ಆಜಾದಿ ಕಾ ಅಮೃತ್ ಮಹೋತ್ಸವ: ‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ್ದು ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿ

ಬಿಎ ಪದವಿ ಪಡೆದ ನಂತರ ಹಸರತ್ ಮೊಹಾನಿಯವರು ಅಲಿಘಡ್ ನಿಂದ ‘ಉರ್ದು-ಎ-ಮುಲ್ಲಾ’ ಪತ್ರಿಕೆಯನ್ನು ಹೊರತಂದರು. ಈ ಪತ್ರಿಕೆ ಇಂಗ್ಲಿಷ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಲೇಖನ ಪ್ರಕಟಿಸುತಿತ್ತು. 1904 ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾದರು.

ಆಜಾದಿ ಕಾ ಅಮೃತ್ ಮಹೋತ್ಸವ: ‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ್ದು ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿ
ಹಸರತ್ ಮೊಹಾನಿ, ಸ್ವಾತಂತ್ರ್ಯ ಹೋರಾಟಗಾರ
Follow us
TV9 Web
| Updated By: Digi Tech Desk

Updated on: Aug 04, 2022 | 1:54 PM

Azadi Ka Amrit Mahotsav | ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಗಳಲ್ಲಿ ಘೋಷಣೆಗಳು (slogans) ವಹಿಸಿದ ಪಾತ್ರ ನಿಜಕ್ಕೂ ದೊಡ್ಡದು, ಜನರನ್ನು ಪ್ರೇರೇಪಿಸಲು, ಉತ್ಸಾಹ ತುಂಬಲು ಘೋಷಣೆಗಳನ್ನು ಬಳಸಲಾಗುತ್ತಿತ್ತು. ಅಂಥ ಒಂದು ಘೋಷಣೆಯೇ ‘ಇಂಕ್ವಿಲಾಬ್ ಜಿಂದಾಬಾದ್!’ (Inquilab Zindabad) ಭಗತ್ ಸಿಂಗ್ (Bhagat Singh) ತಮ್ಮ ಕ್ರಾಂತಿಕಾರಿ ಜೀವನದಲ್ಲಿ ಈ ಘೋಷಣೆಯನ್ನು ಅನೇಕ ಬಾರಿ ಬಹಳ ಯುಕ್ತವಾಗಿ ಮತ್ತು ಸಮರ್ಪಕವಾಗಿ ಬಳಸಿದರು. ಈ ಘೋಷಣೆಯನ್ನು 1921 ರಲ್ಲಿ ಮೊಟ್ಟಮೊದಲಿಗೆ ಬಳಸಿದ್ದು ಸ್ವಾತಂತ್ರ್ಯ ಹೋರಾಟಗಾರ ಹಸರತ್ ಮೊಹಾನಿಯವರು (Hasrat Mohani). ಇದು ಅವರ ಸ್ವಂತ ಲೇಖನಿಯಿಂದ ಸೃಷ್ಟಿಯಾದ ಘೋಷಣೆ ಅಂತ ಕೆಲವರಿಗಷ್ಟೇ ಗೊತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವ್ ಟಿವಿ9 ವಿಶೇಷ ಸರಣಿಯಲ್ಲಿ ಇಂದು ನಾವು ಹಸರತ್ ಮೊಹಾನಿ ಮತ್ತು ಅವರ ವಿರಚಿತ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯ ಬಗ್ಗೆ ಮಾತಾಡಲಿದ್ದೇವೆ.

ಹಸರತ್ ಜನಿಸಿದ್ದು ಉನ್ನಾವೋ ಜಿಲ್ಲೆಯ ಮೋಹನ್ ಗ್ರಾಮದಲ್ಲಿ

ಹಸರತ್ ಮೊಹಾನಿ 1875 ರಲ್ಲಿ ಉನ್ನಾವೋ ಜಿಲ್ಲೆಯ ಮೊಹಾನಿ ಗ್ರಾಮದಲ್ಲಿ ಹುಟ್ಟಿದರು. ಅವರ ನಿಜವಾದ ಹೆಸರು ‘ಸೈಯದ್ ಫಜ್ಲುಲ್ಹಸನ್’ ಮತ್ತು ಉಪನಾಮ ‘ಹಸ್ರತ್’ ಆಗಿತ್ತು. ಆದರೆ ಅವರು ಜನಪ್ರಿಯಗೊಂಡಿದ್ದು ಮಾತ್ರ ಹಸರತ್ ಮೊಹಾನಿ ಹೆಸರಿನಿಂದ. ಅವರ ಆರಂಭಿಕ ಶಿಕ್ಷಣ ಮನೆಯಲ್ಲೇ ನಡೆಯಿತು. 1903 ರಲ್ಲಿ, ಹಸರತ್ ಅಲಿಘಡ್ ಕಾಲೇಜೊಂದರಿಂದ ತಮ್ಮ ಬಿಎ ಪದವಿ ಪೂರ್ತಿಗೊಳಿಸಿದರು.

ಬ್ರಿಟಿಷ್ ಸರ್ಕಾರದ ನೀತಿಗಳನ್ನು ವಿರೋಧಿಸಿದರು

ಬಿಎ ಪದವಿ ಪಡೆದ ನಂತರ ಹಸರತ್ ಮೊಹಾನಿಯವರು ಅಲಿಘಡ್ ನಿಂದ ‘ಉರ್ದು-ಎ-ಮುಲ್ಲಾ’ ಪತ್ರಿಕೆಯನ್ನು ಹೊರತಂದರು. ಈ ಪತ್ರಿಕೆ ಇಂಗ್ಲಿಷ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಲೇಖನ ಪ್ರಕಟಿಸುತಿತ್ತು. 1904 ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾದರು.

ಬ್ರಿಟಿಷರು ಹಸರತ್ ರನ್ನು ಬಂಧಿಸಿದರು!

ಬ್ರಿಟಿಷ್ ಸರ್ಕಾರದ ನೀತಿಗಳನ್ನು ನಿರಂತರವಾಗಿ ವಿರೋಧಿಸುತ್ತಿದ್ದ ಮೊಹಾನಿ, 1907ರಲ್ಲಿ ತಮ್ಮ ದಿನಪತ್ರಿಕೆಯಲ್ಲಿ ‘ಈಜಿಪ್ಟ್ ನಲ್ಲಿ ಬ್ರಿಟನ್ನಿನ ನೀತಿ’ಗೆ ಸಂಬಂಧಿಸಿದ ಲೇಖನ ಪ್ರಕಟಿಸಿದರು. ಇದು ಬ್ರಿಟಿಷರನ್ನು ತೀವ್ರವಾಗಿ ಅಸಮಾಧಾನಗೊಳಿಸಿತು ಮತ್ತು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. 1919 ರಲ್ಲಿ ನಡೆದ ಖಿಲಾಫತ್ ಚಳವಳಿಯಲ್ಲೂ ಅವರು ಭಾಗಿಯಾಗಿದ್ದರು.

1921 ರಲ್ಲಿ ಬರೆದ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ

ಹಸರತ್ ಮೊಹಾನಿ 1921 ರಲ್ಲಿ ತಮ್ಮ ಲೇಖನಿಯಿಂದ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಬರೆದರು. ನಂತರದ ದಿನಗಳಲ್ಲಿ ಈ ಘೋಷಣೆ ಯಾವಮಟ್ಟಿಗೆ ಪ್ರಸಿದ್ಧಿಗೊಂಡಿತು ಮತ್ತು ಜನಪ್ರಿಯವಾಯಿತು ಅಂತ ಭಾರತೀಯರೆಲ್ಲರಿಗೆ ಗೊತ್ತಿದೆ. ಭಗತ್ ಸಿಂಗ್ ತಮ್ಮ ಕ್ರಾಂತಿಕಾರಿ ಬದುಕಿನುದ್ದಕ್ಕೂ ಈ ಘೋಷಣೆಯನ್ನು ಎಡೆಬಿಡದೆ ಬಳಸಿದರು. ಭಾರತೀಯರಲ್ಲಿ ಸುಪ್ತವಾಗಿದ್ದ ಸ್ವಾತಂತ್ರ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಈ ಘೋಷಣೆ ಬಹಳ ಸಹಕಾರಿಯಾಯಿತು.

ಹಸರತ್ ಹಿಂದೂ-ಮುಸ್ಲಿಂ ಏಕತೆಯ ಪರವಾಗಿದ್ದರು

ಹಸರತ್ ಮೊಹಾನಿ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಐಕ್ಯತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯ ಪ್ರತಿಪಾದಕರಾಗಿದ್ದರು. ಬಾಲಗಂಗಾಧರ ತಿಲಕ್ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರ ಆತ್ಮೀಯ ಸ್ನೇಹಿತರಲ್ಲಿ ಹಸರತ್ ಕೂಡ ಒಬ್ಬರಾಗಿದ್ದರು. ಶ್ರೀಕೃಷ್ಣನ ಭಕ್ತಿಯಲ್ಲೂ ಅವರು ಕಾವ್ಯ ರಚಿಸಿದರು. 1946 ರಲ್ಲಿ ಭಾರತದ ಸಂವಿಧಾನ ಸಭೆ ರಚನೆ ಸಮಯದಲ್ಲಿ ಅವರನ್ನು ಆ ಸಭೆಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ದೇಶದ ವಿಭಜನೆಯನ್ನು ವಿರೋಧಿಸಿದರು!

ಲೇಖಕ, ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮ ಜೀವನದುದ್ದಕ್ಕೂ ಬ್ರಿಟಿಷ್ ಸರ್ಕಾರವನ್ನು ವಿರೋಧಿಸಿದ ಹಸರತ್ ಮೊಹಾನಿ ಅವರು 1947 ರಲ್ಲಿ ಭಾರತದ ವಿಭಜನೆಯನ್ನು ಉಗ್ರವಾಗಿ ವಿರೋಧಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಆಯ್ಕೆಯ ವಿಷಯ ಬಂದಾಗ, ಹಸರತ್ ಮೊಹಾನಿ ಭಾರತದಲ್ಲಿ ಉಳಿಯಲು ನಿರ್ಧರಿಸಿದರು. ಮೇ 13, 1951 ರಂದು ಹಸರತ್ ಆಕಸ್ಮಿಕ ಮರಣವನ್ನಪ್ಪಿದರು. 2014 ರಲ್ಲಿ, ಭಾರತ ಸರ್ಕಾರವು ಅವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್