ಕೊವಿಶೀಲ್ಡ್, ಕೊವಾಕ್ಸಿನ್ ಮಿಶ್ರಣದಿಂದ ಉತ್ತಮ ಫಲಿತಾಂಶ: ಎಐಸಿಎಂಆರ್

ICMR: ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಷಯ ತಜ್ಞರ ಸಮಿತಿಯು ಜುಲೈನಲ್ಲಿ 300 ಆರೋಗ್ಯವಂತ ಸ್ವಯಂಸೇವಕರ ಮೇಲೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ನಡೆಸಲ್ಪಡುವ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಮಿಶ್ರಣವನ್ನು ಪ್ರಯೋಗಿಸಲು ಶಿಫಾರಸು ಮಾಡಿದೆ.

ಕೊವಿಶೀಲ್ಡ್, ಕೊವಾಕ್ಸಿನ್ ಮಿಶ್ರಣದಿಂದ ಉತ್ತಮ ಫಲಿತಾಂಶ: ಎಐಸಿಎಂಆರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 08, 2021 | 4:39 PM

ದೆಹಲಿ: ಭಾರತದ ಕೊಡ್ ಲಸಿಕೆ ಕಾರ್ಯಕ್ರಮದ ಎರಡು ಮುಖ್ಯ ಲಸಿಕೆಗಳಾದ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಮಿಶ್ರಣವು ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಹಿರಂಗಪಡಿಸಿರುವಾಗಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉತ್ತರ ಪ್ರದೇಶದ ಸಿದ್ಧಾರ್ಥ್ ನಗರದ 18 ಜನರ ಮೇಲೆ ಮಾತ್ರ ಅಧ್ಯಯನ ನಡೆಸಲಾಯಿತು. ಅಂದಹಾಗೆ ಅವರು ಅವರು ತಪ್ಪಾಗಿ ಎರಡು ಪ್ರತ್ಯೇಕ ಲಸಿಕೆಗಳ ಎರಡು ಡೋಸ್ ಪಡೆದಿದ್ದರು.

ಅಧ್ಯಯನದ ಪ್ರಕಾರ, ಅಡೆನೊವೈರಸ್ ವೆಕ್ಟರ್ ಪ್ಲಾಟ್‌ಫಾರ್ಮ್ ಆಧಾರಿತ ಲಸಿಕೆಯ ಸಂಯೋಜನೆ  ಮತ್ತಷ್ಟು ಪರಿಶೀಲನೆಯ ಅಗತ್ಯವಿದೆ. ನಿಷ್ಕ್ರಿಯಗೊಂಡ ಸಂಪೂರ್ಣ ವೈರಸ್ ಲಸಿಕೆ ಸುರಕ್ಷಿತ ಮಾತ್ರವಲ್ಲದೆ ಉತ್ತಮ ಇಮ್ಯುನೊಜೆನಿಸಿಟಿಯನ್ನು ಹೊರಹೊಮ್ಮಿಸಿದೆ. ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್, ಅಡೆನೊವೈರಸ್ ವೆಕ್ಟರ್ ಪ್ಲಾಟ್‌ಫಾರ್ಮ್ ಆಧಾರಿತ ಲಸಿಕೆ ಆಗಿದ್ದು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಸಂಪೂರ್ಣ ವೈರಸ್ ಲಸಿಕೆಯಾಗಿದೆ ಕೊವಾಕ್ಸಿನ್. ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡು ವಿಭಿನ್ನ ವಿಧಗಳಿಗೆ ಸೇರಿವೆ.

‘Serendipitous Covid-19 Vaccine-Mix in Uttar Pradesh, India: Safety and Immunogenicity Assessment of a Heterologous Regime’ ಎಂಬ ಶೀರ್ಷಿಕೆಯ ಅಧ್ಯಯನವನ್ನು ಮೆಡ್‌ಆರ್‌ಕ್ಸಿವ್ (medRxiv)ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಅಧ್ಯಯನದ ಅಡಿಯಲ್ಲಿ, 18 ಜನರು ಎರಡು ವಿಭಿನ್ನ ಲಸಿಕೆಗಳ ಎರಡು ಡೋಸ್‌ಗಳನ್ನು ಪಡೆದರು.ಇದರ ಪ್ರತಿಕ್ರಿಯೆಯನ್ನು ಎರಡು ಡೋಸ್ ಕೊವಿಶೀಲ್ಡ್‌ ಸ್ವೀಕರಿಸಿದ 40 ಮಂದಿ ಮತ್ತು ಎರಡು ಡೋಸ್ ಕೊವಾಕ್ಸಿನ್‌ ಪಡೆದಿರುವ 40 ಮಂದಿ ಜತೆ ಹೋಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಧ್ಯಯನದ ಅವಧಿ 2021 ರ ಮೇ ನಿಂದ ಜೂನ್ ವರೆಗೆ  ಆಗಿತ್ತು ಎಂದು ಅದು ಹೇಳಿದೆ.

ಲಸಿಕೆಗಳ ಮಿಶ್ರಣವನ್ನು ಜಾಗತಿಕವಾಗಿ ಚರ್ಚಿಸಲಾಗುತ್ತಿದೆ. ಎಲ್ಲಾ ಅಧ್ಯಯನಗಳು ಭವಿಷ್ಯದ ಸೋಂಕಿನ ವಿರುದ್ಧ ರಕ್ಷಣೆಯನ್ನು ಹೆಚ್ಚಿಸಲು ಎರಡು ಲಸಿಕೆಗಳನ್ನು ಮಿಶ್ರಣ ಮಾಡುವ ಪರವಾಗಿವೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಷಯ ತಜ್ಞರ ಸಮಿತಿಯು ಜುಲೈನಲ್ಲಿ 300 ಆರೋಗ್ಯವಂತ ಸ್ವಯಂಸೇವಕರ ಮೇಲೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ನಡೆಸಲ್ಪಡುವ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಮಿಶ್ರಣವನ್ನು ಪ್ರಯೋಗಿಸಲು ಶಿಫಾರಸು ಮಾಡಿದೆ.

ಕೊವಿಶೀಲ್ಡ್ ಮತ್ತು ಕೊವಾಕ್ಸಿನ್‌ನ ಮಿಶ್ರಣ ಪರಿಣಾಮಕಾರಿತ್ವವನ್ನು ತನಿಖೆ ಮಾಡಲು ಇದು ಸರಿಯಾದ ವೈದ್ಯಕೀಯ ಪ್ರಯೋಗವಾಗಿದ್ದರೂ, ಐಸಿಎಂಆರ್‌ನ ಅಧ್ಯಯನವು ಮೇ ತಿಂಗಳಲ್ಲಿ ನಡೆದ ಅಚಾತುರ್ಯವನ್ನು ಆಧರಿಸಿದೆ. ಫಲಾನುಭವಿಗಳಲ್ಲಿ ಮಿಶ್ರಣದ ತಕ್ಷಣದ ಪ್ರತಿಕೂಲ ಪರಿಣಾಮವಿಲ್ಲ. ಮಿಶ್ರಣವು ವಾಸ್ತವವಾಗಿ ರಕ್ಷಣೆಯ ಪರವಾಗಿ ಕೆಲಸ ಮಾಡಿದೆ ಎಂದು,ಹೆಚ್ಚಿನ ಅಧ್ಯಯನವು ಬಹಿರಂಗಪಡಿಸಿದೆ. ಏಕೆಂದರೆ ಈ ಜನರು ಒಂದೇ ಲಸಿಕೆಯ ಎರಡು ಡೋಸ್ ಪಡೆದವರಿಗಿಂತ ಹೆಚ್ಚಿನ ರಕ್ಷಣೆ ಹೊಂದಿದ್ದಾರೆ.

ಲಸಿಕೆಗಳನ್ನು ಬೆರೆಸುವ ವಿಷಯ ಸೂಕ್ಷ್ಮವಾಗಿದೆ ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಗಳನ್ನು ಮಿಶ್ರಣ ಮಾಡುವ ಬಗ್ಗೆ ವ್ಯಕ್ತಿಗಳು ನಿರ್ಧರಿಸಬಾರದು ಎಂದು ಎಚ್ಚರಿಸಿದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ ಪೌಲ್ ಅವರು ಜನವರಿ 16 ರಂದು ಸರ್ಕಾರ ತನ್ನ ಲಸಿಕೆ ವಿತರಣೆ ಆರಂಭಿಸಿದಾಗ, ಫಲಾನುಭವಿಗಳು ತಮ್ಮ ಮೊದಲ ಡೋಸ್ ಪಡೆದ ಅದೇ ಲಸಿಕೆಯ ಎರಡನೇ ಡೋಸ್ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತರು ತೀವ್ರ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ಇದನ್ನೂ ಓದಿ:  ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಅನುಮತಿ

(Mix of Covishield and Covaxin an give better results says The Indian Council of Medical Research ICMR)

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ