್ಟಕ್ಕೆ ಕಾರಣವಾಗಬಹುದು ಏರೋಬಿಕ್ ಅಥವಾ ಕಾರ್ಡಿಯೋ ವ್ಯಾಯಾಮದ ರೂಪಗಳು. ನೃತ್ಯವು ಕ್ಯಾಲೋರಿಗಳನ್ನು ಸುಡುವುದರ ಜೊತೆ-ಜೊತೆಗೆ ನಿಮ್ಮ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದ ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಒತ್ತಡ ಕಡಿಮೆ ಮಾಡಿ ಉತ್ತಮವಾದ ನಿದ್ರೆ ಬರುವಂತೆ ಮಾಡುತ್ತದೆ. ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಕಡಿಮೆ ಮಾಡುತ್ತದೆ.

​ಖಿನ್ನತೆಯಿಂದ ಹೊರಬರಬಹುದು ಜುಂಬಾ ನೃತ್ಯವು ಕೇವಲ ದೈಹಿಕ ಪ್ರಯೋಜನಗಳೇ ಅಲ್ಲದೇ ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಏರೋಬಿಕ್ ವ್ಯಾಯಾಮವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಖಿನ್ನತೆಯಂತಹ ಅಪಾಯದಿಂದ ತಪ್ಪಿಸುತ್ತದೆ. ನೃತ್ಯವು ವಿಶೇಷವಾಗಿ ಸಾಮಾಜಿಕ ಚಟುವಟಿಕೆಯಾಗಿದೆ. ನೃತ್ಯ ಒಂದು ಮೋಜಿನ ಚಟುವಟಿಕೆಯಾಗಿದ್ದು, ನಿಮ್ಮ ಮೋಜಿನ ಆಟದ ಜೊತೆಗೆ ನಿಮ್ಮ ತೂಕವನ್ನು ಸುಲಭವಾಗಿ ಇಳಿಕೆ ಮಾಡಬಹುದು.

ಇತರೆ ಸಲಹೆ -ನಿಮ್ಮ ಆಹಾರದಲ್ಲಿ ತರಕಾರಿ ಹಾಗೂ ಹಣ್ಣುಗಳಿರಲಿ -ನಿತ್ಯ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ -ಪ್ಯಾಕ್ಡ್​ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ -ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ನಿಮಗೆ ಇಷ್ಟವಾದ ಹಾಡನ್ನು ಹಾಕಿಕೊಂಡು ಎಂಜಾಯ್ ಮಾಡಿ

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು