ಬಾಂಗ್ಲಾ, ಫ್ರಾನ್ಸ್ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆಯ ಹುನ್ನಾರ: ಮೋಹನ್ ಭಾಗವತ್ ಕಳವಳ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದಸರಾ ಭಾಷಣದಲ್ಲಿ ಭಾರತದಲ್ಲಿ 'ಆಡಳಿತ ಬದಲಾವಣೆ' ಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ, ಫ್ರಾನ್ಸ್ ಮಾದರಿಯಲ್ಲಿ ಬೀದಿ ಪ್ರತಿಭಟನೆಗಳ ಮೂಲಕ ಭಾರತದಲ್ಲಿ ಬದಲಾವಣೆ ಅಸಾಧ್ಯ ಎಂದರು. ದ್ವೇಷ ಬಿತ್ತುವ ಬದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಚಳವಳಿಗಾರರಿಗೆ ಕರೆ ನೀಡಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಚಳವಳಿ ದುರ್ಬಳಕೆ ಬೇಡ.

ನಾಗ್ಪುರ, ಅಕ್ಟೋಬರ್ 20: ನೆರೆಯ ಬಾಂಗ್ಲಾದೇಶ, ನೇಪಾಳ ಹಾಗೂ ಯುರೋಪ್‌ನ ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ಬೀದಿಗಿಳಿದು ‘ಆಡಳಿತ ಬದಲಾವಣೆ’ ಮಾಡಲು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.
ನಾಗ್ಪುರದಲ್ಲಿ ಮಂಗಳವಾರ ನಡೆದ ವಾರ್ಷಿಕ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚುನಾವಣಾ ಆಯೋಗ ಮತ್ತು ಸರ್ಕಾರದ ವಿರುದ್ಧ ದೇಶದಲ್ಲಿ ನಡೆದ ಪ್ರತಿಭಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ, ಭಾರತದಲ್ಲಿ ಇಂತಹ ಅರಾಜಕತೆಯ ಪ್ರಯತ್ನಗಳು ಎಂದಿಗೂ ಸಫಲವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಜಗತ್ತಿನಾದ್ಯಂತ, ವಿಶೇಷವಾಗಿ ಪಶ್ಚಿಮ ದೇಶಗಳಲ್ಲಿ ಅಶಾಂತಿಯ ಬಿರುಗಾಳಿ ಎದ್ದಿದೆ. ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಬೀದಿಗಿಳಿದು ಆಡಳಿತ ಬದಲಿಸಿದ ಘಟನೆಗಳನ್ನು ನಾವು ನೋಡಿದ್ದೇವೆ. ಭಾರತದಲ್ಲೂ ಅಂತಹದೇ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಆದರೆ, ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ. ಭಾರತವು ದೃಢ ಸಂಕಲ್ಪದೊಂದಿಗೆ ಸಾಗುತ್ತಿದೆ ಮತ್ತು ನಮ್ಮ ಸಮಾಜದ ಸಾಮೂಹಿಕ ಚೈತನ್ಯ ಹಾಗೂ ಪುರುಷಾರ್ಥ ಇಂದು ಜಾಗೃತಗೊಂಡಿದೆ” ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: ಆತ್ಮಪ್ರಜ್ಞೆ ಮರೆತಿದ್ದಕ್ಕೆ ಗುಲಾಮಗಿರಿ ಅನುಭವಿಸಿದೆವು: ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಚಳವಳಿಗಳು ದ್ವೇಷ ಬಿತ್ತಬಾರದು: ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಚಳವಳಿಗಳು ಮತ್ತು ಪ್ರತಿಭಟನೆಗಳು ನಡೆಯುವುದು ಸಹಜ. ಆದರೆ ಅವು ಸಮಾಜದಲ್ಲಿ ದ್ವೇಷ ಬಿತ್ತುವ ಬದಲಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಬೇಕು. ಯಾವುದೇ ಹೋರಾಟವಾದರೂ ಅದು ಸಮಾಜದ ಸಭ್ಯತೆ ಹಾಗೂ ಮರ್ಯಾದೆಯ ಮಿತಿಗಳನ್ನು ಮೀರಬಾರದು ಎಂದು ಕಿವಿಮಾತು ಹೇಳಿದರು.
ಪೋಸ್ಟ್
#WATCH | Nagpur, Maharashtra: At RSS’ Vijayadashami celebrations, RSS chief Mohan Bhagwat says, “The terrible tragedy that Nepal has recently had to endure, claiming the lives of thousands of people, can be attributed, at least in part, to the consequences of one-sided development across the Himalayan region, which stretches through several countries, including India, Tibet, Bhutan, and China. We all feel the profound sorrow caused by such a massive loss of human life, and we naturally come together to provide relief and assistance to those affected in the aftermath of such tragedies. However, it is essential that we develop a holistic and balanced vision of development. It is the human being who determines the appropriate direction in which a means is to be used and decides what is right or wrong in its use. Therefore, along with acquiring knowledge and technology, discernment necessary for their proper use should also be cultivated, as well as the ethical and practical discipline governing its use, should be put into practice.”
(Video: RSS)
— ANI (@ANI) October 20, 2026
ಅಗ್ಗದ ಪ್ರಚಾರಕ್ಕಾಗಿ ಚಳವಳಿ ಬೇಡ: ಕೇವಲ ಮತಬ್ಯಾಂಕ್ ರಾಜಕಾರಣ ಅಥವಾ ಅಗ್ಗದ ಜನಪ್ರಿಯತೆಗಾಗಿ ಚಳವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಬೀದಿಗಿಳಿದು ಮಾಡುವ ಪ್ರತಿಭಟನೆಗಳಿಂದ ಮಾತ್ರ ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ; ಸಮಾಜದ ನಡುವಿನ ಸಕಾರಾತ್ಮಕ ಸಂವಾದ ಮತ್ತು ಪರಸ್ಪರ ಚರ್ಚೆಯಿಂದ ಮಾತ್ರ ನಿಜವಾದ ಪರಿಹಾರ ಹೊರಹೊಮ್ಮಲು ಸಾಧ್ಯ ಎಂದು ಭಾಗವತ್ ಕರೆ ನೀಡಿದರು.
ಬಾಂಗ್ಲಾದೇಶ ಮತ್ತು ನೇಪಾಳದ ದಂಗೆಗಳ ಪಾಠ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಚಳವಳಿಯು ಹಿಂಸಾತ್ಮಕ ರೂಪ ಪಡೆದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡಿತ್ತು. ನೇಪಾಳ ಮತ್ತು ಫ್ರಾನ್ಸ್‌ಗಳಲ್ಲೂ ಸರಣಿ ಬೀದಿಗಿಳಿದ ಪ್ರತಿಭಟನೆಗಳು ಸರ್ಕಾರಗಳ ಅಸ್ಥಿರತೆಗೆ ಕಾರಣವಾಗಿದ್ದವು. ಈ ಅಂತಾರಾಷ್ಟ್ರೀಯ ಘಟನೆಗಳನ್ನು ಉಲ್ಲೇಖಿಸಿ, ಭಾರತದಲ್ಲೂ ಆಡಳಿತ ವಿರೋಧಿ ಶಕ್ತಿಗಳು ಇಂತಹ ಅಸ್ಥಿರತೆ ತರಲು ಯತ್ನಿಸುತ್ತಿವೆ ಎಂಬ ಚರ್ಚೆ ಇತ್ತೀಚೆಗೆ ತೀವ್ರಗೊಂಡಿದೆ.
ಚುನಾವಣಾ ಆಯೋಗದ ಸುತ್ತಲಿನ ಪ್ರತಿಭಟನೆ: ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಗಳ ವೇಳೆ ‘ಆಡಳಿತ ಬದಲಾವಣೆ’ ಕುರಿತ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಗ್ರಾಸವಾಗಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ ಮೋಹನ್ ಭಾಗವತ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




