AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Open Air Bar: ಏಪ್ರಿಲ್​ 1ರಿಂದ ಎಲ್ಲಾ ಓಪನ್​ ಏರ್ ಬಾರ್​ಗಳು ಬಂದ್

ರಾಜ್ಯದಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಓಪನ್ ಏರ್ ಬಾರ್​ಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.

Open Air Bar: ಏಪ್ರಿಲ್​ 1ರಿಂದ ಎಲ್ಲಾ ಓಪನ್​ ಏರ್ ಬಾರ್​ಗಳು ಬಂದ್
ಮದ್ಯಪಾನImage Credit source: Pipa News
ನಯನಾ ರಾಜೀವ್
|

Updated on: Mar 13, 2023 | 8:28 AM

Share

ರಾಜ್ಯದಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಓಪನ್ ಏರ್ ಬಾರ್​ಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಮದ್ಯವನ್ನು ಕುಡಿಯಲು ಬಯಸುವವರು ಅದನ್ನು ಮನೆಗೆ ತೆಗೆದುಕೊಂಡು ಹೋಗಬೇಕು, ರಾಜ್ಯದಲ್ಲಿರುವ ಎಲ್ಲಾ ಓಪನ್ ಏರ್ ಬಾರ್​ಗಳನ್ನು ಮುಚ್ಚಲು ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿತ್ತು. ಮದ್ಯವನ್ನು ಅಂಗಡಿಯ ಕೌಂಟರ್​ಗಳಲ್ಲಿ ಮಾತ್ರ ಖರೀದಿಸಬಹುದು, ಮಾರಾಟ ಮಾಡಬಹುದು. ರಾಜ್ಯದಲ್ಲಿ 2010ರಿಂದ ಯಾವುದೇ ಮದ್ಯದಂಗಡಿಯನ್ನು ಮುಚ್ಚಿರಲಿಲ್ಲ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಪರವಾನಗಿಯನ್ನು ರದ್ದುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಶಿಯೋಪುರ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಶಿವರಾಜ್​ಸಿಂಗ್ ಚೌಹಾಣ್ ಮಾಹಿತಿ ನೀಡಿದರು.

ನೀವು ಮದ್ಯಪಾನ ಮಾಡಿ, ಅದು ದೇಹದ ಒಳಕ್ಕೆ ಪ್ರವೇಶ ಪಡೆದಾಗ ಪರಿಣಾಮ ಬೀರಲು ಆರಂಭವಾಗುತ್ತದೆ. ಮೊದಲು ಹೊಟ್ಟೆಯೊಳಕ್ಕೆ ಸೇರುವ ಮಧ್ಯ ಗ್ಯಾಸ್ಟ್ರಿಕ್ ಅಂಶವನ್ನು ಸೃಷ್ಟಿಸುತ್ತದೆ. ಬಳಿಕ, ಕರುಳು ಮಧ್ಯವನ್ನು ಹೀರಿಕೊಳ್ಳುತ್ತದೆ. ಆ ಮೂಲಕವಾಗಿ ಲಿವರ್​ನ್ನು ಸೇರುತ್ತದೆ.

ಮತ್ತಷ್ಟು ಓದಿ: ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?

ಒಂದು ವರದಿಯ ಪ್ರಕಾರ, ಲಿವರ್ ಬಹುತೇಕ ಮದ್ಯದ ಅಂಶವನ್ನು ಕಡಿಮೆ ಅಥವಾ ನಾಶ ಮಾಡುತ್ತದೆ. ಹಾಗೂ ಲಿವರ್​ಗೆ ನಾಶ ಮಾಡಲು ಸಾಧ್ಯವಾಗದೇ ಉಳಿದ ಮದ್ಯದ ಅಂಶವು ಮೆದುಳನ್ನು ತಲುಪುತ್ತದೆ. ಈ ವೇಳೆಗೆ ಮದ್ಯಪಾನವು ದೇಹದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಮದ್ಯವು ಮೆದುಳಿನ ಮೂಲಕ ನರಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಮೆದುಳಿನ ಕಣಗಳ ಕೆಲಸ ನಿಧಾನವಾಗುತ್ತದೆ ಹಾಗೂ ದೇಹದ ಮೇಲೆಯೂ ಪರಿಣಾಮ ಹೆಚ್ಚಾಗುತ್ತದೆ. ದೇಹದ ಮೇಲೆ ಹಿಡಿತವನ್ನೇ ಕಳೆದುಕೊಳ್ಳುವಂತೆಯೂ ಮಾಡುತ್ತದೆ.

ಮದ್ಯಪಾನದಿಂದಾಗಿ ಬಹುತೇಕ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಲಿವರ್​ನದ್ದು. ಹೆಚ್ಚು ಕುಡಿತದ ಅಭ್ಯಾಸ ಹೊಂದಿರುವ ವ್ಯಕ್ತಿಗೆ ಲಿವರ್ ಸಮಸ್ಯೆ ಕಂಡುಬರಬಹುದು. ಹಾಗೆಂದು ಲಿವರ್ ಸಮಸ್ಯೆಯು ನೋವು ಮುಂತಾದ ಸೂಚನೆಗಳ ಮೂಲಕ ತಿಳಿದುಬರುವುದಿಲ್ಲ. ಬದಲಾಗಿ, ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡಾಗ ತಿಳಿದುಬರಬಹುದು. ಹಾಗಾಗಿ, ಅತಿಯಾಗಿ ಮದ್ಯಪಾನ ಸೇವನೆ ಮಾಡುವುದು ಲಿವರ್ ಸಮಸ್ಯೆಗೆ ಕಾರಣವಾಗಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಕೃಪಾ ಅತಿಥಿ ಗೃಹವೇ ಸರ್ಕಾರಿ ನಿವಾಸ?
ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಕೃಪಾ ಅತಿಥಿ ಗೃಹವೇ ಸರ್ಕಾರಿ ನಿವಾಸ?
ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ
ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ
PSG ಚಾಂಪಿಯನ್ಸ್​... ಈ ಸಲ ಕಪ್ RCBಗೆ?
PSG ಚಾಂಪಿಯನ್ಸ್​... ಈ ಸಲ ಕಪ್ RCBಗೆ?