AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾದಿನಿಗೆ ಮದುವೆ ಮಾಡಿಸಿದ್ದಕ್ಕೆ ಬಾವನಿಗೆ ಕೋಪ, ಬೆದರಿಕೆ, ಮೂರು ಮಂದಿ ಆತ್ಮಹತ್ಯೆ

ನಾದಿನಿ ಮದುವೆ ಏಕೆ ಮಾಡಿಸಿದಿರಿ, ನಿತ್ಯ ಅಳಿಯನಿಂದ ಅತ್ತೆಗೆ ಇದೇ ಪ್ರಶ್ನೆ, ಬೆದರಿಕೆ. ಇದರಿಂದ ಬೇಸತ್ತು ಇಬ್ಬರು ವಿವಾಹಿತ ಹೆಣ್ಣುಮಕ್ಕಳ ಜತೆ ಅತ್ತೆಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಅಳಿಯನ ಕಾಟದಿಂದ ಬೇಸತ್ತು ಇಬ್ಬರು ವಿವಾಹಿತ ಹೆಣ್ಣುಮಕ್ಕಳೊಂದಿಗೆ ಅತ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಡ್ಡಿ ದೇವಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದ್ದರೆ, ಇಬ್ಬರು ಹೆಣ್ಣುಮಕ್ಕಳಾದ ನಿಶಾ ಹಾಗೂ ಪೂಜಾ ಶವ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಆರೋಪ ಈಗ ಅಮೆರಿಕದಲ್ಲಿರುವ ಅಳಿಯನ ಮೇಲೆ ಬಂದಿದೆ.

ನಾದಿನಿಗೆ ಮದುವೆ ಮಾಡಿಸಿದ್ದಕ್ಕೆ ಬಾವನಿಗೆ ಕೋಪ, ಬೆದರಿಕೆ,  ಮೂರು ಮಂದಿ ಆತ್ಮಹತ್ಯೆ
ಸಾವುImage Credit source: TV9 Bharatvarsh
ನಯನಾ ರಾಜೀವ್
|

Updated on:Jun 01, 2025 | 9:51 AM

Share

ಹರಿಯಾಣ, ಜೂನ್ 01: ನಾದಿನಿಗೆ ಮದುವೆ (Marriage)ಮಾಡಿಸಿದ್ದಕ್ಕೆ ಕೋಪಗೊಂಡು ಬಾವ ಅಮೆರಿಕದಿಂದಲೇ ಬೆದರಿಕೆ ಹಾಕಲು ಶುರು ಮಾಡಿದ್ದ. ಬೆದರಿಕೆಯಿಂದ ಬೇಸತ್ತು ಮೂರು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಕೈಥಾಲ್​ನಲ್ಲಿ ನಡೆದಿದೆ. ಅಳಿಯನ ಕಾಟದಿಂದ ಬೇಸತ್ತು ಇಬ್ಬರು ವಿವಾಹಿತ ಹೆಣ್ಣುಮಕ್ಕಳೊಂದಿಗೆ ಅತ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಡ್ಡಿ ದೇವಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದ್ದರೆ, ಇಬ್ಬರು ಹೆಣ್ಣುಮಕ್ಕಳಾದ ನಿಶಾ ಹಾಗೂ ಪೂಜಾ ಶವ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಆರೋಪ ಈಗ ಅಮೆರಿಕದಲ್ಲಿರುವ ಅಳಿಯನ ಮೇಲೆ ಬಂದಿದೆ.

ಪೂಜಾಳ ಪತಿ ಅನಿಲ್ ಪೂಜಾಳ ಬಾವ, ನಿಶಾಳ ಪತಿ ಜಿತೇಂದ್ರನೇ ಇವರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪೂಜಾ 2025ರ ಫೆಬ್ರವರಿಯಲ್ಲಿ ಅನಿಲ್​ ಅವರನ್ನು ಮದುವೆಯಾಗಿದ್ದಳು. ಆದರೆ ಆಕೆಯ ಬಾವ ಜಿತೇಂದ್ರನಿಗೆ ಈ ಮದುವೆ ಇಷ್ಟವಿರಲಿಲ್ಲ. ಅಂದಿನಿಂದ ಪೂಜಾ, ಆಕೆಯ ಪತಿ ಹಾಗೂ ಆಕೆಯ ಕುಟುಂಬಕ್ಕೆ ನಿರಂತರ ಬೆದರಿಕೆ ಹಾಕುತ್ತಲೇ ಇದ್ದ.

ಇಷ್ಟೇ ಅಲ್ಲ ಜಿತೇಂದ್ರನಿಗೆ ತನ್ನ ಪತ್ನಿಗೆ ನಿಶಾ ಜತೆ ಹೊಂದಿಕೆಯಾಗಲಿಲ್ಲ, ಅದಕ್ಕಾಗಿ ನಿಶಾ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ಅನಿಲ್ ಪ್ರಕಾರ, ಜಿತೇಂದ್ರ ನಿತ್ಯ ಹಲವು ಬಾರಿ ಪೂಜಾಗೆ ಕರೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ. ಈ ಒತ್ತಡದಿಂದಾಗಿ ಆಕೆ ಎರಡು ದಿನಗಳ ಹಿಂದೆ ತನ್ನ ಪೋಷಕರ ಮನೆಗೆ ಬಂದಿದ್ದಳು. ಆದರೆ ಜಿತೇಂದ್ರನ ಕಾಲ್​ ಮತ್ತು ಮೆಸೇಜ್​ಗಳು ಬರುತ್ತಲೇ ಇದ್ದವು.ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ಕೂಡ ಆತನ ಮೆಸೇಜ್ ಬಂದಿತ್ತು.

ಇದನ್ನೂ ಓದಿ
Image
ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
Image
ಮುಖ ಕಾಂತಿಯುತವಾಗಿರಲು ಈ ಆಹಾರಗಳ ಸೇವನೆ ಮಾಡಬೇಡಿ
Image
ಈ ವೃತ್ತದಲ್ಲಿ ನಿಮಗೆ ಕಾಣಿಸಿದ ಬಣ್ಣ ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವ
Image
ಮನೆಯಲ್ಲೇ ಥಟ್ಟಂತ ಮಾಡಿ ರುಚಿಕರವಾದ ದ್ರಾಕ್ಷಿ ಉಪ್ಪಿನಕಾಯಿ

ಮತ್ತಷ್ಟು ಓದಿ: ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಸಂಜೆಯೇ ಪ್ರಿಯಕರನ ಜತೆ ವಿವಾಹವಾದ್ಲು!

ಪೂಜಾ ಅವರ ಪತಿ ಅನಿಲ್ ಜಿತೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿತೇಂದ್ರ ಡಾಂಕಿ ರೂಟ್ ಮೂಲಕ ಅಮೆರಿಕಕ್ಕೆ ಹೋಗಿದ್ದ. ಆರೋಪಿ ಜಿತೇಂದ್ರ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಂದ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಅನಿಲ್ ಹೇಳಿದ್ದಾರೆ.ಜಿತೇಂದ್ರ ಆಕೆಯನ್ನು ನಿಂದಿಸಿದ್ದಲ್ಲದೆ, ಆಕೆಯ ಸಂಬಂಧಿಕರಿಗೂ ಅದೇ ರೀತಿ ಬೆದರಿಕೆ ಹಾಕಿದ್ದಾನೆ.

ಒಂದು ಸಂಖ್ಯೆ ಬ್ಲಾಕ್ ಮಾಡಿದರೆ ಮತ್ತೊಂದು ಸಂಖ್ಯೆಯಿಂದ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದ.ಪೂಜಾಳ ಅಕ್ಕ ನಿಶಾ ಈಗಾಗಲೇ ಕರ್ನಾಲ್‌ನ ಮಜ್ರಾ ರೋಡನ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಯಿಂದ ತನ್ನ ಹೆತ್ತವರ ಮನೆಗೆ ಬಂದಿದ್ದಳು. ಜಿತೇಂದ್ರನ ಕಾಟದಿಂದ ಬೇಸತ್ತು ಮೂವರು ಕೂಡ ತಮ್ಮ ಜೀವನ ಅಂತ್ಯಗೊಳಿಸುವ ತಪ್ಪು ನಿರ್ಧಾರ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:48 am, Sun, 1 June 25