ಇನ್ಮುಂದೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಬ್ಯಾನ್: ಪ್ರತಿಭಟನೆಗಳಿಗೆ 3 ಹೊಸ ಸ್ಥಳಗಳನ್ನು ನಿಗದಿಪಡಿಸಿದ ಕೇಂದ್ರ
ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್‌ನಲ್ಲಿ ಇನ್ನು ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ. ಕೇಂದ್ರ ಗೃಹ ಸಚಿವಾಲಯ ಹಾಗೂ ದೆಹಲಿ ಪೊಲೀಸರು ರಾಮಲೀಲಾ, ಬುರಾರಿ ಮತ್ತು ಸಿಬಿಡಿ ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಿದ್ದಾರೆ. ಸಾರ್ವಜನಿಕ ಶಾಂತಿ, ಸುಗಮ ಸಂಚಾರ ಮತ್ತು ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನಾ ಹಕ್ಕನ್ನು ಗೌರವಿಸಿ ಪರ್ಯಾಯ ಸ್ಥಳಗಳನ್ನು ಗುರುತಿಸಲು ಸಮಿತಿ ಶಿಫಾರಸು ಮಾಡಿತ್ತು.

ನವದೆಹಲಿ, ಅಕ್ಟೋಬರ್ 12: ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್‌ನಲ್ಲಿ ಇನ್ನು ಮುಂದೆ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ. ಇದರ ಬದಲಿಗೆ ಪ್ರತಿಭಟನೆ ಮತ್ತು ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸಲು ದೆಹಲಿ ಪೊಲೀಸರು ಮೂರು ಹೊಸ ಸ್ಥಳಗಳನ್ನು ಗುರುತಿಸಿದ್ದಾರೆ. ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನ ಈ ಪಟ್ಟಿಯಲ್ಲಿವೆ ಸಾರ್ವಜನಿಕ ಶಾಂತಿ, ಸುಗಮ ಸಂಚಾರ ಹಾಗೂ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯವು (MHA) ಪ್ರತಿಭಟನೆ ಮತ್ತು ಪ್ರದರ್ಶನಗಳಿಗಾಗಿ ದೆಹಲಿಯಲ್ಲಿ ಮೂರು ಪರ್ಯಾಯ ಸ್ಥಳಗಳನ್ನು ಗುರುತಿಸಿ ಹೊಸ ಆದೇಶ ಹೊರಡಿಸಿದೆ.
ಅಕ್ಟೋಬರ್ 11, 2026ರಂದು ಹೊರಡಿಸಲಾದ ಆದೇಶದ ಪ್ರಕಾರ, ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನೆ ನಡೆಸುವ ನಾಗರಿಕರ ಹಕ್ಕನ್ನು ಗಮನದಲ್ಲಿಟ್ಟುಕೊಂಡು, ಜನರು ಪ್ರತಿಭಟನೆ ನಡೆಸಲು ಸೂಕ್ತವಾದ ಪರ್ಯಾಯ ಸ್ಥಳಗಳನ್ನು ಗುರುತಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು.
ಹೊಸ ಸ್ಥಳಗಳನ್ನು ಘೋಷಿಸಿರುವುದರಿಂದ ಯಾವುದೇ ಪ್ರತಿಭಟನೆಗೆ ಸ್ವಯಂಚಾಲಿತವಾಗಿ ಅನುಮತಿ ದೊರೆಯುವುದಿಲ್ಲ. ಆಯೋಜಕರು ಅನ್ವಯಿಸುವ ಪೊಲೀಸ್ ನಿಯಮಗಳು ಮತ್ತು ಅನುಮತಿ ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಈ ಹಿಂದೆ ಕೂಡ ಮುಂಚಿತ ಅನುಮತಿ ಅಗತ್ಯವಿತ್ತು.
ಮತ್ತಷ್ಟು ಓದಿ: ‘ಜ್ಞಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ’; ಸಿಜೆಪಿ ನಿರ್ಧಾರ
ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಈ ಸಂಬಂಧ ಅಧಿಕೃತ ಆದೇಶಕ್ಕೆ ಅಂಕಿತ ಹಾಕಿದ್ದು, 2022ರ ಏಪ್ರಿಲ್ 28ರ ಹಿಂದಿನ ಸ್ಥಾಯಿ ಆದೇಶವನ್ನು ಭಾಗಶಃ ಮಾರ್ಪಡಿಸಲಾಗಿದೆ.
ರಾಮಲೀಲಾ ಮೈದಾನ: ಮಧ್ಯ ದೆಹಲಿಯ ಐತಿಹಾಸಿಕ ಮೈದಾನ (ದೊಡ್ಡ ಪ್ರಮಾಣದ ರ್ಯಾಲಿಗಳು ಮತ್ತು ಸಮಾವೇಶಗಳಿಗೆ).
ಬುರಾರಿ ಮೈದಾನ / ನಿರಂಕಾರಿ ಮೈದಾನ : ಉತ್ತರ ದೆಹಲಿಯ ವಿಸ್ತಾರವಾದ ಮುಕ್ತ ಆವರಣ (ಹಿಂದೆ ರೈತ ಹೋರಾಟದ ವೇಳೆ ಬಳಸಲಾದ ಸ್ಥಳ).
ಸಿಬಿಡಿ ಮೈದಾನ : ಪೂರ್ವ ದೆಹಲಿಯ ಕರ್‌ಕರ್ಡೂಮಾ ಬಳಿಯ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಮೈದಾನ.
Amid Protests and Jantar Mantar Permission Demands, Delhi Police De-notifies Site; Names Three New Venues
New Delhi
Amidst the ongoing demonstrations in #Delhi against CEC #GyaneshKumar and #CJP continuously asking permission for protest at Jantar Mantar, the #DelhiPolice has officially de-notified the iconic site as a designated venue for demonstrations and earmarked three alternative locations across the capital.
According to a standing order issued by Delhi Police Commissioner Anurag Kumar, the designated protest venues will now be #RamlilaGround, #BurariGround, and the #CBDGround in East Delhi.
The move follows recommendations from a committee constituted by the Ministry of Home Affairs to examine alternative venues for citizens’ right to protest in place of the existing designated site.
The order dated October 11, partially modifies the earlier standing order dated April 28, 2022. The police stated that a detailed and revised Standard Operating Procedure (SOP) for holding protests and demonstrations across the three designated grounds will be issued separately.
— Yasir Mushtaq (@path2shah) October 12, 2026
ನವದೆಹಲಿ ವ್ಯಾಪ್ತಿಯಲ್ಲಿ ನಿರಂತರ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ, ಆಸ್ಪತ್ರೆಗಳಿಗೆ ತೆರಳುವವರಿಗೆ ಮತ್ತು ಸಂಸತ್ ಭವನದ ಭದ್ರತೆಗೆ ಉಂಟಾಗುತ್ತಿದ್ದ ಅಡೆತಡೆಗಳನ್ನು ತಪ್ಪಿಸಲು ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲು ಗೃಹ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಶಿಫಾರಸಿನ ಮೇರೆಗೆ ಜಂತರ್ ಮಂತರ್ ಅನ್ನು ಕೈಬಿಡಲಾಗಿದೆ.
ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ: 1990ರ ದಶಕದ ಆರಂಭದವರೆಗೆ ಇಂಡಿಯಾ ಗೇಟ್ ಬಳಿಯ ‘ಬೋಟ್ ಕ್ಲಬ್’ ದೆಹಲಿಯ ಮುಖ್ಯ ಪ್ರತಿಭಟನಾ ಸ್ಥಳವಾಗಿತ್ತು. 1993ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಬೃಹತ್ ರೈತ ಚಳವಳಿಯ ಬಳಿಕ ಬೋಟ್ ಕ್ಲಬ್ ನಿಷೇಧಿಸಿ ಪ್ರತಿಭಟನೆಗಳನ್ನು ಜಂತರ್ ಮಂತರ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಮೂರು ದಶಕಗಳ ಬಳಿಕ ಜಂತರ್ ಮಂತರ್ ಸಹ ಆ ಪಟ್ಟಿಯಿಂದ ಹೊರಬಿದ್ದಿದೆ.
ಇತ್ತೀಚಿನ ಸಂಘರ್ಷಗಳ ಪ್ರಭಾವ: ಇತ್ತೀಚೆಗೆ ನಡೆದ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿಪಕ್ಷಗಳ ‘ಇಂಡಿ’ ಮೈತ್ರಿಕೂಟದ ಆಂದೋಲನಗಳ ವೇಳೆ ಜಂತರ್ ಮಂತರ್ ಸುತ್ತಮುತ್ತ ಉಂಟಾದ ಭಾರೀ ಸಂಚಾರ ಅಸ್ತವ್ಯಸ್ತತೆ ಮತ್ತು ಭದ್ರತಾ ಸವಾಲುಗಳ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Mon, 12 October 26




