AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ನಬ್ ಚಂಡಮಾರುತ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ವಾಯುಭಾರ ಕುಸಿತ, ಆಂಧ್ರ, ಒಡಿಶಾಗೆ ‘ರೆಡ್ ಅಲರ್ಟ್’

ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ವಾಯುಭಾರ ಕುಸಿತವು 'ಅರ್ನಬ್' ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದೆ. ಇದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ರಜೆ, ಸಂಚಾರ ನಿರ್ಬಂಧ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸನ್ನದ್ಧವಾಗಿವೆ. ಸಾರ್ವಜನಿಕರು ಸುರಕ್ಷಿತವಾಗಿರಲು ಜಿಲ್ಲಾಡಳಿತ ಮನವಿ ಮಾಡಿದೆ.

ಅರ್ನಬ್ ಚಂಡಮಾರುತ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ವಾಯುಭಾರ ಕುಸಿತ, ಆಂಧ್ರ, ಒಡಿಶಾಗೆ 'ರೆಡ್ ಅಲರ್ಟ್'
ಚಂಡಮಾರುತ Image Credit source: Getty Images
ನಯನಾ ರಾಜೀವ್
|

Updated on: Sep 23, 2026 | 8:19 AM

Share

ಒಡಿಶಾ, ಸೆಪ್ಟೆಂಬರ್ 23: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ ಸುಮಾರು 18 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಇದು ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಿ ಮಾರ್ಪಟ್ಟರೆ ಅದಕ್ಕೆ ಬಾಂಗ್ಲಾದೇಶ ನಾಮಕರಣ ಮಾಡಿರುವ ‘ಅರ್ನಬ್’ ಎಂದು ಕರೆಯಲಾಗುತ್ತದೆ. ಸದ್ಯ ಇದು ವಿಶಾಖಪಟ್ಟಣಂ ಮತ್ತು ಗೋಪಾಲಪುರದ ನಡುವೆ ಗಂಟೆಗೆ ಸುಮಾರು 70 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಭೂಭಾಗವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಂಧ್ರಪ್ರದೇಶ: ಶ್ರೀಕಾಕುಳಂ, ವಿಜಯನಗರಂ, ಪಾರ್ವತಿಪುರಂ ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು, ವಿಶಾಖಪಟ್ಟಣಂ ಹಾಗೂ ಅನಕಪಲ್ಲಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ. ಅರ್ನಬ್ ಎಂದರೆ ಬಂಗಾಳಿಯಲ್ಲಿ ಸಮುದ್ರ ಎಂದರ್ಥ.

ಒಡಿಶಾ: ಗಂಜಾಂ, ಗಜಪತಿ, ಕೊರಾಪುಟ್, ಮಲ್ಕಂಗಿರಿ, ನಬರಂಗಪುರ, ಕಲಹಂಡಿ, ಬಾಲಂಗೀರ್ ಮತ್ತು ಬೌಧ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ವರ್ಷಧಾರೆಯಾಗಲಿದೆ.

ಮುನ್ನೆಚ್ಚರಿಕಾ ಕ್ರಮಗಳು

ಶಾಲೆಗಳಿಗೆ ರಜೆ: ಒಡಿಶಾದ ಗಂಜಾಂ, ಪುರಿ, ಖುರ್ದಾ, ಕೊರಾಪುಟ್ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಕಂದಾಯ, ವಿಪತ್ತು ನಿರ್ವಹಣೆ ಹಾಗೂ ಅಗತ್ಯ ಸೇವೆಗಳ ಎಲ್ಲ ಸರ್ಕಾರಿ ನೌಕರರ ರಜೆಗಳನ್ನು ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಸಂಚಾರ ನಿರ್ಬಂಧ: ಭೂಕುಸಿತದ ಅಪಾಯವಿರುವ ಕಳಿಂಗ ಘಾಟ್ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜತೆಗೆ ಚಿಲಿಕಾ ಸರೋವರದ ಶತಪದ ಮತ್ತು ಜಹ್ನಿಕುಡ ನಡುವಿನ ದೋಣಿ ಸಂಚಾರವನ್ನು ಸೆಪ್ಟೆಂಬರ್ 25ರವರೆಗೆ ಸ್ಥಗಿತಗೊಳಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF), ಅಗ್ನಿಶಾಮಕ ದಳ ಹಾಗೂ ರಕ್ಷಣಾ ಬೋಟ್‌ಗಳನ್ನು ತಗ್ಗು ಪ್ರದೇಶಗಳಲ್ಲಿ ಸನ್ನದ್ಧವಾಗಿಡಲಾಗಿದೆ.

ಮತ್ತಷ್ಟು ಓದಿ: ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ: ಕರಾವಳಿಯಲ್ಲಿ ವರುಣಾರ್ಭಟದ ಎಚ್ಚರಿಕೆ

ಸಾರ್ವಜನಿಕರಿಗೆ ಸಲಹೆ

ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ, ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳುವ ಅಪಾಯವಿದೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆತಂಕಪಡದೆ, ಅಧಿಕೃತ ಹವಾಮಾನ ಮುನ್ಸೂಚನೆಗಳನ್ನು ಗಮನಿಸುತ್ತಾ ಸುರಕ್ಷಿತವಾಗಿರಲು ಜಿಲ್ಲಾಡಳಿತಗಳು ಮನವಿ ಮಾಡಿವೆ.

ವಾಯುಭಾರ ಕುಸಿತ ಮತ್ತು ಚಂಡಮಾರುತದ ನಡುವಿನ ವ್ಯತ್ಯಾಸ

ಹವಾಮಾನ ಇಲಾಖೆಯ (IMD) ಮಾನದಂಡಗಳ ಪ್ರಕಾರ, ಗಾಳಿಯ ವೇಗ ಗಂಟೆಗೆ 31 ರಿಂದ 50 ಕಿ.ಮೀ ಇದ್ದರೆ ಅದನ್ನು ‘ವಾಯುಭಾರ ಕುಸಿತ’ ಎನ್ನಲಾಗುತ್ತದೆ. ಗಾಳಿಯ ವೇಗ ಗಂಟೆಗೆ 52 ರಿಂದ 61 ಕಿ.ಮೀ ತಲುಪಿದಾಗ ಅದು ‘ತೀವ್ರ ವಾಯುಭಾರ ಕುಸಿತ’ ಎನಿಸಿಕೊಳ್ಳುತ್ತದೆ. ಗಾಳಿಯ ನಿರಂತರ ವೇಗ ಗಂಟೆಗೆ 63 ಕಿ.ಮೀ (34 ನಾಟ್ಸ್) ಅಥವಾ ಅದಕ್ಕಿಂತ ಹೆಚ್ಚಾದಾಗ ಮಾತ್ರ ಅಧಿಕೃತವಾಗಿ ‘ಚಂಡಮಾರುತ’ಎಂದು ಪರಿಗಣಿಸಿ ‘ಅರ್ನಬ್’ ಎಂದು ಹೆಸರಿಸಲಾಗುತ್ತದೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿದ್ದು, ಗಾಳಿಯ ವೇಗ ಗಂಟೆಗೆ 70 ಕಿ.ಮೀ ವರೆಗೆ ತಲುಪುವ ಸಾಧ್ಯತೆ ಇರುವುದರಿಂದ ಬಂಗಾಳಕೊಲ್ಲಿಯ ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಮೀನುಗಾರಿಕೆಗೆ ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಬೋಟ್‌ಗಳನ್ನು ತಕ್ಷಣವೇ ಹತ್ತಿರದ ಕರಾವಳಿಗೆ ಮರಳುವಂತೆ ವೈರ್‌ಲೆಸ್ ಮೂಲಕ ಸಂದೇಶ ರವಾನಿಸಲಾಗಿದೆ.

ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಚಂಡಮಾರುತ ನಿರೋಧಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯುತ್ ವ್ಯತ್ಯಯವಾದರೂ ಕಾರ್ಯನಿರ್ವಹಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಜನರೇಟರ್, ಜೀವ ರಕ್ಷಕ ಔಷಧಗಳು, ಆಮ್ಲಜನಕ ಸಿಲಿಂಡರ್‌ಗಳು ಹಾಗೂ ಸಾಕಷ್ಟು ಒಣ ಪಡಿತರ ಸಾಮಗ್ರಿಗಳನ್ನು ಮೊದಲೇ ದಾಸ್ತಾನು ಮಾಡಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ