AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಜಾ​ ಸೇವಿಸಿ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ ಚಲಾಯಿಸಿದ್ದ ಪೈಲಟ್ ವಜಾ

ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ (ಮುಖ್ಯ ಪೈಲಟ್) ಡ್ರಗ್ಸ್ ತಪಾಸಣೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ಇಂದು ತಿಳಿಸಿದೆ. ಫುಕೆಟ್​​ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಆಕಾಶದಲ್ಲೇ ಪಲ್ಟಿಯಾಗಿತ್ತು. ಇದರಿಂದ ಹಲವರಿಗೆ ಗಾಯಗಳಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರಲಿಲ್ಲ.

ಗಾಂಜಾ​ ಸೇವಿಸಿ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ ಚಲಾಯಿಸಿದ್ದ ಪೈಲಟ್ ವಜಾ
Air India Pilot SuspendImage Credit source: TV9
ಸುಷ್ಮಾ ಚಕ್ರೆ
|

Updated on: Sep 04, 2026 | 9:51 PM

Share

ನವದೆಹಲಿ, ಸೆಪ್ಟೆಂಬರ್ 4: ಫುಕೆಟ್​​ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನ ಆಕಾಶದಲ್ಲೇ ಪಲ್ಟಿಯಾಗಿ 300 ಅಡಿ ಕೆಳಗೆ ಜಾರಿತ್ತು. ಇದರಿಂದ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆ ಸಮಯದಲ್ಲಿ ಏರ್ ಇಂಡಿಯಾ ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದರೂ, ನಾಗರಿಕ ವಿಮಾನಯಾನ ನಿಯಮಾವಳಿಗಳಿಗೆ ಅನುಗುಣವಾಗಿ ತಾನು ಸಿಬ್ಬಂದಿಯ ಮಾದಕದ್ರವ್ಯ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸುತ್ತಿರುವುದಾಗಿ ಮತ್ತು ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದಾಗಿ ಸ್ಪಷ್ಟಪಡಿಸಿತ್ತು. ಇದೀಗ ಆ ಪೈಲಟ್​​ನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

ಈ ಬಗ್ಗೆ ಏರ್ ಇಂಡಿಯಾ ವಕ್ತಾರ ಈ ಬಗ್ಗೆ ಮಾತನಾಡಿ, “ಸುರಕ್ಷತೆಗೆ ಏರ್ ಇಂಡಿಯಾ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತದೆ. ಫುಕೆಟ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಅವರ ಸೈಕೋಆಕ್ಟಿವ್ ವಸ್ತುವಿನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಸುರಕ್ಷತೆ, ದೈಹಿಕ ಸಾಮರ್ಥ್ಯ ಅಥವಾ ನಿಯಂತ್ರಕ ನಿಯಮಗಳ ಉಲ್ಲಂಘನೆಯ ವಿಷಯದಲ್ಲಿ ಏರ್ ಇಂಡಿಯಾ ‘ಝೀರೋ-ಟಾಲರೆನ್ಸ್’ (ಶೂನ್ಯ ಸಹಿಷ್ಣುತೆ) ನೀತಿಯನ್ನು ಅನುಸರಿಸುತ್ತಿದ್ದು, ಪೈಲಟ್ ಅವರನ್ನು ಉದ್ಯೋಗದಿಂದ ತಕ್ಷಣದಿಂದಲೇ ವಜಾಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ

ಏನಿದು ಘಟನೆ?:

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ‘ಏರ್‌ಬಸ್ ಎ320 ವಿಮಾನವು ಆಕಾಶದಲ್ಲಿದ್ದಾಗಲೇ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ನಡೆಸಿದ ಪ್ರಾಥಮಿಕ ತನಿಖಾ ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದ ವಿಮಾನವು ಹಾರಾಟ ನಡೆಸುತ್ತಿದ್ದಾಗ ಹಠಾತ್ತಾಗಿ ಸುಮಾರು 300 ಅಡಿ ಕೆಳಕ್ಕೆ ಜಾರಿತ್ತು. ನಂತರ ವಿಮಾನವನ್ನು ನಿಯಂತ್ರಣಕ್ಕೆ ತಂದು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತಾದರೂ, ವಿಮಾನದಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಸಿಬ್ಬಂದಿಯೊಬ್ಬರು ಬೆನ್ನುಮೂಳೆ ಮತ್ತು ಕುತ್ತಿಗೆಯ ಗಂಭೀರ ಗಾಯಕ್ಕೂ ಒಳಗಾಗಿದ್ದರು. ಈ ಘಟನೆಯ ನಂತರ ನಾಗರಿಕ ವಿಮಾನಯಾನ ಸಚಿವಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.

ಇದನ್ನೂ ಓದಿ: ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ; ಸಂಸ್ಥೆಯ ಸಿಇಒಗೆ ಸರ್ಕಾರದಿಂದ ಸಮನ್ಸ್

ವಿಮಾನದ ಮೂರೂ ಹೈಡ್ರಾಲಿಕ್ ಸಿಸ್ಟಮ್‌ಗಳಲ್ಲಿ ಒತ್ತಡ ಕಡಿಮೆಯಾಗಿದ್ದರಿಂದ ಆಟೋಪೈಲಟ್ ಸಂಪರ್ಕ ಕಡಿತಗೊಂಡು, ಕೆಲವು ಸೆಕೆಂಡುಗಳ ಕಾಲ ಫ್ಲೈಟ್ ಕಂಟ್ರೋಲ್ ಪ್ರತಿಕ್ರಿಯಿಸಲಿಲ್ಲ ಎಂದು AAIB ವರದಿ ತಿಳಿಸಿದೆ. ಈ ತಾಂತ್ರಿಕ ದೋಷದ ಕುರಿತು ತನಿಖೆ ಮುಂದುವರಿದಿದೆ.

ಪೈಲಟ್​ಗೆ ಡ್ರಗ್ಸ್ ಪರೀಕ್ಷೆ:

ಈ ಘಟನೆಯ ನಂತರ ತನಿಖೆಯ ಭಾಗವಾಗಿ ವಿಮಾನದಲ್ಲಿದ್ದ ಪೈಲಟ್‌ಗಳನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಲಾಯಿತು. ಸಹ-ಪೈಲಟ್ ಅವರ ವರದಿ ನೆಗೆಟಿವ್ ಬಂದಿದ್ದರೆ, ಮುಖ್ಯ ಪೈಲಟ್ ಅವರ ಆರಂಭಿಕ ಡ್ರಗ್ಸ್​ ಪರೀಕ್ಷೆಯ ನಂತರ ನಡೆಸಲಾದ ರಕ್ತ ಪರೀಕ್ಷೆಯಲ್ಲಿ ಸೈಕೋಆಕ್ಟಿವ್ ವಸ್ತು ಬಳಕೆ ದೃಢಪಟ್ಟಿತ್ತು. ಇದರಿಂದಾಗಿ ಏರ್ ಇಂಡಿಯಾ ಆ ಪೈಲಟ್‌ನನ್ನು ವಜಾಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ