ಭಾರತಕ್ಕೆ ಇನ್ನುಮುಂದೆ ಬಾಂಗ್ಲಾದವರು ಅಕ್ರಮವಾಗಿ ನುಸುಳಿದ್ರೆ ಏನಾಗುತ್ತೆ?
ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ಹೊಸ ವಲಸೆ ಮಸೂದೆಯು ಭಾರತಕ್ಕೆ ವಿದೇಶಿ ಪ್ರವೇಶವನ್ನು ನಿಯಂತ್ರಿಸುವ ಗುರಿ ಹೊಂದಿದೆ. ಅಕ್ರಮ ಪ್ರವೇಶಕ್ಕೆ 7 ವರ್ಷ ಜೈಲು ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗುವುದು. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ವಿರೋಧ ಪಕ್ಷಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆಕ್ಷೇಪಿಸಿವೆ.

ನವದೆಹಲಿ, ಮಾರ್ಚ್ 28: ಭಾರತಕ್ಕೆ ವಿದೇಶಿ ಪ್ರಜೆಗಳ ವಲಸೆ ಮತ್ತು ಪ್ರವೇಶಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿರುವ ವಲಸೆ ಮಸೂದೆ(Immigration Bill)ಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಇನ್ನುಮುಂದೆ ಬಾಂಗ್ಲಾದೇಶ ಹಾಗೂ ಇತರೆ ದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಲಿದೆ. ಭಾರತದಲ್ಲಿ 20 ಮಿಲಿಯನ್ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ ಎನ್ನುವ ಮಾಹಿತಿ ಇದೆ. ಅಕ್ರಮ ಈ ಹೊಸ ಮಸೂದೆಯಲ್ಲಿ ಕಾನೂನನ್ನು ಕಠಿಣಗೊಳಿಸಲಾಗಿದ್ದು, ನಿಯಮಗಳಿಗೆ ವಿರುದ್ಧವಾಗಿ ನಡೆದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ದೇಶದ ಭದ್ರತೆಗೆ ಈ ಮಸೂದೆ ಅಗತ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅದೇ ಸಮಯದಲ್ಲಿ, ಕೆಲವು ವಿರೋಧ ಪಕ್ಷಗಳು ಇದನ್ನು ವಿರೋಧಿಸಿದವು.
ದೇಶವು ಅಸುರಕ್ಷಿತಾಗಿದೆ ಮ್ಯಾನ್ಮಾರ್‌ನಿಂದ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ನುಸುಳುವಿಕೆ ವಿಷಯದ ಕುರಿತು ಮಾತನಾಡಿದ ಶಾ, ವೈಯಕ್ತಿಕ ಲಾಭಕ್ಕಾಗಿ ಭಾರತದಲ್ಲಿ ಆಶ್ರಯ ಪಡೆಯುವ ಅಂತಹ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶವು ಅಸುರಕ್ಷಿತವಾಗಿದೆ ಎಂದು ಒತ್ತಿ ಹೇಳಿದರು. ಒಳನುಸುಳುವವರು ಭಾರತದಲ್ಲಿ ಅಶಾಂತಿ ಸೃಷ್ಟಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಮಸೂದೆಯು ದೇಶದ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು 2047 ರ ವೇಳೆಗೆ ಭಾರತವು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ‘ನಮ್ಮ ದೇಶಕ್ಕೆ ಬರುವ ಪ್ರತಿಯೊಬ್ಬ ವಿದೇಶಿಯರ ಬಗ್ಗೆ ನಾವು ಮಾಹಿತಿಯನ್ನು ಹೊಂದಿದ್ದೇವೆ ಎಂದಿದ್ದಾರೆ. ಭಾರತ ಉತ್ಪಾದನಾ ಕೇಂದ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದೇಶಿಯರು ಇಲ್ಲಿಗೆ ಬರುವುದು ಸಹಜ. ಆದರೆ ದೇಶದ ವ್ಯವಸ್ಥೆಗೆ ಕೊಡುಗೆ ನೀಡಲು ಬರುವವರಿಗೆ ಸ್ವಾಗತವಿದೆ ಎಂದಿದ್ದಾರೆ.
ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ಈ ಮಸೂದೆಯು ಅನೇಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಈ ಮಸೂದೆಯನ್ನು ಹಿಂಪಡೆಯಬೇಕು ಅಥವಾ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು, ಆಗ ಇದರ ಬಗ್ಗೆ ಆಳವಾಗಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಇದರೊಂದಿಗೆ ತೃಣಮೂಲ ಕಾಂಗ್ರೆಸ್ ಕೂಡ ಇದನ್ನು ವಿರೋಧಿಸಿದೆ. ನಮ್ಮ ನಾಗರಿಕರು ಡಾಂಕಿ ರೂಟ್ ಮೂಲಕ ಅಮೆರಿಕಕ್ಕೆ ಹೋಗುತ್ತಿದ್ದಾರೆ, ಆದರೆ ನಮ್ಮ ಗುರಿ ಬಾಂಗ್ಲಾದೇಶಿಗಳನ್ನು ತಡೆಯುವುದಕ್ಕಷ್ಟೇ ಸೀಮಿತವಾಗಿದೆ ಎಂದು ಸೌಗತ ರಾಯ್ ನೇರವಾಗಿ ಹೇಳಿದರು. ಅಮಿತ್ ಶಾ ಕೂಡ ವಿರೋಧ ಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದರು.
ಮತ್ತಷ್ಟು ಓದಿ: ಲೋಕಸಭೆಯಲ್ಲಿ ವಲಸೆ ಮಸೂದೆ ಅಂಗೀಕಾರ; ಭಾರತ ಧರ್ಮಛತ್ರವಲ್ಲ ಎಂದ ಅಮಿತ್ ಶಾ
ಭಾರತ ಧರ್ಮಛತ್ರವಲ್ಲ ಯಾರೇ ಅಕ್ರಮವಾಗಿ ಬಂದರೂ ಅವರನ್ನು ಸ್ವಾಗತಿಸಲು ಈ ದೇಶ ಧರ್ಮಛತ್ರವಲ್ಲ, ನಮ್ಮ ದೇಶದ ಅಭಿವೃದ್ಧಿಗಾಗಿ ಯಾರು ಬಂದರೂ ಸ್ವಾಗತ ಆದರೆ ಭದ್ರತೆ ಬಗ್ಗೆ ಕಾಳಜಿ ಇದ್ದೇ ಇರುತ್ತದೆ ಎಂದು ಅಮಿತ್ ಶಾ ಹೇಳಿದರು. ಈ ಮಸೂದೆಯ ಉದ್ದೇಶವು ಭಾರತಕ್ಕೆ ಬರುವ ಮತ್ತು ಹೋಗುವ ಜನರಿಗೆ ಪಾಸ್‌ಪೋರ್ಟ್ ಮತ್ತು ಪ್ರಯಾಣ ದಾಖಲೆಗಳ ಅಗತ್ಯವನ್ನು ಸ್ಪಷ್ಟಪಡಿಸುವುದು, ಕೇಂದ್ರ ಸರ್ಕಾರಕ್ಕೆ ಕೆಲವು ವಿಶೇಷ ಅಧಿಕಾರಗಳನ್ನು ನೀಡುವುದು ಮತ್ತು ವಿದೇಶಿ ನಾಗರಿಕರ ವೀಸಾ, ನೋಂದಣಿ ಮತ್ತು ಇತರ ಕಾನೂನು ಪ್ರಕ್ರಿಯೆಗಳನ್ನು ನಿಯಂತ್ರಿಸುವುದು.
ಟಿಎಂಸಿ ಸರಿ ಇದ್ದರೆ ಎಲ್ಲವೂ ಸರಿ ಇರುತ್ತಿತ್ತು
ಈ ಮಸೂದೆಯನ್ನು ಅಂಗೀಕರಿಸುವಾಗ, ಗೃಹ ಸಚಿವರು ಬಾಂಗ್ಲಾದೇಶಿಗಳ ಒಳನುಸುಳುವಿಕೆಗೆ ತೃಣಮೂಲ ಕಾಂಗ್ರೆಸ್ ಅನ್ನು ಹೊಣೆಗಾರರನ್ನಾಗಿ ಮಾಡಿದರು. ಬಂಗಾಳ ಗಡಿಗೆ ಹೊಂದಿಕೊಂಡಿರುವ 450 ಕಿಲೋಮೀಟರ್ ಭೂಮಿಗೆ ಬೇಲಿ ಹಾಕಲು ಮಮತಾ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Fri, 28 March 25