Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ನವರಸನಾಯಕ ಜಗ್ಗೇಶ್​ ಮತ್ತು ದರ್ಶನ್​
sandhya thejappa

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 22, 2021 | 8:33 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) PFI ಹಾಗೂ SDPI ನಿಷೇಧಿಸುವಂತೆ  ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲ್​ PFI ಹಾಗೂ SDPI ಬಿಜೆಪಿ ಪಕ್ಷದ B ಟೀಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಮಲ ಪಾಳಯಕ್ಕೆ ಟಾಂಗ್ ಕೊಟ್ಟಿದ್ದಾರೆ. ಎರಡೂ ಸಂಘಟೆನಗಳನ್ನು ನಿಷೇಧಿಸುವಂತೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಸವಾಲ್​ ಹಾಕಿದ್ದಾರೆ. Link: PFI, SDPI ಸಂಘಟನೆಗಳನ್ನ ಬೆಳೆಸುತ್ತಿರುವುದೇ BJP

2) ಬಂಗಾಳದ ಅಭಿವೃದ್ಧಿಗೆ ನಮ್ಮ ಸತತ ಪ್ರಯತ್ನ: ಮೋದಿ ಚುನಾವಣೆಗೆ ಸಿದ್ಧವಾಗಿರುವ ಪಶ್ಚಿಮ ಬಂಗಾಳಕ್ಕೆ ಸೋಮವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಂಗಾಳದ ಅಭಿವೃದ್ಧಿಗೆ ನಮ್ಮ ಪ್ರಯತ್ನ ಸತತವಾಗಿ ನಡೆಯಲಿದೆ ಎಂದಿದ್ದಾರೆ. Link: ‘ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಿದ್ದಾರೆ’

3) ವಿಮಾನಯಾನಕ್ಕೆ ಹೊಸ ಕೊವಿಡ್ ಮಾರ್ಗಸೂಚಿ ಬಿಡುಗಡೆ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮಾವಳಿಗಳನ್ನು ಸೂಚಿಸಿ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಆದೇಶ ಹೊರಡಿಸಿದೆ. Link:ವಿಮಾನಯಾನಕ್ಕೆ ಹೊಸ ಕೊವಿಡ್ ಮಾರ್ಗಸೂಚಿ

4) ಟೀಕೆಗೆ ಗುರಿಯಾದ ಯೋಗ ಗುರು ರಾಮ್​​ದೇವ್​ ಹೇಳಿಕೆ ಕೊರೊನಿಲ್ ಬಗ್ಗೆ ಪತಂಜಲಿಯ ಮುಖ್ಯಸ್ಥ ಯೋಗ ಗುರು ರಾಮ್​​ದೇವ್​ ಹೇಳಿದ್ದ ಮಾತುಗಳು ಭಾರತೀಯ ವೈದ್ಯಕೀಯ ಸಂಸ್ಥೆಯ ಟೀಕೆಗೆ ಗುರಿಯಾಗಿವೆ. Link: ಕೊರೊನಿಲ್ ಕಟ್ಟುಕಥೆಗೆ ಆರೋಗ್ಯ ಸಚಿವರ ಉತ್ತೇಜನ

5) ಕ್ಷಮೆಯಾಚಿಸುವಂತೆ ಜಗ್ಗೇಶ್​ಗೆ ಪಟ್ಟು ಹಿಡಿದ ದರ್ಶನ್ ಅಭಿಮಾನಿಗಳು ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ ಎಂಬ ಸಂಗತಿ ದರ್ಶನ್ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ. ಜಗ್ಗೇಶ್ ಕ್ಷಮೆ ಯಾಚಿಸಬೇಕೆಂದು  ಮೈಸೂರಿನಲ್ಲಿ ದರ್ಶನ್ ಅಭಿಮಾನಿಗಳು ಪಟ್ಟು ಹಿಡಿದರು. Link: ಜಗ್ಗೇಶ್ ಸಿನಿಮಾ ಚಿತ್ರೀಕರಣದ ಸ್ಥಳಕ್ಕೆ ದರ್ಶನ್ ಫ್ಯಾನ್ಸ್ ಮುತ್ತಿಗೆ

6) ಎಫ್​ಡಿಎ ಹಾಲ್​ ಟಿಕೆಟ್​ ಬಿಡುಗಡೆ ಕರ್ನಾಟಕ ಲೋಕ ಸೇವಾ ಆಯೋಗವು ಎಫ್​ಡಿಎ ಹುದ್ದೆಯ ಪರೀಕ್ಷೆಗೆ ಹಾಲ್​​ ಟಿಕೆಟ್ (ಪ್ರವೇಶ ಪತ್ರ) ​ಬಿಡುಗಡೆ ಮಾಡಿದೆ. ಹಾಲ್​ ಟಿಕೆಟ್ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆಂಬ ಮಾಹಿತಿ ಇಲ್ಲಿದೆ. Link: ಆನ್​ಲೈನ್​​ನಲ್ಲಿ ಹಾಲ್​ ಟಿಕೆಟ್ ಡೌನ್​ಲೋಡ್ ಮಾಡಿ

7) ವಿರಾಟ್​ ಕೊಹ್ಲಿ ಬಗ್ಗೆ ಹೊರ ಬಿದ್ದ ಅಚ್ಚರಿ ವಿಚಾರ ಅನೇಕ ಪ್ರಮುಖ ಪಂದ್ಯಗಳನ್ನು ಗೆಲ್ಲಿಸಿದ ಖ್ಯಾತಿ ವಿರಾಟ್​ ಕೊಹ್ಲಿ ಅವರಿಗಿದೆ. ಇನ್ನು, ವಿರಾಟ್​ ಯಾವಾಗಲೂ ತುಂಬಾನೇ ಅತ್ಯುತ್ಸಾಹದೊಂದಿಗೆ ಮೈದಾನಕ್ಕೆ ಇಳಿಯುತ್ತಾರೆ. ಇಂತಹ ವಿರಾಟ್​ ಕೊಹ್ಲಿ ಬಗ್ಗೆ ಈಗ ಅಚ್ಚರಿಯ ವಿಚಾರ ಒಂದು ಹೊರ ಬಿದ್ದಿದೆ. Link: ಕೊಹ್ಲಿ ತಮ್ಮ ಮನೆಯಲ್ಲಿ ಕೆಲಸದಾಳುಗಳನ್ನು ಇಟ್ಕೊಂಡಿಲ್ಲವಂತೆ!

8) ರಮ್ಯಾ ಈಗೇನು ಮಾಡುತ್ತಿದ್ದಾರೆ ಗೊತ್ತಾ? ರಮ್ಯಾ ಸಿನಿಮಾ ರಂಗ ತೊರೆದು ರಾಜಕೀಯ ಸೇರಿದ್ದರು. ಈಗ ರಾಜಕೀಯದಲ್ಲೂ ಅವರು ಆ್ಯಕ್ಟಿವ್​ ಆಗಿಲ್ಲ. ಹಾಗಾದರೆ, ರಮ್ಯಾ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ. Link: ರಮ್ಯಾ ಈಗೇನು ಮಾಡ್ತಿದಾರೆ? ಇಲ್ಲಿದೆ ನೋಡಿ ವಿಡಿಯೋ

9) ಟ್ರೋಲಿಗರಿಗೆ ಝಾಡಿಸಿದ ಜ್ವಾಲಾ ಗುಟ್ಟಾ ತನ್ನನ್ನು ಟ್ರೋಲ್​ ಮಾಡಿದ ಶಿವಂ ಎಂಬ ಯುವಕನಿಗೆ ಜ್ವಾಲಾ ಗುಟ್ಟಾ ನೇರಾನೇರ ಪ್ರಶ್ನೆ ಕೇಳಿ ನೀರಿಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಟ್ರೋಲ್​ ಮಾಡುವವರಿಗೆ ಹೀಗೇ ಮಂಗಳಾರತಿ ಮಾಡಬೇಕೆಂದು ಜನ ಅಭಿಪ್ರಾಯಪಟ್ಟಿದ್ದಾರೆ. Link: 2 ವರ್ಷಗಳ ನಂತರ ಮತ್ತೆ ವೈರಲ್​ ಆಯ್ತು ವಿಡಿಯೊ

9) ಪ್ರೇಕ್ಷಕರಿಗೆ ಸಂತೋಷ ನೀಡಿದ ರೋಚಕ ಕಾರ್ ರೇಸ್ ಆಳೆತ್ತರಕ್ಕೆ ಧೂಳೆಬ್ಬಿಸುತ್ತಾ ಶರವೇಗದಲ್ಲಿ ಗುರಿಯತ್ತ ಸಾಗುವ ಸವಾರರು ಒಂದು ಕಡೆಯಾದರೆ ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುತ್ತಿರುವ ಕಾರುಗಳು ಇನ್ನೊಂದು ಕಡೆ. Link: ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ https://tv9kannada.com ನೋಡುತ್ತಿರಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada