
ಕೊಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ಹೈಪ್ರೊಫೈಲ್ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ರಂಗದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇಂದು ಮಧ್ಯಾಹ್ನ ರಾಜ್ಯ ಸಚಿವಾಲಯ ‘ನಬನ್ನ’ದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ, ನಂತರ ತಮ್ಮ ನಾಮಪತ್ರ ಹಿಂಪಡೆದರು.
ಸಂಚಿತಾ ಪ್ರಧಾನ್ ಡೇ ಮತ್ತು ಸಿಎಂ ಸುವೇಂದು ಅಧಿಕಾರಿ ಅವರ ಸಭೆಯ ನಂತರ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದರಿಂದಾಗಿ ನಂದಿಗ್ರಾಮದಲ್ಲಿ ಆಡಳಿತಾರೂಢ ಬಿಜೆಪಿಯ ತಂತ್ರಗಾರಿಕೆ ಫಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದ್ದರಿಂದ, ಮಮತಾ ಬ್ಯಾನರ್ಜಿ ಅವರ ಬಣಕ್ಕೆ ನಂದಿಗ್ರಾಮದಲ್ಲಿ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ
ಮುಂಬರುವ ಅಕ್ಟೋಬರ್ 6ರ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಹೊಸ ಪಕ್ಷದ ಹೆಸರು ಹಾಗೂ ಹೊಸ ಚಿಹ್ನೆಯನ್ನು ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇದರಿಂದಾಗಿ ತೃಣಮೂಲ ಕಾಂಗ್ರೆಸ್‌ನ (TMC) ಸಾಂಪ್ರದಾಯಿಕ ಗುರುತಿನ ಮೇಲಿನ ತಕ್ಷಣದ ಹಕ್ಕನ್ನು ಮಮತಾ ಬಣ ಕಳೆದುಕೊಂಡಂತಾಗಿದೆ.
#WATCH | West Bengal | Mamata Banerjee-led faction candidate from Nandigram Sanchita Pradhan (Dey) has withdrawn her nomination for the Nandigram Assembly constituency by-election.
(Video and pic: West Bengal CMO) https://t.co/trquddnraK pic.twitter.com/32HxXCY62y
— ANI (@ANI) September 18, 2026
ಸಂಚಿತಾ ನಾಮಪತ್ರ ಹಿಂಪಡೆದಿದ್ದರೂ ನಂದಿಗ್ರಾಮದಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿ ಪರವಾಗಿ ಹಾಸಿರಾಣಿ ರಥ್, ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದಿಂದ ಮಹಮ್ಮದ್ ಎತೇಶಾಮುಲ್ ಹಕ್, ಸಿಪಿಐ (CPI) ಯಿಂದ ಶಾಂತಿ ಗೋಪಾಲ್ ಗಿರಿ, ಕಾಂಗ್ರೆಸ್‌ನಿಂದ ಮಿಲನ್ ಪ್ರಧಾನ್ ಹಾಗೂ ಎಐಎಸ್‌ಎಫ್‌ನಿಂದ (AISF) ಮಹಮ್ಮದ್ ಸಬೆ ಮಿರಾಜ್ ಅಲಿ ಖಾನ್ ಕಣದಲ್ಲಿದ್ದಾರೆ.
ಇದನ್ನೂ ಓದಿ: ಟಿಎಂಸಿಯ ಮೂಲ ಹೆಸರು ಮತ್ತು ಚಿಹ್ನೆ ಫ್ರೀಜ್: ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ ಗುರುತು
ಸುವೇಂದು ಬಿಟ್ಟುಕೊಟ್ಟ ನಂದಿಗ್ರಾಮ:
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿದೆ.
Sanchita Pradhan (Dey) has withdrawn her nomination from the Nandigram Assembly constituency bypoll. She had filed her nomination as a candidate of the Mamata Banerjee-led faction, “Mamata All India Trinamool Congress” pic.twitter.com/cQ5swdCewd
— IANS (@ians_india) September 18, 2026
ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ನಂದಿಗ್ರಾಮದ ಜೊತೆಗೆ ರೆಜಿನಗರ ಕ್ಷೇತ್ರಕ್ಕೂ ಅಂದೇ ಉಪಚುನಾವಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Fri, 18 September 26