ಕೇರಳದ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಿನದ್ದು ಬ್ರೇಕ್‌ಥ್ರೂ ಇನ್‌ಫೆಕ್ಷನ್‌, ರೋಗಲಕ್ಷಣಗಳ ತೀವ್ರತೆ ಕಡಿಮೆ

ಕೇರಳದಲ್ಲಿ ಇಲ್ಲಿಯವರೆಗೆ ಅರ್ಹ ಜನಸಂಖ್ಯೆಯ 95 ಪ್ರತಿಶತದಷ್ಟು ಜನರು ಮೊದಲ ಲಸಿಕೆ ಪಡೆದಿದ್ದು ಅವರಲ್ಲಿ 52 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.  ಪ್ರಸ್ತುತ, ಭಾರತದಲ್ಲಿನ ದೈನಂದಿನ ಪ್ರಕರಣಗಳ ಎಣಿಕೆಯಲ್ಲಿ ಸುಮಾರು 50 ಪ್ರತಿಶತದಷ್ಟು ಕೇರಳದಿಂದ ವರದಿಯಾಗುತ್ತಿದೆ.

ಕೇರಳದ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಿನದ್ದು ಬ್ರೇಕ್‌ಥ್ರೂ ಇನ್‌ಫೆಕ್ಷನ್‌, ರೋಗಲಕ್ಷಣಗಳ ತೀವ್ರತೆ ಕಡಿಮೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 05, 2021 | 1:23 PM

ತಿರುವನಂತಪುರಂ: ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ ಕಳೆದ ಎರಡು ವಾರಗಳಲ್ಲಿ ಕೇರಳದಲ್ಲಿ ದಿನನಿತ್ಯದ ಕೊವಿಡ್ (Covid-19)  ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಸಂಪೂರ್ಣ ಲಸಿಕೆ ಪಡೆದವರಲ್ಲಿ ಕಾಣಿಸಿಕೊಂಡಿರುವ  ಬ್ರೇಕ್ ಥ್ರೂ ಇನ್ ಫೆಕ್ಷನ್ ಅಥವಾ ಪ್ರಕರಣಗಳು ಆಗಿವೆ. ಆದರೆ ವ್ಯಾಕ್ಸಿನೇಷನ್ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಿರುವುದರಿಂದ ಆಮ್ಲಜನಕದ ಹಾಸಿಗೆಗಳು ಅಥವಾ ಐಸಿಯು ಪ್ರವೇಶದ ಅಗತ್ಯವಿರುವ ಪ್ರಕರಣಗಳ ಒಂದು ಸಣ್ಣ ಭಾಗ ಮಾತ್ರ ಎಂದು ಅಧಿಕಾರಿಗಳು ಹೇಳಿದರು. ಅಕ್ಟೋಬರ್ 19 ರಿಂದ ನವೆಂಬರ್ 2 ರವರೆಗೆ ಕಳೆದ 15 ದಿನಗಳಲ್ಲಿ ಕೇರಳದಿಂದ 1,19,401 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ ಎಂದು ಡೇಟಾ ತೋರಿಸುತ್ತದೆ. ಇವುಗಳಲ್ಲಿ, 1,00,593 ಲಸಿಕೆಗೆ ಅರ್ಹತೆ ಹೊಂದಿದ್ದು, 67,980 (ಶೇ. 57.9) ಒಟ್ಟು ಪ್ರಕರಣಗಳ ಎಣಿಕೆ ಎರಡೂ ಡೋಸ್‌ಗಳು ಅಥವಾ ಒಂದೇ ಡೋಸ್ ಅನ್ನು ಪಡೆದುಕೊಂಡಿದೆ.

ಧನಾತ್ಮಕ ಪ್ರಕರಣಗಳಲ್ಲಿ ವ್ಯಾಕ್ಸಿನೇಷನ್‌ಗೆ ಅರ್ಹರಾದವರಲ್ಲಿ 40,584 (ಒಟ್ಟು ಎಣಿಕೆಯ ಶೇಕಡಾ 34.9) ಸಂಪೂರ್ಣವಾಗಿ ಲಸಿಕೆಯನ್ನು ಹಾಕಲಾಗಿದೆ. 27,396 ಮಂದಿ (ಒಟ್ಟು ಎಣಿಕೆಯ ಶೇಕಡಾ 22.9) ಕೇವಲ ಒಂದು ಡೋಸ್ ಲಸಿಕೆ ಹಾಕಿಸಿದ್ದರು. ಉಳಿದವರು ಲಸಿಕೆ ಹಾಕಿಸಿಕೊಂಡಿಲ್ಲ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿತ್ತು. ಲಸಿಕೆಯು ಸೋಂಕಿನ ತೀವ್ರತೆಯನ್ನು ತಡೆಯುತ್ತದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದರು. ಕಳೆದ ಒಂದು ವಾರದಲ್ಲಿ 77,516 ಸಕ್ರಿಯ ಪ್ರಕರಣಗಳಲ್ಲಿ ಕೇವಲ 2 ಪ್ರತಿಶತದಷ್ಟು ಮಾತ್ರ ಆಮ್ಲಜನಕ ಹಾಸಿಗೆಗಳ ಅಗತ್ಯವಿದೆ ಮತ್ತು ಸುಮಾರು 1.5 ಪ್ರತಿಶತದಷ್ಟು ರೋಗಿಗಳಿಗೆ ಮಾತ್ರ ಐಸಿಯು ಪ್ರವೇಶದ ಅಗತ್ಯವಿದೆ ಎಂದು  ಹೇಳಿದರು.

ರಾಜ್ಯದಲ್ಲಿ ಇಲ್ಲಿಯವರೆಗೆ ಅರ್ಹ ಜನಸಂಖ್ಯೆಯ 95 ಪ್ರತಿಶತದಷ್ಟು ಜನರು ಮೊದಲ ಲಸಿಕೆ ಪಡೆದಿದ್ದು ಅವರಲ್ಲಿ 52 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.  ಪ್ರಸ್ತುತ, ಭಾರತದಲ್ಲಿನ ದೈನಂದಿನ ಪ್ರಕರಣಗಳ ಎಣಿಕೆಯಲ್ಲಿ ಸುಮಾರು 50 ಪ್ರತಿಶತದಷ್ಟು ಕೇರಳದಿಂದ ವರದಿಯಾಗುತ್ತಿದೆ, ಇದು ದೇಶದ ಸಕ್ರಿಯ ಪ್ರಕರಣಗಳಲ್ಲಿ 45 ಪ್ರತಿಶತದಷ್ಟಿದೆ.

ರಾಜ್ಯದ ಇತ್ತೀಚಿನ ಸೆರೋಪ್ರೆವೆಲೆನ್ಸ್ ಸಮೀಕ್ಷೆಯಿಂದ ಬಹಿರಂಗಗೊಂಡಂತೆ ಕೇರಳವು ಮುಖ್ಯವಾಗಿ ಸೋಂಕಿನಿಂದ ಹೆಚ್ಚಾಗಿ ವ್ಯಾಕ್ಸಿನೇಷನ್‌ನಿಂದ ರೋಗ ಪ್ರತಿರೋಧ ಶಕ್ತಿ ಪಡೆದಿದೆ ಎಂದು ವೀಣಾ ಜಾರ್ಜ್ ಹೇಳಿದರು.

ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳು ಸೋಂಕಿಗೆ ಒಳಗಾಗುತ್ತಿದ್ದರೂ, ಕೊವಿಡ್‌ನಿಂದಾಗಿ ಅವರಲ್ಲಿ ಸಾವುಗಳು ಬಹಳ ವಿರಳ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸಾವನ್ನಪ್ಪಿದ ಸಂದರ್ಭಗಳಲ್ಲಿ ಸಂತ್ರಸ್ತರು ತುಂಬಾ ವಯಸ್ಸಾದವರು ಅಥವಾ ತೀವ್ರವಾದ ಕೊಮೊರ್ಬಿಡಿಟಿ ಅಂಶಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.

ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ಮೊದಲ ಆರೋಗ್ಯ ಕಾರ್ಯಕರ್ತರು ಈ ದಿನಗಳಲ್ಲಿ ನಿಯಮಿತವಾಗಿ ಸೋಂಕಿಗೆ ಒಳಗಾಗುವವರಲ್ಲಿ ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಇದರ ಹೊರತಾಗಿ, ವ್ಯಾಕ್ಸಿನೇಷನ್ ಎಲ್ಲಾ ವರ್ಗಗಳ ಜನರಲ್ಲಿ ತಪ್ಪು ವಿಶ್ವಾಸವನ್ನು ನೀಡಿದೆ, ಇದು ಕೊವಿಡ್ ಪ್ರೋಟೋಕಾಲ್ ನಿರ್ಲಕ್ಷಿಸಲು ಅನೇಕರನ್ನು ಪ್ರೇರೇಪಿಸುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಶಿಕ್ಷಕರು ಮೊದಲು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೊವಿಡ್ ಕುರಿತು ರಾಜ್ಯದ ತಜ್ಞರ ಸಮಿತಿಯ ಸದಸ್ಯ ಡಾ ಟಿ ಎಸ್ ಅನೀಶ್ ಹೇಳಿದ್ದಾರೆ.

ಸಂಪೂರ್ಣವಾಗಿ ಲಸಿಕೆ ಹಾಕಿದವರಲ್ಲಿ ಸೋಂಕು ಕಂಡು ಬಂದ ಕಾರಣ ಸಂಪೂರ್ಣವಾಗಿ ಲಸಿಕೆ ಹಾಕಿದವರಲ್ಲಿ ರೋಗ ಪ್ರತಿರೋಧ  ಶಕ್ತಿ ಕಡಿಮೆಯಾಗುತ್ತಿದೆಯೇ ಎಂದು ಅನುಮಾನಿಸಲು ಕಾರಣವಾಗಿದೆ. ಮತ್ತೊಂದು ಅಂಶವೆಂದರೆ, ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಹೊಂದಿರುವವರಲ್ಲಿ ಆರೋಗ್ಯ ಕಾರ್ಯಕರ್ತರು ಬೇಗನೆ ಪರೀಕ್ಷೆಗೊಳಗಾಗುತ್ತಾರೆ ”ಎಂದು ಅವರು ಹೇಳಿದರು.

ಕೊವಿಡ್‌ನ ನೈಸರ್ಗಿಕ ಸೋಂಕು ಅತಿ ಹೆಚ್ಚು ಇರುವ ಸ್ಥಳಗಳು ಅಥವಾ ರಾಜ್ಯಗಳಲ್ಲಿ, ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಅನೀಶ್ ಹೇಳಿದರು.

“ಕೇರಳವು ನೈಸರ್ಗಿಕ ಸೋಂಕಿನ ಬದಲು ಲಸಿಕೆಯಿಂದ ರೋಗ ಪ್ರತಿರೋಧ ಶಕ್ತಿ ಹೊಂದಿತ್ತು ಮತ್ತು ರಾಜ್ಯವು ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಪ್ರಕರಣಗಳಿಗೆ ಗುರಿಯಾಗಿದೆ. ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಆರೋಗ್ಯ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ. ವ್ಯಾಕ್ಸಿನೇಷನ್ ನಂತರ ಸಂಭವಿಸುವ ಸೋಂಕುಗಳಲ್ಲಿ, ರೋಗಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಸೌಮ್ಯ ಲಕ್ಷಣಗಳಿರುವ ಇಂತಹ ಪ್ರಕರಣಗಳನ್ನು ಪರಿಣಾಮಕಾರಿ ಪರೀಕ್ಷಾ ತಂತ್ರಗಳ ಮೂಲಕ ಮಾತ್ರ ಪತ್ತೆ ಹಚ್ಚಬಹುದು,’’ ಎಂದು ಹೇಳಿದರು.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯ ಮಹಿಳಾ ಕೇಂದ್ರಿತ ಭರವಸೆಗಳು ಉತ್ತರ ಪ್ರದೇಶದ ಚುನಾವಣೆಗಾಗಿ ಮಾತ್ರ: ಕಾಂಗ್ರೆಸ್ ಪಕ್ಷದ ನಾಯಕರು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್