AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆದ್ದು ವಿಧಾನಸಭೆಗೆ ಬನ್ನಿ, ಒಟ್ಟಿಗೇ ಇರೋಣ: ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾಗೆ ಸ್ವಪಕ್ಷೀಯ ಬಂಡಾಯಗಾರರ ರೆಡ್ ಕಾರ್ಪೆಟ್

ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆಯಲ್ಲಿ ಟಿಎಂಸಿ ಆಂತರಿಕ ರಾಜಕೀಯ ಹೊಸ ತಿರುವು ಪಡೆದಿದೆ. ಮಮತಾ ಬ್ಯಾನರ್ಜಿ ಸ್ಪರ್ಧಿಸಿದರೆ, ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಟಿಎಂಸಿ ಬಂಡಾಯ ಬಣ ಘೋಷಿಸಿದೆ. ಮಮತಾ ಗೆದ್ದು ವಿಧಾನಸಭೆಗೆ ಮರಳಿ ಬರಲಿ, ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಬಂಡಾಯಗಾರರು ಆಫರ್ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಅಸಮಾಧಾನ ಈ ಬೆಳವಣಿಗೆಗೆ ಕಾರಣವಾಗಿದೆ.

ಗೆದ್ದು ವಿಧಾನಸಭೆಗೆ ಬನ್ನಿ, ಒಟ್ಟಿಗೇ ಇರೋಣ: ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾಗೆ ಸ್ವಪಕ್ಷೀಯ ಬಂಡಾಯಗಾರರ ರೆಡ್ ಕಾರ್ಪೆಟ್
ಮಮತಾ ಬ್ಯಾನರ್ಜಿ
ನಯನಾ ರಾಜೀವ್
|

Updated on: Sep 13, 2026 | 8:08 AM

Share

ಕೋಲ್ಕತ್ತಾ, ಸೆಪ್ಟೆಂಬರ್ 13: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯ ಸುತ್ತ ತೃಣಮೂಲ ಕಾಂಗ್ರೆಸ್‌ನ ಆಂತರಿಕ ರಾಜಕೀಯವು ಹೊಸ ತಿರುವು ಪಡೆದುಕೊಂಡಿದೆ. ಟಿಎಂಸಿ ಪಕ್ಷದ ಪ್ರಮುಖ ನಾಯಕಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ, ಅವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಟಿಎಂಸಿ ಬಂಡಾಯ ಬಣ ಘೋಷಿಸಿದೆ. ಪಕ್ಷದ ಅಧಿಕೃತ ಚಿಹ್ನೆಗಾಗಿ ಚುನಾವಣಾ ಆಯೋಗದ ಮಟ್ಟದಲ್ಲಿ ಜಟಾಪಟಿ ನಡೆಯುತ್ತಿರುವ ನಡುವೆಯೇ ಬಂಡುಕೋರರ ಈ ಆಫರ್ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮಮತಾ ಬ್ಯಾನರ್ಜಿ ಅವರು ವಿಧಾನಸಭೆಗೆ ಮರಳಿ ಬರಬೇಕೆಂಬುದು ನಮ್ಮ ಆಶಯ. ನಂದಿಗ್ರಾಮ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಾದರೆ ನಾವು ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ. ಅವರು ಗೆದ್ದು ಬರಲಿ, ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಬಂಡಾಯ ಬಣದ ನಾಯಕಿ ರಿತಬ್ರತಾ ಬ್ಯಾನರ್ಜಿ ಹಾಗೂ ಶಾಸಕ ಅಖ್ರುಝಮಾನ್ ದೆಹಲಿಯಲ್ಲಿ ಹೇಳಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಮಾತ್ರವೇ ಅಸಮಾಧಾನ?: ಪಕ್ಷದ ಸೋಲಿನ ನಂತರ ಬಹುಪಾಲು ಶಾಸಕರು ಹಾಗೂ ಸಂಸದರು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿಯನ್ನು ವಿರೋಧಿಸಿ ಬಂಡಾಯವೆದ್ದಿದ್ದರು. ಆದರೆ ನಮಗೆ ಮಮತಾ ಬ್ಯಾನರ್ಜಿ ಅವರ ವಿರುದ್ಧ ಯಾವುದೇ ವೈಯಕ್ತಿಕ ತಕರಾರಿಲ್ಲ ಎಂದು ಬಂಡಾಯ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಅಕ್ಟೋಬರ್ 6ಕ್ಕೆ ಚುನಾವಣೆ: ನಿಯಮಗಳ ಪ್ರಕಾರ ತೆರವಾದ ನಂದಿಗ್ರಾಮ ಹಾಗೂ ರೇಜಿನಗರ ಕ್ಷೇತ್ರಗಳಿಗೆ ಅಕ್ಟೋಬರ್6 ರಂದು ಉಪಚುನಾವಣೆ ನಡೆಯಲಿದೆ. ಟಿಎಂಸಿ ಮಾಜಿ ನಾಯಕ ಹುಮಾಯೂನ್ ಕಬೀರ್ ಅವರು ನವೋದಾ ಮತ್ತು ರೇಜಿನಗರ ಎರಡೂ ಕಡೆ ಗೆದ್ದು, ಬಳಿಕ ನವೋದಾ ಉಳಿಸಿಕೊಂಡು ರೇಜಿನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಅಲ್ಲಿಯೂ ಉಪಚುನಾವಣೆ ಅನಿವಾರ್ಯವಾಗಿದೆ.

ಮಮತಾ-ನಂದಿಗ್ರಾಮದ ಐತಿಹಾಸಿಕ ನಂಟು: 2011ರಲ್ಲಿ ಎಡರಂಗದ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಲು ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ನಡೆಸಿದ ಕೃಷಿ ಭೂಸ್ವಾಧೀನ ವಿರೋಧಿ ಬೃಹತ್ ಹೋರಾಟವೇ ಮುನ್ನುಡಿಯಾಗಿತ್ತು. 2021ರಲ್ಲಿ ಅವರು ಇದೇ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ ಹಿನ್ನಡೆ ಅನುಭವಿಸಿದ್ದರೂ, ನಂತರ ಭವಾನಿಪುರ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು.

ಬಿಜೆಪಿ ಲೇವಡಿ: ಟಿಎಂಸಿ ಒಳಜಗಳ ಹಾಗೂ ಬಂಡಾಯ ಬಣದ ಆಫರ್‌ ಅನ್ನು ಬಿಜೆಪಿ ತಳ್ಳಿಹಾಕಿದೆ. ನಂದಿಗ್ರಾಮ ಮತ್ತು ರೇಜಿನಗರ ಎರಡೂ ಕಡೆ ಟಿಎಂಸಿ ಚಿಹ್ನೆಯಡಿ ಯಾರು ಕಣಕ್ಕಿಳಿದರೂ ಜನ ಅವರನ್ನು ತಿರಸ್ಕರಿಸಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More