
ಕಾಮರೆಡ್ಡಿ, ಅಕ್ಟೋಬರ್ 12: ಕಳ್ಳರು ನೈಟಿ ಧರಿಸಿ ಆಂಬ್ಯುಲೆನ್ಸ್‌ನಲ್ಲಿ ಬಂದು ಎಸ್‌ಬಿಐ ಎಟಿಎಂ ಲೂಟಿ ಮಾಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ಮಹಿಳೆಯರ ನೈಟಿ ಮತ್ತು ಮಾಸ್ಕ್ ಧರಿಸಿದ್ದ ಅಪರಿಚಿತ ಪುರುಷರ ಗ್ಯಾಂಗ್‌ವೊಂದು, ಯಾರಿಗೂ ಅನುಮಾನ ಬಾರದಂತೆ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಿಯೋಸ್ಕ್ ಅನ್ನು ಗ್ಯಾಸ್ ಕಟ್ಟರ್‌ಗಳಿಂದ ಕತ್ತರಿಸಿ ಲಕ್ಷಾಂತರ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದೆ.
ಅಕ್ಟೋಬರ್ 11ರ ಬೆಳಗಿನ ಜಾವ ಸುಮಾರು 1 ರಿಂದ 1.30ರ ನಡುವೆ ಈ ಕೃತ್ಯ ನಡೆದಿದೆ. ಎಟಿಎಂ ಕೇಂದ್ರದ ಮುಂಭಾಗ ಆಂಬ್ಯುಲೆನ್ಸ್ ಬಂದು ನಿಂತಿದ್ದು, ಅದರಿಂದ ಇಳಿದ ವ್ಯಕ್ತಿಗಳು ಮಹಿಳೆಯರ ನೈಟಿ ಹಾಗೂ ಮುಖಕ್ಕೆ ಪೂರ್ಣ ಮಾಸ್ಕ್ ಧರಿಸಿದ್ದರು. ಎಟಿಎಂ ಒಳನುಗ್ಗಿದ ಆರೋಪಿಗಳು ಅತ್ಯಾಧುನಿಕ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಎಟಿಎಂ ಯಂತ್ರವನ್ನು ಕೆಲವೇ ನಿಮಿಷಗಳಲ್ಲಿ ಕತ್ತರಿಸಿ, ಅದರೊಳಗಿದ್ದ ನಗದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದ ವಾಹನದಲ್ಲೇ ಎಸ್ಕೇಪ್ ಆಗಿದ್ದಾರೆ.
ಬೆಳಗ್ಗೆ ಹಣ ತೆಗೆಯಲು ಬಂದ ಸ್ಥಳೀಯ ಗ್ರಾಹಕರು ಎಟಿಎಂ ಯಂತ್ರ ಛಿದ್ರಗೊಂಡಿರುವುದನ್ನು ನೋಡಿ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂನಲ್ಲಿ ಎಷ್ಟು ಮೊತ್ತದ ಹಣವಿತ್ತು ಎಂಬ ನಿಖರ ಲೆಕ್ಕವನ್ನು ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಪೊಲೀಸರು ಪರಿಶೀಲಿಸುತ್ತಿದ್ದು, ಲಕ್ಷಾಂತರ ರೂಪಾಯಿ ಲೂಟಿಯಾಗಿರುವ ಶಂಕೆಯಿದೆ.
ಮತ್ತಷ್ಟು ಓದಿ: ಇಡೀ ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು! ವಿಡಿಯೋ ವೈರಲ್
ದರೋಡೆಗೆ ಬಳಸಲಾದ ಆಂಬ್ಯುಲೆನ್ಸ್ ವಾಹನವು ನಿಜವಾದ ಆಸ್ಪತ್ರೆಯ ವಾಹನವೇ ಅಥವಾ ಪೊಲೀಸರ ದಿಕ್ಕು ತಪ್ಪಿಸಲು ಹಾಗೂ ರಾತ್ರಿ ವೇಳೆ ನಾಕಾಬಂದಿಗಳಿಂದ ತಪ್ಪಿಸಿಕೊಳ್ಳಲು ನಕಲಿ ಸೈರನ್ ಮತ್ತು ಫಲಕ ಬಳಸಿ ಸೃಷ್ಟಿಸಲಾದ ವಾಹನವೇ ಎಂಬುದರ ಕುರಿತು ಸಾರಿಗೆ ಇಲಾಖೆಯ ನೆರವಿನಿಂದ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಕ್ಲೂಸ್ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹೆದ್ದಾರಿಯ ಟೋಲ್‌ಗೇಟ್‌ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.
ವಿಡಿಯೋ
అంబులెన్స్ లో నైటీలపై వచ్చి ATM మిషన్ ని ధ్వంసం చేసి నగదును ఎత్తుకెళ్లిన దుండగులు
కామారెడ్డి జిల్లా గాంధారి మండల కేంద్రంలో ఘటన
సీసీ కెమెరాల్లో రికార్డయిన చోరీ దృశ్యాలు
కేసు నమోదు చేసి దర్యాప్తు చేపట్టిన పోలీసులు
#ATMRobbery #Kamareddy #TV9Telugu https://t.co/7RjxMl1ucx
— TV9 Telugu (@TV9Telugu) October 11, 2026
ಈ ಘಟನೆಯು ಕೇವಲ ಪ್ರತ್ಯೇಕ ಪ್ರಕರಣವಾಗಿರದೆ, ಆಂಧ್ರ-ತೆಲಂಗಾಣದಲ್ಲಿ ಸಕ್ರಿಯವಾಗಿರುವ ಕುಖ್ಯಾತ ಅಂತರರಾಜ್ಯ ದರೋಡೆಕೋರರ ಕೈವಾಡವಿರುವ ಶಂಕೆಯನ್ನು ಮೂಡಿಸಿದೆ. ಕೆಲವೇ ವಾರಗಳ ಹಿಂದೆ ಕರೀಂನಗರದ ಹೊರವಲಯದ ಡರ್ಶೆಡ್ ಮತ್ತು ತಿಮ್ಮಾಪುರದಲ್ಲಿರುವ ಎರಡು ಎಸ್‌ಬಿಐ ಎಟಿಎಂಗಳನ್ನು ಇದೇ ರೀತಿ ಗುರಿಯಾಗಿಸಲಾಗಿತ್ತು.
ಆ ಪ್ರಕರಣಗಳಲ್ಲೂ ಕಳ್ಳರು ಮಹಿಳೆಯರ ಉಡುಪು ಧರಿಸಿ ಬಂದು, ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಸ್ಪ್ರೇ ಮಾಡಿ, ಗ್ಯಾಸ್ ಕಟ್ಟರ್‌ಗಳ ಮೂಲಕ ಹಣ ದೋಚಿದ್ದರು. ಹೀಗಾಗಿ ಕಾಮರೆಡ್ಡಿ ದರೋಡೆಯಲ್ಲೂ ಅದೇ ಹಳೆ ಗ್ಯಾಂಗ್ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ವಿಶೇಷ ತನಿಖಾ ತಂಡಗಳನ್ನು ರಚಿಸಿ ಶೋಧ ತೀವ್ರಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ