AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲಿಘಾಟ್​ನಲ್ಲಿ ಮಮತಾ ಬ್ಯಾನರ್ಜಿ ಹತ್ಯೆಗೆ ಯತ್ನ, ಚಾಕುವಿನಿಂದ ದಾಳಿಗೆ ಮುಂದಾಗಿದ್ದ ಮಹಿಳೆ ಅರೆಸ್ಟ್​

ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಬಳಿ ಚಾಕು ದಾಳಿಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಇದು ಗಂಭೀರ ಭದ್ರತಾ ಲೋಪವೆಂದು ಟಿಎಂಸಿ ಆರೋಪಿಸಿದೆ. ದಾಳಿಕೋರ ಮಹಿಳೆ ಸಿವಿಕ್ ವಾಲಂಟಿಯರ್ ಆಗಿದ್ದು, ರಾಜಕೀಯ ಪಿತೂರಿಯ ಶಂಕೆ ವ್ಯಕ್ತವಾಗಿದೆ. ಘಟನೆಯು ಪಶ್ಚಿಮ ಬಂಗಾಳದಲ್ಲಿ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾಲಿಘಾಟ್​ನಲ್ಲಿ ಮಮತಾ ಬ್ಯಾನರ್ಜಿ ಹತ್ಯೆಗೆ ಯತ್ನ, ಚಾಕುವಿನಿಂದ ದಾಳಿಗೆ ಮುಂದಾಗಿದ್ದ ಮಹಿಳೆ ಅರೆಸ್ಟ್​
ಮಮತಾ ಬ್ಯಾನರ್ಜಿImage Credit source: PTI
ನಯನಾ ರಾಜೀವ್
|

Updated on: Oct 14, 2026 | 7:24 AM

Share

ಕೋಲ್ಕತ್ತಾ, ಅಕ್ಟೋಬರ್ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಲಿಘಾಟ್​​ ನಿವಾಸದ ಹೊರಗೆ ಮಂಗಳವಾರ ಸಂಜೆ ಭದ್ರತಾ ಲೋಪವಾಗಿದೆ. ಮಮತಾ ಬ್ರಾನರ್ಜಿ ಸಂಜೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದ ವೇಳೆ, ಮಹಿಳೆಯೊಬ್ಬರು ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಡೋಲಾ ಸೇನ್ ಹಾಗೂ ವಕ್ತಾರ ಸಾಕೇತ್ ಗೋಖಲೆ ಈ ಘಟನೆಯನ್ನು ಗಂಭೀರ ಭದ್ರತಾ ಲೋಪ ಮತ್ತು ವ್ಯವಸ್ಥಿತ ಸಂಚು ಎಂದು ಕರೆದಿದ್ದಾರೆ.

ಬಂಧಿತ ಮಹಿಳೆಯನ್ನು ಅನುಸುವಾ ಸಹಾ ಎಂದು ಗುರುತಿಸಲಾಗಿದೆ. ಈಕೆ ಪಶ್ಚಿಮ ಬಂಗಾಳ ಪೊಲೀಸರ ಗುತ್ತಿಗೆ ಆಧಾರಿತ ‘ಸಿವಿಕ್ ವಾಲಂಟಿಯರ್’ ಆಗಿದ್ದು, ತಾನು ಮಮತಾ ಬ್ಯಾನರ್ಜಿ ಅವರ ಸೊಸೆ ಎಂದು ಹೇಳಿಕೊಂಡಿದ್ದಾಳೆ. ಮಾದಕ ವ್ಯಸನಿಯಂತೆ ಕಾಣುತ್ತಿದ್ದ ಆ ಮಹಿಳೆ, ಮಮತಾ ಬ್ಯಾನರ್ಜಿ ಅವರು ಹೊರಬರುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಮಾರಣಾಂತಿಕವಾಗಿ ಸಮೀಪಿಸಲು ಯತ್ನಿಸಿದ್ದಳು ಎಂದು ಡೋಲಾ ಸೇನ್ ದೂರಿನಲ್ಲಿ ತಿಳಿಸಿದ್ದಾರೆ.

ರಾಜಕೀಯ ಪಿತೂರಿಯ ಶಂಕೆ: ಝಡ್-ಪ್ಲಸ್ ಭದ್ರತೆ ಹೊಂದಿರುವ ಮೂರು ಬಾರಿಯ ಮಾಜಿ ಮುಖ್ಯಮಂತ್ರಿಯ ನಿವಾಸದ ಬಳಿ ಹರಿತವಾದ ಆಯುಧದೊಂದಿಗೆ ಯಾರಾದರೂ ಹೇಗೆ ಬರಲು ಸಾಧ್ಯ? ದೆಹಲಿಯಲ್ಲಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿರುವ ಮಮತಾರನ್ನು ಮುಗಿಸಲುಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಪೊಲೀಸ್ ಹೇಳಿಕೆ: ಮಾಜಿ ಮುಖ್ಯಮಂತ್ರಿಯವರು ಮನೆಯಿಂದ ಹೊರಬರುವಾಗ ಅನುಸುವಾ ಸಹಾ (38) ಎಂಬ ಮಹಿಳೆ ಅವರ ಬಳಿ ಬಂದು ತೀವ್ರ ವಾಗ್ವಾದಕ್ಕಿಳಿದಿದ್ದಾಳೆ. ಕರ್ತವ್ಯದಲ್ಲಿದ್ದ ಪೊಲೀಸರು ತಕ್ಷಣವೇ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ಆಕೆಯ ಹಿನ್ನೆಲೆ, ಉದ್ದೇಶ ಮತ್ತು ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆಯೇ ಅಥವಾ ಮಾದಕ ವ್ಯಸನಿಯೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ರೆಜಿನಗರ ಅಖಾಡಾದಲ್ಲಿ ಹೈಡ್ರಾಮಾ: ನಾಮಪತ್ರ ಹಿಂಪಡೆಯುವ ನಿರ್ಧಾರ ಬದಲಿಸಿ ಯು-ಟರ್ನ್ ಹೊಡೆದ ಟಿಎಂಸಿ ಅಭ್ಯರ್ಥಿ!

ಸತತ ಮೂರು ಅವಧಿಗಳ ನಂತರ, 2026ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ನಾಯಕರ ಮೇಲಿನ ದಾಳಿಗಳು ಮುನ್ನೆಲೆಗೆ ಬಂದಿವೆ.

ಆಗಸ್ಟ್ 2026: ಕೋಲ್ಕತ್ತಾದ ಶ್ಯಾಂಬಜಾರ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ಬೃಹತ್ ಕಲ್ಲು ತೂರಾಟ ನಡೆದಿತ್ತು.

ಮೇ 2026: ಚುನಾವಣಾ ಫಲಿತಾಂಶದ ನಂತರ ದಕ್ಷಿಣ 24 ಪರಗಣದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲಾಗಿತ್ತು.

ಇತ್ತೀಚಿನ ಘಟನೆ: ಕಳೆದ ಶನಿವಾರ ಬರುಯಿಪುರ್ ಪೂರ್ವ ಕ್ಷೇತ್ರದ ಟಿಎಂಸಿ ಶಾಸಕ ಬಿಭಾಸ್ ಸರ್ದಾರ್ ಅವರ ಕಾರನ್ನು ಗುಂಪೊಂದು ಸುತ್ತುವರೆದು, ಗಾಜುಗಳನ್ನು ಪುಡಿಪುಡಿ ಮಾಡಿ ಜೀವ ಬೆದರಿಕೆ ಹಾಕಿತ್ತು.

ಸಿವಿಕ್ ವಾಲಂಟಿಯರ್ ವಿವಾದ: ಆರ್‌ಜಿ ಕರ್ ಆಸ್ಪತ್ರೆಯ ಪ್ರಕರಣದ ಬಳಿಕ ಪಶ್ಚಿಮ ಬಂಗಾಳದಲ್ಲಿ ಸಿವಿಕ್ ವಾಲಂಟಿಯರ್‌ಗಳ ನೇಮಕಾತಿ, ಶಿಸ್ತು ಮತ್ತು ಅವರ ಹಿನ್ನೆಲೆ ಪರಿಶೀಲನೆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈಗ ಅದೇ ಪಡೆಯ ಗುತ್ತಿಗೆ ಸಿಬ್ಬಂದಿಯೊಬ್ಬರು ಮಾಜಿ ಸಿಎಂ ನಿವಾಸದ ಬಳಿಯೇ ರಂಪಾಟ ನಡೆಸಿರುವುದು ಭದ್ರತಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಆಕೆಯ ವಿರುದ್ಧ ಕಾಲಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ