AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಖಾನೆ ಸಿಬ್ಬಂದಿ ಕಸದ ತೊಟ್ಟಿಗೆ ಎಸೆದಿದ್ದ ಎಕ್ಸ್‌ಪೈರ್ಡ್ ಚಾಕೊಲೇಟ್‌ಗಳಿಗಾಗಿ ಮುಗಿಬಿದ್ದ ಜನ

ಕಾನ್ಪುರದಲ್ಲಿ ಅವಧಿ ಮೀರಿದ ಚಾಕೊಲೇಟ್‌ಗಳನ್ನು ಕಾರ್ಖಾನೆಯೊಂದು ಕಸದ ತೊಟ್ಟಿಗೆ ಎಸೆದಾಗ ಜನ ಮುಗಿಬಿದ್ದ ಘಟನೆ ವೈರಲ್ ಆಗಿದೆ. ಈ ನಿರ್ಲಕ್ಷ್ಯದಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಖಾನೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದು ಆಹಾರ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಯನ್ನು ಎತ್ತಿ ತೋರಿಸಿದೆ.

ಕಾರ್ಖಾನೆ ಸಿಬ್ಬಂದಿ ಕಸದ ತೊಟ್ಟಿಗೆ ಎಸೆದಿದ್ದ ಎಕ್ಸ್‌ಪೈರ್ಡ್ ಚಾಕೊಲೇಟ್‌ಗಳಿಗಾಗಿ ಮುಗಿಬಿದ್ದ ಜನ
ಚಾಕೊಲೇಟ್
ನಯನಾ ರಾಜೀವ್
|

Updated on: Aug 25, 2026 | 12:31 PM

Share

ಕಾನ್ಪುರ, ಆಗಸ್ಟ್​ 25: ಉತ್ತರ ಪ್ರದೇಶದ ಕಾನ್ಪುರದ ಪಂಕಿ ಪ್ರದೇಶದಲ್ಲಿ ಕಾರ್ಖಾನೆ ಸಿಬ್ಬಂದಿ ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಎಸೆದಿದ್ದ ಎಕ್ಸ್‌ಪೈರ್ಡ್ ಚಾಕೊಲೇಟ್(Chocolate) ಬಾಕ್ಸ್‌ಗಳಿಗಾಗಿ ಜನರು ಮುಗಿಬಿದ್ದಿರುವ ವಿಡಿಯೋ ಐರಲ್ ಆಗಿದೆ. ಜನರು ಚಾಕೊಲೇಟ್ ಪೆಟ್ಟಿಗೆಗಳನ್ನು ಬೈಕ್, ಸೈಕಲ್ ಮತ್ತು ಹೆಗಲ ಮೇಲೆ ಹೊತ್ತುಕೊಂಡು ಓಡುತ್ತಿರುವ ದೃಶ್ಯಾಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಸದ ತೊಟ್ಟಿಯಲ್ಲಿ ರಾಶಿ: ಪಂಕಿ ಪ್ರದೇಶದ ಚಾಕೊಲೇಟ್ ತಯಾರಿಕಾ ಕಾರ್ಖಾನೆಯೊಂದು 2024 ರಲ್ಲೇ ಅವಧಿ ಮುಗಿದಿದ್ದ ಚಾಕೊಲೇಟ್‌ಗಳ ದೊಡ್ಡ ದಾಸ್ತಾನನ್ನು ಹೆದ್ದಾರಿ ಪಕ್ಕದ ಕಸದ ಗುಂಡಿಗೆ ಸುರಿದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ದಾರಿಹೋಕರು ಬಣ್ಣಬಣ್ಣದ ಚಾಕೊಲೇಟ್ ಬಾಕ್ಸ್‌ಗಳನ್ನು ಆಯ್ದುಕೊಂಡು ಮನೆಗೆ ಕೊಂಡೊಯ್ಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.

ನೆಟ್ಟಿಗರ ತರಾಟೆ: “ದುಬಾರಿ ಬೈಕ್‌ಗಳಲ್ಲಿ ಬಂದು ಕಸದ ತೊಟ್ಟಿಯ ಎಕ್ಸ್‌ಪೈರ್ಡ್ ಆಹಾರವನ್ನು ಹೆಕ್ಕಿಕೊಂಡು ಹೋಗುವ ಇಂತಹ ದುರಾಸೆಯ ನಡವಳಿಕೆ ನಾಚಿಕೆಗೇಡು” ಎಂದು ನೆಟ್ಟಿಗರು ಟೀಕಿಸಿದ್ದಾರೆ.

ವಿಡಿಯೋ

ವಿಷಾಹಾರದ ಎಚ್ಚರಿಕೆ: ಅವಧಿ ಮುಗಿದ ಚಾಕೊಲೇಟ್‌ಗಳನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್, ಹೊಟ್ಟೆಯ ಸೋಂಕು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಮತ್ತಷ್ಟು ಓದಿ: ಕಾಫಿನಾಡಿನಲ್ಲಿ ಖಾದ್ಯಪ್ರಿಯರಿಗೆ ಶೋಕಿಂಗ್: ವಡೆಯಲ್ಲಿ ಸತ್ತ ಹಲ್ಲಿ, ಬೇಕರಿಯಲ್ಲಿ ಅವಧಿ ಮೀರಿದ ಸಾಸ್ ಬಳಸಿ ಕೊಳೆತ ಕೇಕ್ ಮಾರಾಟ

ಪೊಲೀಸ್ ತನಿಖೆ ಮತ್ತು ಎಫ್‌ಐಆರ್: ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ಡಿಸಿಪಿ ಎಸ್.ಎಂ. ಖಾಸಿಮ್ ಅಬಿದಿ ಅವರು ಪಂಕಿ ಪೊಲೀಸ್ ಠಾಣೆಗೆ ತನಿಖೆ ನಡೆಸಿ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ.

ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆ : ನಿಯಮಗಳ ಪ್ರಕಾರ, ಅವಧಿ ಮೀರಿದ ಯಾವುದೇ ಖಾದ್ಯ ಉತ್ಪನ್ನಗಳನ್ನು ರಸ್ತೆಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಎಸೆಯುವುದು ಕಾನೂನುಬಾಹಿರ. ಅವುಗಳನ್ನು ವೈಜ್ಞಾನಿಕವಾಗಿ ಅಥವಾ ಪುರಸಭೆಯ ತ್ಯಾಜ್ಯ ಸಂಸ್ಕರಣಾ ನಿಯಮಗಳ ಅಡಿಯಲ್ಲಿ ನಾಶಪಡಿಸುವುದು ಕಡ್ಡಾಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್