ರಷ್ಯಾ ಮತ್ತು ಉಕ್ರೇನ್ ನಡುವೆ ಭಾರತ ಮಧ್ಯಸ್ಥಿಕೆ ವಹಿಸುವುದಿಲ್ಲ
ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಕಳೆದ ತಿಂಗಳು ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ ಮೋದಿ, ಯುದ್ಧಭೂಮಿಯಲ್ಲಿ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಮತ್ತು ಬಂದೂಕಿನ ನೆರಳಿನಲ್ಲಿ ಮಾತುಕತೆ ಯಶಸ್ವಿಯಾಗುವುದಿಲ್ಲ ಎಂದು ಒತ್ತಿ ಹೇಳಿದ್ದರು. ಅಷ್ಟೇ ಅಲ್ಲ ಭಾರತವು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಸಾರ್ವಜನಿಕವಾಗಿ ಖಂಡಿಸುವುದರಿಂದ ದೂರವಿತ್ತು
ದೆಹಲಿ ಆಗಸ್ಟ್ 19: ಈ ವಾರ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕೈವ್‌ಗೆ ಭೇಟಿ ನೀಡುವ ಮೊದಲು, ರಷ್ಯಾ(Russia) ಮತ್ತು ಉಕ್ರೇನ್ (Ukraine) ನಡುವೆ ಮಧ್ಯಸ್ಥಿಕೆ ವಹಿಸುವಲ್ಲಿ ಯಾವುದೇ ಪಾತ್ರವನ್ನು ಭಾರತ ತಳ್ಳಿಹಾಕಿದೆ. ಅದೇ ವೇಳೆ ಉಭಯ ದೇಶಗಳ ನಡುವೆ ಸಂದೇಶಗಳನ್ನು ರವಾನಿಸಲು ಭಾರತ ಸಹಾಯ ಮಾಡುತ್ತದೆ ಎಂದು ಈ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮೋದಿ ಅವರು ಆಗಸ್ಟ್ 23 ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯಾದ ಆಕ್ರಮಣದ ಪ್ರಾರಂಭವಾದ ನಂತರ ಮತ್ತು 1991 ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಉಕ್ರೇನ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ. ಕಳೆದ ತಿಂಗಳು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜತೆ ಮಾಡಿದ ದೂರವಾಣಿ ಕರೆಯಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಚೀಫ್ ಆಫ್ ಸ್ಟಾ ಫ್,ಸ ಆಂಡ್ರಿ ಯೆರ್ಮಾಕ್ ಅವರು ಉಕ್ರೇನ್‌ನಲ್ಲಿ ಶಾಂತಿಯನ್ನು ಸಾಧಿಸುವಲ್ಲಿ ಮೋದಿ “ಮಹತ್ವದ ಪಾತ್ರ” ವಹಿಸಬಹುದೆಂದು ಹೇಳಿದ್ದರು.
ಆದಾಗ್ಯೂ,ಯುದ್ಧ ನಿರತರಾಗಿರುವ ಎರಡು ದೇಶಗಳ ನಡುವೆ ಯಾವುದೇ ನೇರ ಮಧ್ಯಸ್ಥಿಕೆಯ ಪಾತ್ರವನ್ನು ಭಾರತವು ತಳ್ಳಿಹಾಕಿದೆ. ಇದರ ಬದಲಾಗಿ ಭಾರತದ ಕಡೆಯವರು ಎರಡು ಕಡೆಯ ನಡುವೆ ಸಂದೇಶಗಳನ್ನು ರವಾನಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಏತನ್ಮಧ್ಯೆ, ರಾಜತಾಂತ್ರಿಕ ಚರ್ಚೆಗಳ ಬಗ್ಗೆ ಮಾತನಾಡಲು ಅಧಿಕಾರ ಹೊಂದಿಲ್ಲದ ಕಾರಣ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಭಾರತವು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಸಾರ್ವಜನಿಕವಾಗಿ ಖಂಡಿಸುವುದರಿಂದ ದೂರವಿತ್ತು ಮತ್ತು ವಿಶ್ವಸಂಸ್ಥೆಯಲ್ಲಿ ಉಕ್ರೇನ್‌ಗೆ ಸಂಬಂಧಿಸಿದ ಹೆಚ್ಚಿನ ನಿರ್ಣಯಗಳ ವಿರುದ್ಧ ಮತ ಚಲಾಯಿಸಿದೆ ಅಥವಾ ದೂರವಿತ್ತು. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯು ಮುಂದಿನ ಮಾರ್ಗವಾಗಿದೆ ಎಂದು ಭಾರತ ನಿರಂತರವಾಗಿ ಹೇಳಿದ್ದು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.
ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಕಳೆದ ತಿಂಗಳು ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ ಮೋದಿ, ಯುದ್ಧಭೂಮಿಯಲ್ಲಿ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಮತ್ತು ಬಂದೂಕಿನ ನೆರಳಿನಲ್ಲಿ ಮಾತುಕತೆ ಯಶಸ್ವಿಯಾಗುವುದಿಲ್ಲ ಎಂದು ಒತ್ತಿ ಹೇಳಿದ್ದರು.
ಭಾರತದ ಸಶಸ್ತ್ರ ಪಡೆಗಳ ಶಸ್ತ್ರಾಗಾರದ ಸುಮಾರು 60% ರಷ್ಟನ್ನು ಹೊಂದಿರುವ ಮತ್ತು ಪಶ್ಚಿಮದಿಂದ ವಿಧಿಸಲಾದ ನಿರ್ಬಂಧಗಳ ನಂತರ ಕಚ್ಚಾ ತೈಲದ ಅಗ್ರ ಪೂರೈಕೆದಾರರಲ್ಲಿ ಒಂದಾಗಿ ಹೊರಹೊಮ್ಮಿರುವ ರಷ್ಯಾ ವಿರುದ್ಧ ನಡೆಯುವ ಯಾವುದೇ ನಿಲುವನ್ನು ತೆಗೆದುಕೊಳ್ಳಲು ಭಾರತವು ಹಿಂಜರಿಯುತ್ತದೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಉಕ್ರೇನಿಯನ್ ಭಾಗವು ರಷ್ಯಾಕ್ಕೆ ಹತ್ತಿರವಾಗಿರುವುದರಿಂದ ನಡೆಯುತ್ತಿರುವ ಶಾಂತಿ ಪ್ರಯತ್ನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಭಾರತಕ್ಕೆ ಒತ್ತಾಯಿಸುತ್ತದೆ ಎಂದು ಈ ಬಗ್ಗೆ ಗೊತ್ತಿರುವ ವ್ಯಕ್ತಿಗಳು ಹೇಳಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಿರ್ಣಾಯಕ ವಿಷಯಗಳ ಕುರಿತು ಸಂದೇಶಗಳನ್ನು ರವಾನಿಸುವಲ್ಲಿ ಭಾರತವು ಈ ಹಿಂದೆ ಪ್ರಮುಖ ಪಾತ್ರ ವಹಿಸಿದೆ, ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಲವಾರು ಸಂದರ್ಭಗಳಲ್ಲಿ ಒಪ್ಪಿಕೊಂಡಿದ್ದಾರೆ. ಬ್ಲಾಕ್ ಸೀ ಗ್ರೇನ್ ಒಪ್ಪಂದ ಮತ್ತು ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಭದ್ರತೆಯಂತಹ ವಿಷಯಗಳಲ್ಲಿ ಭಾರತವು ಮಧ್ಯಸ್ಥಿಕೆ ವಹಿಸಿದೆ ಎಂದು ಜೈಶಂಕರ್ ಮಾಧ್ಯಮ ಸಂವಾದ ಮತ್ತು ಸಂದರ್ಶನಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ಕೋಪಕ್ಕೊಳಗಾದರೆ ನಾವು ನಿಮ್ಮನ್ನು ಕಾಪಾಡಲ್ಲ: ವೈದ್ಯರಿಗೆ ತೃಣಮೂಲ ಸಂಸದ ಎಚ್ಚರಿಕೆ
ರಷ್ಯಾ-ಉಕ್ರೇನ್ ಸಂಘರ್ಷ ವಿಷಯದಲ್ಲಿ ರಷ್ಯನ್ನರೊಂದಿಗೆ ಬಹಳ ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡಲು ಅವಕಾಶವನ್ನು ಹೊಂದಿರುವ ದೇಶವಾಗಿದೆ ಭಾರತ. ವಿವಿಧ ಅಂಶಗಳಲ್ಲಿ, ಇತರರು ಸಂದೇಶಗಳನ್ನು ರವಾನಿಸಲು ನಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಮಾರ್ಚ್ 27 ರಂದು ಮಲೇಷ್ಯಾದಲ್ಲಿ ಭಾರತೀಯ ಸಮುದಾಯದೊಂದಿಗಿನ ಸಂವಾದದಲ್ಲಿ ಜೈಶಂಕರ್ ಹೇಳಿದ್ದಾರೆ.
ಸೆಪ್ಟೆಂಬರ್ 2023 ರಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬ್ಲಾಕ್ ಸೀ ಗ್ರೇನ್ ಕಾರಿಡಾರ್ ಅನ್ನು ರಚಿಸಲು ಟರ್ಕಿ ಮತ್ತು ರಷ್ಯಾ ನಡುವಿನ “ಕೆಲವು ದೃಷ್ಟಿಕೋನಗಳು ಮತ್ತು ಕಾಳಜಿಗಳ ಸೇತುವೆ” ಗೆ ಭಾರತ ಕೊಡುಗೆ ನೀಡಿದೆ. 2022 ರಲ್ಲಿ ಯುಎನ್ ಸೆಕ್ರೆಟರಿ ಜನರಲ್ ಜೊತೆಗೆ ಈ ವಿಷಯದ ಬಗ್ಗೆ ಕೆಲಸ ಮಾಡಿದೆ ಎಂದು ಜೈಶಂಕರ್ ಹೇಳಿದರು. ಜುಲೈ 2023 ರಲ್ಲಿ ರಷ್ಯಾ ಒಪ್ಪಂದವನ್ನು ತೊರೆಯುವವರೆಗೂ ಕಾರಿಡಾರ್ ಉಕ್ರೇನ್‌ಗೆ ಗೋಧಿ ಮತ್ತು ಇತರ ವಸ್ತುಗಳನ್ನು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತು.
ಫೆಬ್ರವರಿಯಲ್ಲಿ, ಜೈಶಂಕರ್ ಅವರು ರಷ್ಯಾ ಮತ್ತು ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (IAEA) ಗೆ ಸಂದೇಶಗಳನ್ನು ರವಾನಿಸುವ ಮೂಲಕ ಜಪೋರಿಝಿಯಾ ವಿದ್ಯುತ್ ಸ್ಥಾವರದ ಸುರಕ್ಷತೆಯ ಬಗ್ಗೆ ಉಕ್ರೇನ್‌ನ ಕಳವಳಗಳಿಗೆ ಸಂಬಂಧಿಸಿದಂತೆ ಭಾರತವು ಒಂದು ಪಾತ್ರವನ್ನು ವಹಿಸಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Mon, 19 August 24