AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

S.P. Balasubrahmanyam Birth Anniversary: ‘ನಮ್ಮ ನಿರ್ಮಾಪಕರು ಸೂಕ್ಷ್ಮತೆ ಕಳೆದುಕೊಳ್ಳಬಾರದಲ್ಲವೆ’

SPB : ಅದುವರೆಗೂ ಸಿನೆಮಾದ ಬಜೆಟ್​ ಗಮನದಲ್ಲಿಟ್ಟುಕೊಂಡು ಎಸ್​ಪಿಬಿ ಅವರು ತಮ್ಮ ಸಂಭಾವನೆಯನ್ನು ನಿಗದಿಪಡಿಸಿಕೊಳ್ಳುತ್ತಿದ್ದರು. ಯಾವಾಗ ಮುಂಬೈ ಗಾಯಕರು ಮತ್ತು ಸ್ಥಳೀಯ ಗಾಯಕರ ನಡುವೆ ಸಂಭಾವನೆ ವಿಷಯವಾಗಿ ನಿರ್ಮಾಪಕರು ತಾರತಮ್ಯ ಮಾಡತೊಡಗಿದರೋ ಆಗ ಎಸ್​ಪಿಬಿ ನೊಂದುಕೊಂಡರು.

S.P. Balasubrahmanyam Birth Anniversary: ‘ನಮ್ಮ ನಿರ್ಮಾಪಕರು ಸೂಕ್ಷ್ಮತೆ ಕಳೆದುಕೊಳ್ಳಬಾರದಲ್ಲವೆ’
ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಬಿ. ಜೆ. ಭರತ್
ಶ್ರೀದೇವಿ ಕಳಸದ
|

Updated on:Jun 04, 2022 | 2:37 PM

Share

S.P. Balasubrahmanyam Birth Anniversary: 2000 ರ ಸಮಯ. ನಾನಾಗ ಕೋರಸ್ ಸಿಂಗರ್ ಆಗಿದ್ದೆ. ಒಮ್ಮೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ನಡೆದಿತ್ತು. ವಿ. ಮನೋಹರ್ ಅವರ ನಿರ್ದೇಶನದ ಚಿತ್ರ. ಎಸ್​.ಪಿ ಸರ್ ಈಗ ಬರುತ್ತಾರೆ. ಅವರ ರೆಕಾರ್ಡಿಂಗ್ ಮುಗಿದ ಮೇಲೆ ನೀವು ನಿಮ್ಮ ಹಾಡನ್ನು ಮುಂದುವರೆಸಬಹುದು ಎಂದರು. ನನಗೊಂಥರಾ ಅದೃಷ್ಟ ಅನ್ನಿಸಿತು. ಅವರನ್ನು ಅಷ್ಟು ಹತ್ತಿರದಿಂದ ಮಾತನಾಡಿಸುವುದು, ಅವರು ಹಾಡುವುದನ್ನು ಕೇಳುವುದು. ರೆಕಾರ್ಡಿಂಗ್ ಮುಗಿದ ಮೇಲೆ ಅವರೊಂದಿಗೆ ಕಾಫಿ ಬಿಸ್ಕೆಟ್​. ನಂತರ ಅವರು ಹಾಡುವ ವಿಷಯವಾಗಿ ಕೆಲ ಸಲಹೆಗಳನ್ನೂ ಕೊಟ್ಟರು. ಇಂದಿಗೂ ಆ ಮೊದಲ ಭೇಟಿ ಮೈನವಿರೇಳಿಸುತ್ತದೆ. ಎರಡನೇ ಬಾರಿ ಈ ಟಿವಿಯ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮ. ಒಂದು ಎಪಿಸೋಡ್ ಪೂರ್ತಿ ಶಾಸ್ತ್ರೀಯ ಸಂಗೀತ ಆಧಾರಿತ ಇತ್ತು. ನನ್ನ ಗುರು ಪರಮೇಶ್ವರ ಹೆಗಡೆ ತೀರ್ಪುಗಾರರಾಗಿದ್ದರು. ಜಯಂತ ಕಾಯ್ಕಿಣಿಯವರ ಗೀತೆಗೆ ಹೆಗಡೆಯವರು ಸ್ವರಸಂಯೋಜನೆ ಮಾಡಿದ್ದರು. ನಾನು ಮತ್ತು ಅವರ ಮಗಳು ವಾಣಿ ಹೆಗಡೆ ಆ ಹಾಡನ್ನು ಹಾಡಿದ್ದೆವು. ಈ ಎರಡೂ ಘಟನೆಗಳು ಜೀವನದಲ್ಲಿ ನನಗೆ ದೊಡ್ಡ ಸ್ಪೂರ್ತಿ. ಬಿ.ಜೆ. ಭರತ್, ಸಂಗೀತ ನಿರ್ದೇಶಕ 

ಎಸ್​ಪಿ ಸರ್ ಅಷ್ಟೊಂದು ಭಾಷೆಗಳಲ್ಲಿ ಅಷ್ಟು ಲೀಲಾಜಾಲವಾಗಿ ಹಾಡುತ್ತಿದ್ದರಲ್ಲ ಅದು ಎಂದೆಂದಿಗೂ ಅಚ್ಚರಿ. ಭಾರತದ ಐಕಾನಿಕ್ ಸಿಂಗರ್. ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ. ನಾನು ಕೇಳ್ಪಟ್ಟ ಹಾಗೆ, ಎಸ್​ಪಿಬಿಯವರು ಸಿನೆಮಾದ ಬಜೆಟ್​ಗೆ ತಕ್ಕಂತೆ ತಮ್ಮ ಸಂಭಾವನೆಯಲ್ಲಿ ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಳ್ಳುತ್ತ ಬಂದಿದ್ದರು. ಆದರೆ ನಮ್ಮ ನಿರ್ಮಾಪಕರು ಲಕ್ಷಗಟ್ಟಲೆ ಕೊಟ್ಟು ಮುಂಬೈ ಗಾಯಕರನ್ನು ಕರೆಸಲು ಆರಂಭಿಸಿದರೋ ಆಗ ಈ ತಾರತಮ್ಯ ಧೋರಣೆಯಿಂದ ಮನನೊಂದರು. ಅಷ್ಟು ವರ್ಷ ಹಾಡಿದ ಕಲಾವಿದರು ಅವರಾಗಿಯೇ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಬೇಕಾ? ಇಂಥ ಸೂಕ್ಷ್ಮಗಳು ನಮ್ಮ ನಿರ್ಮಾಪಕರಿಗೆ ಯಾಕೆ ಅರ್ಥವಾಗುವುದಿಲ್ಲ?

ಇದನ್ನೂ ಓದಿ : S.P. Balasubrahmanyam Birth Anniversary: ‘ಅಮೃತಧಾರೆ’ಯ ನಂತರ ಎಷ್ಟು ಸಿನೆಮಾ ಹಾಡು ಹಾಡಿದಿರಿ’ ಎಸ್​ಪಿಬಿ ಸುಪ್ರಿಯಾಗೆ ಕೇಳಿದಾಗ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಏನೇ ಆದರೂ ಹೋದರೂ ಎಸ್​ಪಿ ಸರ್ ಹೀಗೆ ಇನ್ನೂ ನೂರಾರು ವರ್ಷಗಳ ಕಾಲ ಹಾಡುಗಳ ಮೂಲಕ, ಗುಣಸ್ವಭಾವದ ಮೂಲಕ ನಮ್ಮೊಂದಿಗೆ  ಜೀವಂತವಾಗಿಯೇ ಇರ್ತಾರೆ. ನಿಜವಾದ ಕಲಾವಿದ ಅಳಿದ ಮೇಲೂ ಬದುಕುವುದೆಂದರೆ ಹೀಗೇ ಇರಬಹುದು.

Published On - 1:49 pm, Sat, 4 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ