135 ವರ್ಷಗಳ ಬಳಿಕ ಬಸ್ತರ್ ಅರಮನೆಯಲ್ಲಿ ನಡೆಯಿತು ರಾಜನ ಐತಿಹಾಸಿಕ ಮದುವೆ
ಬಸ್ತರ್ ರಾಜಮನೆತನದ ಕಮಲ್ಚಂದ್ ಭಂಜ್ದೇವ್ ಗುರುವಾರ ವಿವಾಹವಾಗಿದ್ದಾರೆ. 135 ವರ್ಷಗಳ ಬಳಿಕ ಈ ಅರಮೆನಯಲ್ಲಿ ಮದುವೆ ನಡೆದಿರುವುದರಿಂದ ಈ ಮದುವೆಯಲ್ಲಿ ಅತ್ಯಂತ ವೈಭವದಿಂದ ನಡೆಸಲಾಯಿತು. ದೀಪಗಳಿಂದ ಅಲಂಕೃತವಾಗಿದ್ದ ಅರಮನೆ ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಐತಿಹಾಸಿಕ ವಿವಾಹಕ್ಕೆ ಸಾಕ್ಷಿಯಾಗಿದೆ. ಇದುವರೆಗೂ ರಾಜಮನೆತನದ ಸದಸ್ಯರ ವಿವಾಹಗಳು ಬಸ್ತರ್ ಪ್ರದೇಶದ ಹೊರಗೆ ನಡೆದಿದ್ದವು. ನಿನ್ನೆ ನಡೆದ ರಾಜಮನೆತನದ ವಿವಾಹ ಸಾಂಪ್ರದಾಯಿಕವಾಗಿ ಅರಮನೆಯೊಳಗೇ ನಡೆದಿದ್ದು ವಿಶೇಷ. ಮಾ ದಂತೇಶ್ವರಿಯನ್ನು ಬಸ್ತರ್ ರಾಜಮನೆತನದ ಹಾಗೂ ಸ್ಥಳೀಯ ಜನರ ಪ್ರಧಾನ ದೇವತೆ ಎಂದು ಪರಿಗಣಿಸಲಾಗುತ್ತದೆ. ಬಸ್ತರ್ ರಾಜಮನೆತನದ ಮಹಾರಾಜ ಕಮಲಚಂದ್ರ ರಾಜಕುಮಾರಿ ಭುವನೇಶ್ವರಿಯನ್ನು ವಿವಾಹವಾಗಿದ್ದಾರೆ.

ಬಸ್ತರ್: ಛತ್ತೀಸ್‌ಗಢದ ಬಸ್ತರ್ ರಾಜಮನೆತನದಲ್ಲಿ 135 ವರ್ಷಗಳ ನಂತರ ಒಂದು ಐತಿಹಾಸಿಕ ಮದುವೆ ನಡೆದಿದೆ. ಗುರುವಾರ ಇಲ್ಲಿನ ಅರಮನೆಯಿಂದ ರಾಜಮನೆತನದ ಮೆರವಣಿಗೆ ಪ್ರಾರಂಭವಾಯಿತು. ಮಹಾರಾಜ ಕಮಲಚಂದ್ರ ಭಂಜದೇವ್ ನಿನ್ನೆ ಮಧ್ಯಪ್ರದೇಶದ ಕಿಲಾ ನಗೌಡ್ ರಾಜಮನೆತನದ ರಾಜಕುಮಾರಿ ಭುವನೇಶ್ವರಿ ಕುಮಾರಿ ಅವರನ್ನು ವಿವಾಹವಾಗಿದ್ದಾರೆ. ದೇಶಾದ್ಯಂತದ 100ಕ್ಕೂ ಹೆಚ್ಚು ರಾಜಮನೆತನದ ಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು ಮತ್ತು ವಿಶೇಷ ಅತಿಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದಾರೆ. 5 ತಲೆಮಾರುಗಳ ನಂತರ ಬಸ್ತರ್ ಅರಮನೆಯಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ರಾಜನ ವಿವಾಹವು ನಡೆದಿದೆ.
ಬಸ್ತರ್ ರಾಜಮನೆತನದಲ್ಲಿ ಕೊನೆಯ ವಿವಾಹ 1918ರಲ್ಲಿ ಮಹಾರಾಜ ರುದ್ರಪ್ರತಾಪ್ ದೇವ್ ಅವರದ್ದಾಗಿತ್ತು. ಇದರ ನಂತರ, ಸಿಂಹಾಸನದ ಮೇಲೆ ಕುಳಿತ ಯಾವುದೇ ರಾಜನ ವಿವಾಹ ಬಸ್ತರ್ ಅರಮನೆಯಲ್ಲಿ ನಡೆದಿಲ್ಲ. 135 ವರ್ಷಗಳ ನಂತರ ಇಲ್ಲಿ ವಿವಾಹ ಮೆರವಣಿಗೆ ನಡೆದಿದ್ದು, ಸಿಂಹಾಸನದ ಮೇಲೆ ಕುಳಿತ ರಾಜನ ವಿವಾಹ 107 ವರ್ಷಗಳ ನಂತರ ಅರಮನೆಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಮದುವೆಗೆ ಟೆಂಪಲ್ ಹಾಗೂ ಗೋಲ್ಡ್ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಮಾಹಿತಿಯ ಪ್ರಕಾರ, ಮಹಾರಾಜ ಪ್ರವೀರ್ಚಂದ್ರ ಭಂಜದೇವ್ 1961ರಲ್ಲಿ ದೆಹಲಿಯಲ್ಲಿ, ವಿಜಯ್ ಚಂದ್ರ ಭಂಜದೇವ್ 1954ರಲ್ಲಿ ಗುಜರಾತ್‌ನಲ್ಲಿ ವಿವಾಹವಾದರು. ಭರತಚಂದ್ರ ಭಂಜದೇವ್ ಕೂಡ ಗುಜರಾತ್‌ನಲ್ಲಿ ವಿವಾಹವಾದರು. ಈಗ, 5 ತಲೆಮಾರುಗಳ ನಂತರ ಮೊದಲ ಬಾರಿಗೆ, ಬಸ್ತರ್ ಅರಮನೆಯಲ್ಲಿ ರಾಜಮನೆತನದ ವಿವಾಹ ನಡೆದಿದೆ. ಇಲ್ಲಿ 135 ವರ್ಷಗಳ ನಂತರ ಬುಧವಾರ ಅರಮನೆಯಿಂದ ರಾಜಮನೆತನದ ಮೆರವಣಿಗೆಯನ್ನು ಹೊರತೆಗೆಯಲಾಯಿತು. ವರ ಕಮಲಚಂದ್ರ ಭಂಜದೇವ್ ನಗರದಲ್ಲಿ ಆನೆಯ ಮೇಲೆ ಸವಾರಿ ಮಾಡಿದರು.
ಇದನ್ನೂ ಓದಿ: ವಿವಾಹಿತ ಪುರುಷನಿಗೆ ಇಬ್ಬರು ಹೆಂಡತಿಯರು ಇರಬಹುದೇ? ಭಾರತೀಯ ಕಾನೂನು ಹೇಳೋದೇನು?
ಆನೆಯ ಮೇಲೆ ಸವಾರಿ ಮಾಡಿದ ರಾಜ ಕಮಲ್‌ಚಂದ್ ಭಂಜದೇವ್, ರಾಜಮನೆತನದ ಸಂಬಂಧಿಕರು ಮತ್ತು ಅತಿಥಿಗಳೊಂದಿಗೆ ಅರಮನೆಯಿಂದ ಮಾ ದಂತೇಶ್ವರಿಯ ಆಶೀರ್ವಾದ ಪಡೆದರು. ವಧು ಹೆಲಿಕಾಪ್ಟರ್ ಮೂಲಕ ತನ್ನ ಗಂಡನ ಮನೆಗೆ ತಲುಪಿದರು. ಮಾವ ಸೊಸೆಯನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದರು. ಜಗದಲ್ಪುರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆದು ರಾಜ್ ಮಹಲ್ ತಲುಪಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




