Play : ನಾಳೆ ರಂಗಶಂಕರದಲ್ಲಿ ಬೆಂಗಳೂರು ಕಲೆಕ್ಟಿವ್ ಥಿಯೆಟರ್​ನಿಂದ ‘ಕೋವಿಗೊಂದು ಕನ್ನಡಕ’

Kannada Theatre : ‘ಕನ್ನಡ ರಂಗಭೂಮಿಯ ಹೊಸ ಅಲೆಯ ನಿರ್ದೇಶಕರು ರಿಯಲಿಸಂ ಮತ್ತು ಸರ್ರಿಯಲಿಸಂ ಪ್ರಕಾರಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವುದು ಕನ್ನಡ ರಂಗಭೂಮಿಯ ಬೆಳೆವಣಿಗೆಗೆ ಪೂರಕವಾಗಿದೆ. ಸಾಮಾನ್ಯವಾಗಿ ಶಿಬಿರಗಳಿಗಷ್ಟೇ ಸೀಮಿತಗೊಳಿಸುವ ಆಂಗಿಕ ಅಭ್ಯಾಸಗಳನ್ನು ರಂಗದ ಮೇಲೆಯೂ ತಂದು ಇಡೀ ಪ್ರಸಂಗಕ್ಕೊಂದು ಸಾಂಕೇತಿಕತೆಯನ್ನು ತರುವುದು ವೆಂಕಟೇಶ್ ಪ್ರಸಾದ್ ಅವರ ನೈಪುಣ್ಯತೆ.’ ಮುಕುಂದ ಸೆಟ್ಲೂರ

Play : ನಾಳೆ ರಂಗಶಂಕರದಲ್ಲಿ ಬೆಂಗಳೂರು ಕಲೆಕ್ಟಿವ್ ಥಿಯೆಟರ್​ನಿಂದ ‘ಕೋವಿಗೊಂದು ಕನ್ನಡಕ’
ಬೆಂಗಳೂರು ಕಲೆಕ್ಟಿವ್ ತಂಡದಿಂದ ‘ಕೋವಿಗೊಂದು ಕನ್ನಡಕ’ದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Dec 02, 2021 | 4:29 PM

Play : Slawomir Mrozek -Charlie – ಸ್ಲಾವೋಮೀರ್ ಮ್ರೊಝೆಕ್​ರ ‘ಚಾರ್ಲಿ’ ಒಂದು ಅಸಂಗತ, ವಿಡಂಬನಾತ್ಮಕ ನಾಟಕ. ಕಣ್ಣಿನ ದೃಷ್ಟಿ ಸರಿಯಿಲ್ಲದ ಮುದುಕನೊಬ್ಬ ತನ್ನ ಶತ್ರುವನ್ನು ಮುಗಿಸಲು ಕೋವಿ ಹಿಡಿದು ಹೋಗುವುದೇ ಒಂದು ರೂಪಕ. ತನ್ನ ಶತ್ರು ಯಾರು ಎನ್ನುವುದೇ ಗೊತ್ತಿಲ್ಲದೆಯೇ ಒಂದು ಅಮೂರ್ತ, ಕಾಲ್ಪನಿಕ ಶತ್ರುವನ್ನು ತಲೆಯಲ್ಲಿ ತುಂಬಿಕೊಂಡು ಅವರನ್ನು ಮುಗಿಸಬೇಕು ಎಂದು ಹೊರಡುವುದು ಜಗತ್ತಿನ ಹಲವಾರು ದೇಶಗಳಲ್ಲಿ ಕಂಡುಬಂದ ಸಂಗತಿ. ಈ ನಾಟಕ ಓದಿದಾಗ ಹಲವು ಆಯಾಮಗಳಲ್ಲಿ ನಮ್ಮ ಸಮಾಜಕ್ಕೂ ಈ ನಾಟಕ ಹೊಂದಬಹುದೆಂದು ನಾನು ಕೈಗೆತ್ತಿಕೊಂಡೆ. ಇದು ಕೇವಲ ಭಾಷಾಂತರವಲ್ಲ, ನಮಗೆ ಹೊಂದುವ ಹಾಗೆ ಮಾಡಿಕೊಂಡ ರೂಪಾಂತರ. ಹಲವು ಭಿನ್ನ ಸಂಸ್ಕೃತಿಗಳು,  ಭಾಷೆಗಳು, ವಿಚಾರಗಳ ಜೊತೆ ನಾವು ಒಂದೇ ಎಂಬ ಸಾಮರಸ್ಯದಲ್ಲಿ ಬದುಕಬಹುದೇ ಅಥವಾ ನಾವು ಮತ್ತೆ ಅವರು ಎಂಬ ವೈರುಧ್ಯಗಳೇ ಪ್ರಧಾನವಾಗಬೇಕೆ ಎಂಬ ಪ್ರಶ್ನೆಯನ್ನು ನಾಟಕ ಹುಟ್ಟಿಸಬಹುದು ಎನಿಸುತ್ತದೆ.  ವೆಂಕಟೇಶ್ ಪ್ರಸಾದ್, ನಿರ್ದೇಶಕ, ಬೆಂಗಳೂರು ಕಲೆಕ್ಟಿವ್ ಥಿಯೇಟರ್ 

*

ತಾತಂಗೆ ಸರಿಯಾಗಿ ಕಣ್ಣು ಕಾಣಿಸ್ತಿಲ್ಲ. ಒಂದು ಕನ್ನಡಕ ಸಿಕ್ಕಿದ್ರೆ ಸಾಕು. ಶುರು ಹಚ್ಕೊತಾರೆ, ಡಿಮಿಲ್ ! ಡಿಮಿಲ್!

ನಿಮಗೆ ಅವರು ಗೊತ್ತೇ ಇಲ್ಲ ಅಂದ್ರೆ ಯಾಕ್ರೀ ಬೇಕು ನಿಮಗೆ ಅವರು ? ಆದ್ರೆ ಈ ಅವರು ಯಾರು ?

ಅವರನ್ನ ಷೂಟ್ ಮಾಡಬೇಕು, ಯಾರ‍್ಯಾರನ್ನೋ ಷೂಟ್ ಮಾಡಕೆ ಆಗುತ್ತ ಸಾರ್? ನ್ಯಾಯ ನೀತಿ ಅಂತ ಇರಬೇಕು ತಾನೇ?

ಧೂಳು ಹಿಡಿದಿರೋ ಗ್ಲಾಸ್ ಮೂಲಕ ನೋಡಿದ್ರೆ ಜಗತ್ತೂ ಸರಿಯಾಗಿ ಕಾಣಲ್ಲ, ದೃಷ್ಟಿನೂ ನೆಟ್ಟಗಿರಲ್ಲ.

ನಮ್ಮ ಕವಿಗಳು ಹೇಳ್ತಿದ್ರು, ನೋಡೋದು ಬೇರೆ, ಕಾಣೋದು ಬೇರೆ ಅಂತ! ನೀವು ಈಗ ಕಾಣ್ತಿದೀರ!

ನೀವು.. ನೀವು ಅವರಲ್ವ?! ಅಂದ್ರೆ ಮುಂಚೆ ಬಂದಿದ್ರಲ್ವ? ಇವತ್ತೇ ಬಂದುಬಿಡಬೇಕಿತ್ತು. ಇರಲಿ.. ನಾಳೆ ಬನ್ನಿ.

*

‘ಕೋವಿಗೊಂದು ಕನ್ನಡಕ’ ನಾಟಕದಲ್ಲಿ ಹಲವು ಪದರಗಳಿವೆ. ವಿಡಂಬನೆ, ಹಾಸ್ಯವೂ ಇದೆ. ಮನರಂಜನೆಯನ್ನು ಬಯಸಿ ಬಂದವರಿಗೆ ಮನರಂಜನೆ, ವಿಚಾರಗಳನ್ನು ಬಯಸಿ ಬಂದವರಿಗೆ ವಿಚಾರಗಳು ಸಿಗಬಹುದು. ಈಗಾಗಲೇ ಪ್ರದರ್ಶನಗೊಂಡ ಈ ನಾಟಕದ ಬಗ್ಗೆ ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರ ನಿರ್ದೇಶಕ ಮನ್ಸೋರೆ, ‘ಸಮಕಾಲೀನ ವಿಷಯಗಳನ್ನು ನೆನಪಿಸುವ ವಿಡಂಬನಾತ್ಮಕ ನಾಟಕ. ನಿರ್ದೇಶನ ನಿರೂಪಣೆ ಹಾಗೂ ವಿಶೇಷವಾಗಿ ರಂಗವಿನ್ಯಾಸ ಅತ್ಯುತ್ತಮವಾಗಿದೆ. ನಿಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗುವ ನಾಟಕ ಇದು. ಈ ಪೋಲಿಷ್ ನಾಟಕವನ್ನು ಸುಂದರವಾಗಿ ಕನ್ನಡಕ್ಕೆ ತಂದಿದ್ದಾರೆ. ಮೇಲ್ಪದರಕ್ಕೆ ನಾಟಕ ಹಾಸ್ಯದಿಂದ ಕೂಡಿದೆ ಹಾಗಾಗಿ ನಾಟಕ ನೋಡಿ ನಕ್ಕು ಬರ್ತೀನಿ ಅನ್ನುವವರಿಗೆ ಕೊಟ್ಟ ದುಡ್ಡಿಗಂತೂ ಮೋಸವಾಗುವುದಿಲ್ಲ. ಮೂಲ ಕೃತಿ 1962ರಲ್ಲಿ ಬಂದಿತ್ತು, ಸೋಜಿಗ ಅಂದ್ರೆ ಅದು ಇಂದಿಗೂ ಕೂಡ ಭಾರತಕ್ಕೆ ರಿಲೆವಂಟ್ ಅನಿಸುತ್ತೆ. ನನ್ನ ಪ್ರಕಾರ ನಾಟಕ ಅಥವಾ ಸಿನಿಮಾವೊಂದು ಕಥೆಯನ್ನು ದಾಟಿ ಹೋದಾಗ ಮಾತ್ರ ದೀರ್ಘವಾಗಿ ಮನಸಿನಲ್ಲಿ ಉಳಿಯುತ್ತೆ. ಧರ್ಮಗುರುಗಳು, ರಾಜಕಾರಣಿಗಳು ಕಾಣದ ವೈರಿಗಳನ್ನು ಯಾಕೆ ಸೃಷ್ಟಿಸುತ್ತಾರೆ ಹಾಗೂ “ನಮ್ಮವರು ಹಾಗೂ ಇತರರು” “ನಮ್ಮವರದ್ದು ಸರಿ, ಬೇರೆಯವರದ್ದು ತಪ್ಪು” ಎಂಬ ನಂಬಿಕೆಯಲ್ಲಿ ಅಡಗಿರುವ ಹಿಂಸಾಚಾರ ಎಂಥದ್ದು ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ. ವೆಂಕಟೇಶ್ ಪ್ರಸಾದ್ ಕೇವಲ ಮೂರು ಪಾತ್ರಗಳನ್ನಿಟ್ಟುಕೊಂಡು ಚೆನ್ನಾಗಿ ನಾಟಕವನ್ನು ಕಟ್ಟಿದ್ದಾರೆ.’

Bengaluru collective theatre director venkatesh prasd kovigondu kannadaka rangashankara

ನಿರ್ದೇಶಕ ವೆಂಕಟೇಶ್ ಪ್ರಸಾದ್

ರಂಗಪ್ರಿಯ ಮುಕುಂದ ಸೆಟ್ಲೂರ ಅವರ ಅಭಿಪ್ರಾಯ ಹೀಗಿದೆ. ‘ತಾಂತ್ರಿಕವಾಗಿ ನಾಟಕ ಸರಳವಾಗಿ ಅದ್ಭುತವಾಗಿದೆ. ಕನ್ನಡ ರಂಗಭೂಮಿಯ ಹೊಸ ಅಲೆಯ ನಿರ್ದೇಶಕರು ರಿಯಲಿಸಂ ಮತ್ತು ಸರ್ರಿಯಲಿಸಂ ಜಾನರ್​ಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವುದು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿದೆ. ವೆಂಕಟೇಶ ಪ್ರಸಾದರ ‘ಒಂದು ಪ್ರೀತಿಯ ಕತೆ’ ನೋಡಿದವರಿಗೆ ಅವರ ಶೈಲಿ ಈ ನಾಟಕದಲ್ಲೂ ಎದ್ದೂ ಕಾಣುತ್ತದೆ. ಸಾಮಾನ್ಯವಾಗಿ ನಾವು ಶಿಬಿರಗಳಿಗಷ್ಟೇ ಸೀಮಿತಗೊಳಿಸುವ ಆಂಗಿಕ ಅಭ್ಯಾಸಗಳನ್ನು ರಂಗದ ಮೇಲೆಯೂ ತಂದು ಪ್ರಸಂಗಕ್ಕೊಂದು ಸಾಂಕೇತಿಕತೆಯನ್ನು ತರುವುದು ವೆಂಕಟೇಶ್ ಪ್ರಸಾದ್ ಅವರ ನೈಪುಣ್ಯತೆ. ನಾಟಕದ ಮೊದಲಾರ್ಧದಲ್ಲಿ ಐರನಿ ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಪಾತ್ರಗಳು ಹೇಳುವುದಕ್ಕೂ ಅವರ ಆಂಗಿಕ ಅಭಿನಯಕ್ಕೂ ವ್ಯತ್ಯಾಸ ಕಾಣುವುದು ಹಾಸ್ಯಕ್ಕೆ ಪೂರಕವಾಗಿದೆ. ಇಡೀ ನಾಟಕದಲ್ಲಿ ಎದ್ದು ಕಾಣುವುದು ರೂಪಕಗಳು.’

*

ನಾಟಕ : ಕೋವಿಗೊಂದು ಕನ್ನಡಕ ತಂಡ : ಬೆಂಗಳೂರು ಕಲೆಕ್ಟಿವ್ ಥಿಯೇಟರ್  ದಿನಾಂಕ : ಡಿಸೆಂಬರ್ 3 ಸಮಯ : ಸಂಜೆ 7.30 ಅವಧಿ : 60 ನಿಮಿಷ. ಸ್ಥಳ : ರಂಗಶಂಕರ, ಜೆಪಿ ನಗರ, ಬೆಂಗಳೂರು ಟಿಕೆಟ್ ಮತ್ತು ವಿವರಗಳಿಗಾಗಿ : 9972255400

*

ನಾಳೆ ಈ ನಾಟಕವನ್ನೂ ನೋಡಬಹುದು : Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್