AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕನಾಥ್ ಶಿಂದೆ ದತ್ತು ಪಡೆದ ಕುಗ್ರಾಮಕ್ಕಿಲ್ಲ ಪ್ರಾಥಮಿಕ ಕೇಂದ್ರ, ದಾರಿ ಮಧ್ಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಹಾರಾಷ್ಟ್ರದ ಬುಡಕಟ್ಟು ಜನಾಂಗದ ಗರ್ಭಿಣಿಯೊಬ್ಬರಿಗೆ ಭಾನುವಾರ (ಅ.1) ಬೆಳಿಗ್ಗೆ ಹೇರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಮನೆಯಿಂದ ಸರಿಯಾದ ರಸ್ತೆ ಇಲ್ಲದ ಕಾರಣ ಆಕೆಯನ್ನು ಗ್ರಾಮಸ್ಥರು 'ಧೋಲಿ'ಯಲ್ಲಿ (ತಾತ್ಕಾಲಿಕ ಸ್ಟ್ರೆಚರ್) ಹೊತ್ತೊಯ್ದು ಸಾರಿಗೆ ರಸ್ತೆಗೆ ಬಂದಿದ್ದಾರೆ. ಆದರೆ ಆ ಮಹಿಳೆಗೆ ದಾರಿ ಮಧ್ಯದಲ್ಲೇ ಹೇರಿಗೆಯಾಗಿದೆ.

ಏಕನಾಥ್ ಶಿಂದೆ ದತ್ತು ಪಡೆದ ಕುಗ್ರಾಮಕ್ಕಿಲ್ಲ ಪ್ರಾಥಮಿಕ ಕೇಂದ್ರ, ದಾರಿ ಮಧ್ಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 02, 2023 | 12:41 PM

Share

ಥಾಣೆ, ಅ.2: ಬುಡಕಟ್ಟು ಜನಾಂಗದ ಗರ್ಭಿಣಿಯೊಬ್ಬರಿಗೆ ಭಾನುವಾರ (ಅ.1) ಬೆಳಿಗ್ಗೆ ಹೇರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಮನೆಯಿಂದ ಸರಿಯಾದ ರಸ್ತೆ ಇಲ್ಲದ ಕಾರಣ ಆಕೆಯನ್ನು ಗ್ರಾಮಸ್ಥರು ‘ಧೋಲಿ’ಯಲ್ಲಿ (ತಾತ್ಕಾಲಿಕ ಸ್ಟ್ರೆಚರ್) ಹೊತ್ತೊಯ್ದು ಸಾರಿಗೆ ರಸ್ತೆಗೆ ಬಂದಿದ್ದಾರೆ. ಆದರೆ ಆ ಮಹಿಳೆಗೆ ದಾರಿ ಮಧ್ಯದಲ್ಲೇ ಹೇರಿಗೆಯಾಗಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ.

ಇದೀಗ ಮಹಿಳೆಯನ್ನು ‘ಧೋಲಿ’ಯಲ್ಲಿ ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಹಿಳೆಯನ್ನು ಪಾಟಿಕಾಚಾ ಪದಾ ಕುಗ್ರಾಮದವರು ಎಂದು ಗುರುತಿಸಲಾಗಿದೆ. ಆಕೆಯ ಕುಟುಂಬ ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಬೆಳಗಿನ ಜಾವ ಆಸ್ಪತ್ರೆಗೆ ದೋಳಿಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಆದರೆ ಆಕೆ ದಾರಿ ಮಧ್ಯದಲ್ಲೇ ಮಧ್ಯಾಹ್ನದ ವೇಳೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಗ್ರಾಮಸ್ಥರು ಮತ್ತು ಆಶಾ ಕಾರ್ಯಕರ್ತೆಯೊಬ್ಬರು ತಿಳಿಸಿದ್ದಾರೆ.

ನಂತರ ಅಲ್ಲಿಂದ ಆಕೆ ಮತ್ತು ಮಗುವನ್ನು ಖಾಸಗಿ ವಾಹನದಲ್ಲಿ ಕಾಸರ ಪ್ರಾಥಮಿಕ ಕೇಂದ್ರಕ್ಕೆ ಸಾಗಿಸಲಾಗಿದೆ. ನಮ್ಮ ಊರಿನಲ್ಲಿ ಆಸ್ಪತ್ರೆಗೆ ಹೋಗಬೇಕಾದರೆ ಹೊಳೆಗಳು ಮತ್ತು ಕಡಿದಾದ ಮಾರ್ಗಗಳನ್ನು ದಾಟಿಯೇ ಹೋಗುಬೇಕು. ಈ ಕಾರಣದಿಂದಲ್ಲೇ ಆಕೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಏಕನಾಥ್ ಶಿಂದೆ ಕನಸ್ಸಿನಲ್ಲಿಯೂ ರಾಜೀನಾಮೆ ನೀಡುವುದಿಲ್ಲ: ಅಜಿತ್ ಪವಾರ್

ಇನ್ನು ನಮ್ಮ ಜತೆಗೆ ಆಶಾಕಾರ್ಯಕರ್ತೆಯೊಬ್ಬರು ಬಂದ ಕಾರಣದಿಂದ ಆಕೆಗೆ ಸುಲಭವಾಗಿ ಹೇರಿಗೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಸಮಿಶ್ರ ಸರ್ಕಾರದಲ್ಲಿ ಥಾಣೆ ಜಿಲ್ಲೆಯ ಉಸ್ತುವರಿ ಸಚಿವರಾಗಿದ್ದಾಗ ನಮ್ಮ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇದೀಗ ತಾಯಿ ಮತ್ತು ಮಗು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ