AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾದ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿ ವ್ಯಕ್ತಿ ಸಾವು, ಮಗ ಆಸ್ಪತ್ರೆಗೆ ದಾಖಲು

ಸದಾ ಒಂದಲ್ಲಾ ಒಂದು ಘಟನೆಯಿಂದ ಸುದ್ದಿಯಲ್ಲಿರುವ ಕೋಲ್ಕತ್ತಾ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​​(Lift) ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ. ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಪ್ರಕಾರ, ಮೃತರ ಮಗನ ಕಾಲಿನ ಮೂಳೆ ಮುರಿದಿದ್ದು, ಆರ್​​ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕೋಲ್ಕತ್ತಾದ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿ ವ್ಯಕ್ತಿ ಸಾವು, ಮಗ ಆಸ್ಪತ್ರೆಗೆ ದಾಖಲು
ಲಿಫ್ಟ್​
ನಯನಾ ರಾಜೀವ್
|

Updated on: Mar 20, 2026 | 3:30 PM

Share

ಕೋಲ್ಕತ್ತಾ, ಮಾರ್ಚ್​ 20: ಸದಾ ಒಂದಲ್ಲಾ ಒಂದು ಘಟನೆಯಿಂದ ಸುದ್ದಿಯಲ್ಲಿರುವ ಕೋಲ್ಕತ್ತಾ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​​(Lift) ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ. ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಪ್ರಕಾರ, ಮೃತರ ಮಗನ ಕಾಲಿನ ಮೂಳೆ ಮುರಿದಿದ್ದು, ಆರ್​​ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಅರೂಪ್ ಬಂಡೋಪಾಧ್ಯಾಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹಿಂದಿರುಗುತ್ತಿದ್ದಾಗ ಲಿಫ್ಟ್​ನಿಂದ ಕೆಳಗೆ ಹೋಗುತ್ತಿದ್ದರು. ಲಿಫ್ಟ್​ ಇದ್ದಕ್ಕಿದ್ದಂತೆ ನಿಂತಿತ್ತು, ಒಳಗೆ ಮೂವರು ಸಿಲುಕಿಕೊಂಡಿದ್ದರು. ಅರೂಪ್ ಬಹಳ ಸಮಯವಾದರೂ ಹಿಂದಿರುಗದಿದ್ದಾಗ ಕುಟುಂಬ ಚಿಂತಿತರಾಗಿ ಅವರನ್ನು ಹುಡುಕಲು ಆರಂಭಿಸಿತ್ತು. ನಂತರ ಅವರ ಶವ ಲಿಫ್ಟ್​ ಒಳಗೆ ಪತ್ತೆಯಾಗಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಲಿಫ್ಟ್​ಮ್ಯಾನ್ ಇರಲಿಲ್ಲ. ಪ್ರಾಥಮಿಕ ತನಿಖೆಗಳು ಇದನ್ನು ಸಮಪೂರ್ಣ ನಿರ್ಲಕ್ಷ್ಯವೆಂದು ಪರಿಗಣಿಸುತ್ತಿವೆ. ಹಿಂದಿನ ದಿನ ಲಿಫ್ಟ್​ ಕೆಟ್ಟುಹೋಗಿತ್ತು. ಆದರೆ ಅದನ್ನು ದುರಸ್ತಿ ಮಾಡಲಾಗಿಲ್ಲ ಎಂದು ಕೆಲವರು ಹೇಳಿದ್ದಾರೆ.

ಮತ್ತಷ್ಟು ಓದಿ: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಮೃತರ ಸಹೋದರಿ ಅರ್ಪಿತಾ ಮಾತನಾಡಿ, ನಾವು ನಮ್ಮ ಅಳಿಯನ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇವೆ, ನಾವು ಕಿರುಚುತ್ತಲೇ ಇದ್ದೆವು, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಊಹಿಸಿರಲಿಲ್ಲ ಎಂದರು.

ರಕ್ಷಣಾ ಕಾರ್ಯಾಚರಣೆ ಆರಂಭವಾದಾಗ ಸಿಬ್ಬಂದಿಗೆ ಲಿಫ್ಟ್​ ಕೀ ಸಿಗಲಿಲ್ಲ, ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಬಿಜೆಪಿ ನಾಯಕ ತಪಸ್ ಚಟರ್ಜಿ ಟಿಎಂಸಿ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಸರ್ಕಾರ ಮತ್ತು ಆಸ್ಪತ್ರೆಯ ಕಡೆಯಿಂದ ಆದ ನಿರ್ಲಕ್ಷ್ಯ ಎಂದು ಹೇಳಿದ್ದಾರೆ,ಜೀವಗಳನ್ನು ಉಳಿಸಲಾಗದಿದ್ದರೂ ಅಂತಹ ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!