ದೆಹಲಿ: ನೀರಿನ ಹಣ ಕೇಳಿದಕ್ಕೆ ಹೋಟೆಲ್ ಮಾಲಿಕನ ಮೇಲೆ ಕಾರು ಹತ್ತಿಸಲು ಯತ್ನ, ವಿಡಿಯೋ ವೈರಲ್
ಸೇತುವೆಯ ಬಳಿ ಸಣ್ಣ ಉಪಾಹಾರ ಗೃಹವನ್ನು ನಡೆಸುತ್ತಿರುವ 34 ವರ್ಷದ ರಾಮ್ ಚಂದ್ ಈ ದೂರುನ್ನು ನೀಡಿದ್ದಾರೆ. ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎರಡು ಲೋಟ ನೀರು ಕೇಳಿದರು. ಅವರಿಗೆ ನೀರು ನೀಡಿ 5 ರೂ. ಕೇಳಿದೆ. ಆದರೆ ಅವರು ಇದಕ್ಕೆ ನಿರಾಕರಿಸಿದರು, ನಂತರ ನನ್ನ ಮತ್ತು ಅವರ ನಡುವೆ ಜಗಳ ಶುರುವಾಗಿದೆ ಎಂದು ಹೇಳಿದ್ದಾರೆ.
ದೆಹಲಿ, ಜ.3: ದೆಹಲಿಯಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಈ ಬಗ್ಗೆ ಒಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ರಸ್ತೆಯಲ್ಲಿ ಎಸ್‌ಯುವಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪುಂಡಾಟಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉತ್ತರ ದೆಹಲಿಯ ಸಿಗ್ನೇಚರ್ ಸೇತುವೆ ಬಳಿ ಮಂಗಳವಾರ (ಜ.3) ಈ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ.
ಸೇತುವೆಯ ಬಳಿ ಸಣ್ಣ ಉಪಾಹಾರ ಗೃಹವನ್ನು ನಡೆಸುತ್ತಿರುವ 34 ವರ್ಷದ ರಾಮ್ ಚಂದ್ ಈ ದೂರುನ್ನು ನೀಡಿದ್ದಾರೆ. ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎರಡು ಲೋಟ ನೀರು ಕೇಳಿದರು. ಅವರಿಗೆ ನೀರು ನೀಡಿ 5 ರೂ. ಕೇಳಿದೆ. ಆದರೆ ಅವರು ಇದಕ್ಕೆ ನಿರಾಕರಿಸಿದರು, ನಂತರ ನನ್ನ ಮತ್ತು ಅವರ ನಡುವೆ ಜಗಳ ಶುರುವಾಗಿದೆ ಎಂದು ಹೇಳಿದ್ದಾರೆ.
ಈ ಕಾರಣಕ್ಕೆ ನನಗೆ ಕಾರಿನಲ್ಲಿ ಬಂದ ಆ ಇಬ್ಬರು ಥಳಿಸಿದ್ದಾರೆ ಎಂದು ರಾಮ್ ಚಂದ್ ಹೇಳಿದ್ದಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಎಸ್‌ಯುವಿ ಕಾರು ಯು-ಟರ್ನ್ ತೆಗೆದುಕೊಂಡು ರಾಂಗ್ ಸೈಡ್‌ನಲ್ಲಿ ಬಂದು ಅಲ್ಲಿರುವ ಜನರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾರೆ. ಇನ್ನು ಅವರನ್ನು ಹಿಡಿಯಲು ಈ ರಸ್ತೆಯಲ್ಲಿ ನಿಂತ ಕೆಲವೊಂದು ಜನರು ಆ ಕಾರಿನ ಮೇಲೆ ಕಲ್ಲು , ದೋಣೆಗಳಿಂದ ದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವಾಗಿಲ್ಲ, ಮೆದುಳು ನಾಪತ್ತೆ: ಮರಣೋತ್ತರ ಪರೀಕ್ಷೆ ವರದಿಯ ಸ್ಪೋಟಕ ಮಾಹಿತಿ ಬಹಿರಂಗ
ಕಾರಿನ ಮಾಲೀಕರನ್ನು ಮೊಹಮ್ಮದ್ ಹಬೀಬ್ ಎಂದು ಗುರುತಿಸಲಾಗಿದೆ. ವಾಹನದಲ್ಲಿ ಬಂದ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ