ಮಹಿಳೆಯರೇ… ಸರ್ಕಾರದಿಂದ ಸಿಗಲಿದೆ ನಿಮಗೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Free Sewing Machine Scheme 2024: ಮಹಿಳೆಯರ ಸ್ವಾವಲಂಬಿ ಬದುಕನ್ನು ಬೆಂಬಲಿಸಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಪ್ರಾರಂಭಿಸಿವೆ. ಅಂತಹ ಪ್ರಮುಖ ಯೋಜನೆಗಳಲ್ಲಿ ಫ್ರೀ ಹೊಲಿಯ ಯಂತ್ರ ಸ್ಕೀಮ್‌ ಕೂಡಾ ಒಂದು. ಇದೀಗ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಸುಮಾರು 50 ಸಾವಿರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ, ವಯೋಮಿತಿ ಅಗತ್ಯ ದಾಖಲೆಗಳು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರೇ… ಸರ್ಕಾರದಿಂದ ಸಿಗಲಿದೆ ನಿಮಗೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 13, 2024 | 6:37 PM

ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು, ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಪ್ರಾರಂಭಿಸಿವೆ. ಅಂತಹ ಯೋಜನೆಗಳಲ್ಲಿ ಒಂದು ಉಚಿತ ಹೊಲಿಗೆ ಯಂತ್ರ ಸ್ಕೀಮ್.‌ ಭಾರತ ಸರ್ಕಾರವು ದೇಶದ ಬಡ ಕುಟುಂಬಗಳ ಮಹಿಳೆಯರಿಗಾಗಿ ಪ್ರಾರಂಭಿಸಿದ ಯೋಜನೆ ಇದಾಗಿದ್ದು, ಇದು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದೀಗ ಈ ಯೋಜನೆಯಡಿ ಸುಮಾರು 50 ಸಾವಿರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗಲಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ 2024:

ಬಡ ಮತ್ತು ಆರ್ಥಿಕವಾಗಿ ದುರ್ಬಲವಿರುವ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸ್ವ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಡಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಯೋಜನೆ ಇದಾಗಿದೆ. ಈ ಯೋಜನೆಯು ಟೈಲರಿಂಗ್‌ ಕೆಲಸದ ಮೂಲಕ ಮಹಿಳೆಯರು ಮನೆಯಿಂದಲೇ ಹಣವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಡಿ ಉಚಿತವಾಗಿ ಹೊಲಿಗೆಯಂತ್ರವನ್ನು ಪಡೆಯುವ ಮೂಲಕ ಮಹಿಳೆಯರು ಸ್ವ-ಉದ್ಯೋಗವನ್ನು ಪಡೆಯುವುದರ ಜೊತೆಗೆ ಅವರು ಆರ್ಥಿಕವಾಗಿ ಸ್ವತಂತ್ರರಾಗಬಹುದು.

ಸುಮಾರು 50 ಸಾವಿರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗಲಿದ್ದು, ಕರ್ನಾಟಕ ಸೇರಿದಂತೆ ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಈ ರಾಜ್ಯಗಳ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

• ವಯೋಮಿತಿ : ಅರ್ಜಿದಾರರು 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು.

• ಆದಾಯ ಮಿತಿ : ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು ರೂ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.

• ಸರ್ಕಾರಿ ನೌಕರಿ ಇಲ್ಲ: ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅಂತಹ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಲ್ಲ.

• ಭಾರತೀಯ ಪೌರತ್ವ : ಭಾರತೀಯ ಪೌರತ್ವವನ್ನು ಹೊಂದಿರುವ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:

1. ಮೊದಲಿಗೆ, ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಒಮ್ಮೆ ವೆಬ್‌ಸೈಟ್‌ನಲ್ಲಿ, ಉಚಿತ ಹೊಲಿಗೆ ಮೆಷಿನ್ ಯೋಜನೆ 2024 (Free Sewing Machine Scheme 2024) ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.

3. ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮಹಿಳೆಯರು ತಮ್ಮ ಹತ್ತಿರದ ಮಹಿಳಾ ಸಬಲೀಕರಣ ಕೇಂದ್ರ ಅಥವಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ನೀವು ಅಲ್ಲಿಂದ ಅರ್ಜಿ ನಮೂನೆಯನ್ನು ಪಡೆದು, ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅದನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

• ಆಧಾರ್ ಕಾರ್ಡ್

• ಆದಾಯ ಪ್ರಮಾಣಪತ್ರ

• ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್

• ಪಾಸ್ಪೋರ್ಟ್ ಸೈಜ್ ಫೋಟೋ

• ವಾಸಸ್ಥಳ ದೃಢೀಕರಣ ಪತ್ರ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Fri, 13 December 24

ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ