ಮಧ್ಯಪ್ರದೇಶ: ರಾಹುಲ್​ ಗಾಂಧಿ ಭೇಟಿಗೂ ಮುನ್ನ ವೇದಿಕೆಯಲ್ಲಿದ್ದ ಕಾಂಗ್ರೆಸ್​ ಪೋಸ್ಟರ್​ನಲ್ಲಿತ್ತು ಬಿಜೆಪಿ ಅಭ್ಯರ್ಥಿಯ ಚಿತ್ರ

ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ರ‍್ಯಾಲಿಗೂ ಮುನ್ನ ಮುಖ್ಯ ವೇದಿಕೆಯಲ್ಲಿ ಹಾಕಲಾಗಿದ್ದ ಪೋಸ್ಟರ್​ನಲ್ಲಿ ಬಿಜೆಪಿ ಅಭ್ಯರ್ಥಿಯ ಚಿತ್ರವಿತ್ತು. ಅದರಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ತೆ ಹಾಗೂ ಇತರ ಕೆಲವು ಕಾಂಗ್ರೆಸ್ ನಾಯಕರ ಚಿತ್ರವಿತ್ತು.

ಮಧ್ಯಪ್ರದೇಶ: ರಾಹುಲ್​ ಗಾಂಧಿ ಭೇಟಿಗೂ ಮುನ್ನ ವೇದಿಕೆಯಲ್ಲಿದ್ದ ಕಾಂಗ್ರೆಸ್​ ಪೋಸ್ಟರ್​ನಲ್ಲಿತ್ತು ಬಿಜೆಪಿ ಅಭ್ಯರ್ಥಿಯ ಚಿತ್ರ
Follow us
ನಯನಾ ರಾಜೀವ್
|

Updated on: Apr 09, 2024 | 8:11 AM

ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ರ‍್ಯಾಲಿಗೂ ಮುನ್ನ ಮುಖ್ಯ ವೇದಿಕೆಯಲ್ಲಿ ಹಾಕಲಾಗಿದ್ದ ಪೋಸ್ಟರ್​ನಲ್ಲಿ ಬಿಜೆಪಿ ಅಭ್ಯರ್ಥಿಯ ಚಿತ್ರವಿತ್ತು. ಅದರಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ತೆ ಹಾಗೂ ಇತರ ಕೆಲವು ಕಾಂಗ್ರೆಸ್ ನಾಯಕರ ಚಿತ್ರವಿತ್ತು.

ರಾಹುಲ್​ ಗಾಂಧಿ ಭೇಟಿಗೂ ಮುನ್ನ ಹೊರಬಿದ್ದ ವಿಡಿಯೋವೊಂದು ಕಾಂಗ್ರೆಸ್​ಗೆ ಮುಜುಗರ ಉಂಟು ಮಾಡಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ವೇದಿಕೆಯಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್​ನಿಂದ ಕೇಂದ್ರ ಸಚಿವ ಫಗ್ಗನ್ ಸಿಂಗ್ ಅವರ ಫೋಟೊವನ್ನು ಮರೆಮಾಚುತ್ತಿರುವುದು ಕಂಡು ಬಂದಿದೆ.

ತಪ್ಪಿನ ಅರಿವಾದ ಬಳಿಕ ಅದೇ ಜಾಗದಲ್ಲಿ ಕಾಂಗ್ರೆಸ್​ ಶಾಸಕ ರಜನೀಶ್​ ಹರ್ವಂಶ್ ಅವರ ಚಿತ್ರ ಹಾಕಲಾಗಿದೆ. ಕುಲಸ್ತೆ ಅವರ ಚಿತ್ರ ಮರೆಮಾಡಲಾಗಿದೆ. ಈ ಬಾರಿ ಮಂಡ್ಲಾದಿಂದ ಓಂಕಾರ್ ಸಿಂಗ್ ಅವರಿಗೆ ಕಾಂಗ್ರೆಸ್​ ಟಿಕೆಟ್ ನೀಡಿದೆ, ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಜಬಲ್​ಪುರದಲ್ಲಿ ಮೆಗಾ ರೋಡ್​ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಮತ್ತಷ್ಟು ಓದಿ: ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್​ ಸೋತರೆ ರಾಹುಲ್​ ಗಾಂಧಿ ಏನು ಮಾಡಬೇಕು? ಪ್ರಶಾಂತ್​ ಕಿಶೋರ್​ ಸಲಹೆ ಏನು?

ಇದು ಕಾಂಗ್ರೆಸ್​ ಗಂಭೀರತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ, ಅವರು ತಮ್ಮ ಅಭ್ಯರ್ಥಿಯ ಭಾವಚಿತ್ರದ ಬದಲು ಬಿಜೆಪಿ ಅಭ್ಯರ್ಥಿಯ ಭಾವಚಿತ್ರ ಅಳವಡಿಸಿದ್ದಾರೆ. ಆ ಮೂಲಕ ಚುನಾವಣೆಯ ಮುನ್ನವೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.

ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ನಂತರ ಏಪ್ರಿಲ್ 26ರಂದು, ಮೇ 7 ಹಾಗೂ ಮೇ 13ರಂದು ನಡೆಯಲಿದೆ. ಮಧ್ಯಪ್ರದೇಶವು ಒಟ್ಟು 29 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಸಂಸತ್ತಿನ ಪ್ರಾತಿನಿಧ್ಯದ ವಿಷಯದಲ್ಲಿ ಆರನೇ ಅತಿದೊಡ್ಡ ರಾಜ್ಯವಾಗಿದೆ. ಈ ಪೈಕಿ 10 ಸ್ಥಾನಗಳು ಎಸ್​ಸಿ ಹಾಗೂ ಎಸ್​ಟಿ ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಉಳಿದ 19 ಸ್ಥಾನಗಳು ಮೀಸಲಿರುವುದಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 29ರಲ್ಲಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದ್ದರೆ, ಕಾಂಗ್ರೆಸ್​ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ