ಅಯೋಧ್ಯೆ, ವಾರಾಣಸಿ, ಪ್ರಯಾಗ್ರಾಜ್ಗೆ ಕೈಗೆಟುಕುವ ಬೆಲೆಯಲ್ಲಿ ವಿಮಾನ ಪ್ರವಾಸ; ಇಲ್ಲಿದೆ ಮಾಹಿತಿ
ಈ ಏರ್ ಟೂರ್ ಪ್ಯಾಕೇಜ್ ಕಾಶಿ ವಿಶ್ವನಾಥ ದೇವಸ್ಥಾನ, ಅನ್ನಪೂರ್ಣ ದೇವಸ್ಥಾನ, ಕಾಳ ಭೈರವ್ ಮಂದಿರ, ಸಾರನಾಥ ಮಂದಿರ, ಪಾತಾಳಪುರಿ ದೇವಸ್ಥಾನ ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ.
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆ (Ayodhya), ಪ್ರಯಾಗ್‌ರಾಜ್ (Prayagraj) ಮತ್ತು ವಾರಾಣಸಿಯಂತಹ (Varanasi) ಭಾರತದ ಪವಿತ್ರ ನಗರಗಳಿಗೆ ತೆರಳುವ ಆಸಕ್ತಿ ಇರುವ ಭಕ್ತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ವಿಮಾನ ಪ್ರವಾಸದ ಪ್ಯಾಕೇಜ್ ಘೋಷಿಸಿದೆ. ಈ ಏರ್ ಟೂರ್ ಪ್ಯಾಕೇಜ್ ಕಾಶಿ ವಿಶ್ವನಾಥ ದೇವಸ್ಥಾನ, ಅನ್ನಪೂರ್ಣ ದೇವಸ್ಥಾನ, ಸಂಕಟ ಮೋಚನ ಮಂದಿರ, ಕಾಳ ಭೈರವ್ ಮಂದಿರ, ಸಾರನಾಥ ಮಂದಿರ, ಪಾತಾಳಪುರಿ ದೇವಸ್ಥಾನ, ಬಡೇ ಹನುಮಾನ್ ಜಿ ಮಂದಿರ ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ.
ಇವುಗಳ ಹೊರತಾಗಿ ಈ ಪ್ಯಾಕೇಜ್ನಲ್ಲಿ ಕನಕ ಭವನ, ಹನುಮಾನ್ ಗರ್ಹಿ, ರಾಮ ಜನ್ಮಭೂಮಿ ಮತ್ತು ಶ್ರೀ ಕಾಳೆ ರಾಮ ದೇವಾಲಯಕ್ಕೆ ಭೇಟಿ ನೀಡಬಹುದು. ಈ ಏರ್ ಟೂರ್ ಪ್ಯಾಕೇಜ್ 4 ರಾತ್ರಿಗಳು, 5 ದಿನಗಳನ್ನು ಒಳಗೊಂಡಿರುತ್ತದೆ. ಈ ವಿಶೇಷ ವಿಮಾನ ಪ್ರವಾಸದ ಪ್ಯಾಕೇಜ್ ನವೆಂಬರ್ 19ರಂದು ಪ್ರಾರಂಭವಾಗುತ್ತದೆ.
ಇದನ್ನೂ ಓದಿ: Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 15 ಲಕ್ಷ ದೀಪಗಳು; ಹೊಸ ಗಿನ್ನಿಸ್ ವಿಶ್ವ ದಾಖಲೆ
ಈ ಏರ್ ಟೂರ್ ಪ್ಯಾಕೇಜ್ ಹೋಟೆಲ್ ವಾಸ್ತವ್ಯವನ್ನು ಕೂಡ ಒಳಗೊಂಡಿರುತ್ತದೆ. ಮುಂಚಿತವಾಗಿ ಬುಕ್ ಮಾಡಿದ ಹೋಟೆಲ್ಗಳಲ್ಲಿ ಈ ಪ್ಯಾಕೇಜ್ನ ಭಕ್ತರು ತಂಗುತ್ತಾರೆ. ಈ ಏರ್ ಟೂರ್ ಪ್ಯಾಕೇಜ್ 2 ಸ್ಲಾಟ್‌ಗಳನ್ನು ಹೊಂದಿದೆ. ನವೆಂಬರ್ 19ರಿಂದ 23ರವರೆಗೆ ಒಂದು ಪ್ಯಾಕೇಜ್ ಇದ್ದರೆ ಡಿಸೆಂಬರ್ 14ರಿಂದ 18ರವರೆಗೆ ಇನ್ನೊಂದು ಪ್ಯಾಕೇಜ್ ಇರಲಿದೆ.
Seek the blessing & tap into spirituality with IRCTC’s Holy Ayodhya with Kashi tour package for 5D/4N. For details, visit https://t.co/5icZIFiR8g@AmritMahotsav @incredibleindia @tourismgoi @uptourismgov #AzadiKiRail
— IRCTC (@IRCTCofficial) November 3, 2022
ಅಯೋಧ್ಯೆ, ಪ್ರಯಾಗರಾಜ್ ಮತ್ತು ವಾರಾಣಸಿ ಏರ್ ಟೂರ್ ಪ್ಯಾಕೇಜ್ ಬುಕ್ ಮಾಡುವುದು ಹೇಗೆ?: ಆಸಕ್ತ ಪ್ರಯಾಣಿಕರು IRCTC ಯ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೈಗೆಟುಕುವ ಏರ್ ಟೂರ್ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಈ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 am, Mon, 7 November 22