ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ
ಪ್ರಧಾನಿ ಮೋದಿ ನೆದರ್‌ಲ್ಯಾಂಡ್ಸ್ ಭೇಟಿ ಭಾರತಕ್ಕೆ ದ್ವಿಪಕ್ಷೀಯ ಸಂಬಂಧಗಳನ್ನು ತಂತ್ರಾತ್ಮಕ ಸಹಭಾಗಿತ್ವಕ್ಕೆ ಏರಿಸಿದೆ. ಸೆಮಿಕಂಡಕ್ಟರ್, ಹಸಿರು ಇಂಧನ, ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಭಾರತಕ್ಕೆ ಗಣನೀಯ ಲಾಭ ತಂದಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ.

ಆಂಸ್ಟರ್‌ಡ್ಯಾಮ್, ಮೇ 17: ದ್ವಿಪಕ್ಷೀಯ ಸಂಬಂಧವನ್ನು ತಂತ್ರಾತ್ಮಕ ಸಹಭಾಗಿತ್ವ ಮಟ್ಟಕ್ಕೆ ಏರಿಸಲು ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಿರ್ಧರಿಸಿದ್ದು, ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ನೆದರ್‌ಲ್ಯಾಂಡ್ಸ್ ಪ್ರಧಾನಿ ರೊಬ್ ಜೆಟ್ಟನ್ ನಡುವೆ ನಡೆದ ವಿಸ್ತೃತ ಮಾತುಕತೆ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನೆದರ್‌ಲ್ಯಾಂಡ್ಸ್ ಯುರೋಪಿನಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, 2024-25ರಲ್ಲಿ ಉಭಯ ರಾಷ್ಟ್ರಗಳ ವ್ಯಾಪಾರ ಮೊತ್ತ 27.8 ಬಿಲಿಯನ್ ಡಾಲರ್ ತಲುಪಿದೆ. ಜೊತೆಗೆ, 55.6 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯಿಂದ ನೆದರ್‌ಲ್ಯಾಂಡ್ಸ್ ಭಾರತದಲ್ಲಿ ನಾಲ್ಕನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೆದರ್‌ಲ್ಯಾಂಡ್ಸ್ ಪ್ರವಾಸದಿಂದ ಭಾರತಕ್ಕೆ ಹಲವು ಲಾಭಗಳಾಗಿದ್ದು, ಚೋಳರ ಕಾಲದ ತಾಮ್ರ ಫಲಕಗಳ ಮರುಹಸ್ತಾಂತರ ಸೇರಿ ಹೂಡಿಕೆ ಮತ್ತು ತಂತ್ರಜ್ಞಾನ ಕ್ಷೇತ್ರ ಸಂಬಂಧ ಸಹಕಾರದಂತಹ ಮಾತುಕತೆಗಳು ನಡೆದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಭಾರತೀಯ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭಾರತಕ್ಕಾದ ಲಾಭಗಳೇನು?
List of outcomes (17 in total) : PM @narendramodi’s visit to the Netherlands ⬇️
🇮🇳 🇳🇱 pic.twitter.com/dcAiscX5vO
— Randhir Jaiswal (@MEAIndia) May 16, 2026
ಭಾರತ-ನೆದರ್‌ಲ್ಯಾಂಡ್ಸ್ ತಂತ್ರಾತ್ಮಕ ಸಹಭಾಗಿತ್ವ
- ಹೆಚ್ಚಿನ ಹೂಡಿಕೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ
- ಶುದ್ಧ ನೀರು, ಸುರಕ್ಷಿತ ಆಹಾರ, ಹಸಿರು ನಗರಗಳು ಮತ್ತು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ
- ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರಿಗೆ ಹೆಚ್ಚುವರಿ ಅವಕಾಶಗಳು
- ರಕ್ಷಣಾ, ಸಾಗರ, ಸೈಬರ್ ಮತ್ತು ಸರಕು ಸರಪಳಿ ಸಹಕಾರದಿಂದ ಭದ್ರತೆ ಹಾಗೂ ಆರ್ಥಿಕ ಸ್ಥಿರತೆ ಬಲಪಡಿಕೆ
ಚೋಳರ ಕಾಲದ ತಾಮ್ರ ಫಲಕಗಳ ಮರುಹಸ್ತಾಂತರ
- ಅಮೂಲ್ಯ ತಾಮ್ರ ಫಲಕಗಳು ಭಾರತಕ್ಕೆ ಮರಳಿ ಹಸ್ತಾಂತರದಿಂದ ಭಾರತೀಯ ಪಂಡಿತರು, ಸಂಗ್ರಹಾಲಯಗಳು ಮತ್ತು ಸಾರ್ವಜನಿಕರಿಗೆ ಪರಂಪರೆ ಅಧ್ಯಯನಕ್ಕೆ ಅವಕಾಶ
ಭಾರತ-ನೆದರ್‌ಲ್ಯಾಂಡ್ಸ್ ವಲಸೆ ಮತ್ತು ಸಂಚಾರ ಸಹಕಾರ
- ನೆದರ್‌ಲ್ಯಾಂಡ್ಸ್‌ಗೆ ವೇಗವಾದ ಮತ್ತು ಸುಲಭ ವೀಸಾ ವ್ಯವಸ್ಥೆ
- ಭಾರತೀಯರಿಗೆ ಅಧ್ಯಯನ ಮತ್ತು ಉದ್ಯೋಗಕ್ಕೆ ದೀರ್ಘಾವಧಿ ವೀಸಾ ಅವಕಾಶ
- ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳು
- ಭಾರತೀಯ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು
ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ASML ಸಹಕಾರ
- ಗುಜರಾತಿನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾಪನೆಗೆ ಮಹತ್ವದ ಹೆಜ್ಜೆ
- ಭಾರತದಲ್ಲಿ ಸಂಪೂರ್ಣ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ನಿರ್ಮಾಣಕ್ಕೆ ಉತ್ತೇಜನ
- ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ಗೆ ಬೆಂಬಲ
ಪ್ರಮುಖ ಖನಿಜಗಳ ಕ್ಷೇತ್ರದಲ್ಲಿ ಸಹಕಾರ
- ಪ್ರಮುಖ ಖನಿಜಗಳ ವಿಶ್ವಾಸಾರ್ಹ ಪೂರೈಕೆ
- ಸುಧಾರಿತ ತಂತ್ರಜ್ಞಾನ, ಹೂಡಿಕೆ ಮತ್ತು ಕೌಶಲ್ಯಯುತ ಉದ್ಯೋಗಗಳು
- ಭಾರತದ ಗಣಿಗಾರಿಕೆ ಸಾಮರ್ಥ್ಯ ವೃದ್ಧಿ
ಗುಜರಾತಿನ ಕಲ್ಪಸರ್ ಯೋಜನೆಗೆ ತಾಂತ್ರಿಕ ಸಹಕಾರ
- ಮಹತ್ತರ ಜಲ ಮತ್ತು ಕರಾವಳಿ ಇಂಜಿನಿಯರಿಂಗ್‌ನಲ್ಲಿ ಡಚ್ ಪರಿಣತಿ
- ಕುಡಿಯುವ ನೀರು, ನೀರಾವರಿ ಮತ್ತು ಕೈಗಾರಿಕೆಗಳಿಗೆ ತಾಜಾ ನೀರಿನ ಸಂಗ್ರಹಣಾ ಯೋಜನೆ, ಜನರ ಜೀವನಮಟ್ಟ ಸುಧಾರಣೆ
ಹಸಿರು ಹೈಡ್ರೋಜನ್ ರಫ್ತು ಮಾರುಕಟ್ಟೆ ವಿಸ್ತರಣೆ
- ಭಾರತದ ಹಸಿರು ಹೈಡ್ರೋಜನ್‌ಗೆ ಯುರೋಪಿನಲ್ಲಿ ರಫ್ತು ಮಾರುಕಟ್ಟೆ ವಿಸ್ತರಣೆ
- ಎಲೆಕ್ಟ್ರೋಲೈಸರ್, ಸಂಗ್ರಹಣೆ ಮತ್ತು ಬಂದರು ಮೂಲಸೌಕರ್ಯಗಳಿಗೆ ಹೂಡಿಕೆ
- ಉನ್ನತ ಕೌಶಲ್ಯದ ಉದ್ಯೋಗಗಳು ಮತ್ತು ಜಾಗತಿಕ ಹೈಡ್ರೋಜನ್ ಹಬ್ ಆಗಿ ಭಾರತದ ಸ್ಥಾನ ಬಲಪಡಿಕೆ
ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಉತ್ತೇಜನ
- ಶುದ್ಧ ಇಂಧನ ವಿಸ್ತರಣೆಗೆ ತಂತ್ರಜ್ಞಾನ ಮತ್ತು ಹಣಕಾಸು ಸಹಕಾರ
- ಹಸಿರು ಇಂಧನ ಕ್ಷೇತ್ರದಲ್ಲಿ ಉದ್ಯಮ, ಸಂಶೋಧಕರು ಮತ್ತು ಕಾರ್ಮಿಕರಿಗೆ ಹೊಸ ಅವಕಾಶಗಳು
NITI ಆಯೋಗ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಇಂಧನ ಸಹಕಾರ
- ಸಂಯುಕ್ತ ಯೋಜನೆಗಳು ಮತ್ತು ಕೈಗಾರಿಕಾ ಸಹಭಾಗಿತ್ವ
- ಶುದ್ಧ ಮತ್ತು ವಿಶ್ವಾಸಾರ್ಹ ಇಂಧನ ಮೂಲಗಳಿಂದ ಇಂಧನ ಭದ್ರತೆ
- ಹಸಿರು ಉದ್ಯೋಗಗಳು, ಆವಿಷ್ಕಾರ ಮತ್ತು ಹೂಡಿಕೆಗಳಿಂದ ಆರ್ಥಿಕ ಅವಕಾಶಗಳು
ಪಶ್ಚಿಮ ತ್ರಿಪುರಾದಲ್ಲಿ ಇಂಡೋ-ಡಚ್ ಹೂಗಾರಿಕೆ ಕೇಂದ್ರ
- ರೈತರಿಗೆ ಹೆಚ್ಚಿನ ಮೌಲ್ಯದ ಹೂಗಾರಿಕೆ ಚಟುವಟಿಕೆಗಳಲ್ಲಿ ಅವಕಾಶ
- ಗುಣಮಟ್ಟ, ಸಂಗ್ರಹಣೆ ಮತ್ತು ಮಾರುಕಟ್ಟೆ ಪ್ರವೇಶ ಸುಧಾರಣೆ
- ರೈತರ ಆದಾಯ ಹೆಚ್ಚಳ
ಬೆಂಗಳೂರಲ್ಲಿ ಡೈರಿ ತರಬೇತಿ ಕೇಂದ್ರ
- ಉತ್ತಮ ಡೈರಿ ತಂತ್ರಜ್ಞಾನದಿಂದ ರೈತರ ಉತ್ಪಾದಕತೆ ಮತ್ತು ಆದಾಯ ಹೆಚ್ಚಳ
- ಪಶುಸಂಗೋಪನಾ ಕ್ಷೇತ್ರಕ್ಕೆ ತಾಂತ್ರಿಕ ಕೌಶಲ್ಯ ಬಲಪಡಿಕೆ
ಪಶುಸಂಗೋಪನೆ ಮತ್ತು ಡೈರಿಂಗ್ ಸಹಕಾರ
- ಉತ್ತಮ ಡೈರಿ ಉತ್ಪಾದನೆ ಮತ್ತು ಗುಣಮಟ್ಟ
- ಭಾರತೀಯ ಪಶುವೈದ್ಯರು ಮತ್ತು ಡೈರಿ ತಜ್ಞರಿಗೆ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ
- ಪಶು ಆರೋಗ್ಯ ಮತ್ತು ರೋಗ ನಿಯಂತ್ರಣ ಬಲಪಡಿಸುವಿಕೆ
ಆರೋಗ್ಯ ಕ್ಷೇತ್ರದಲ್ಲಿ ಸಹಕಾರ
- ಸಾರ್ವಜನಿಕ ಆರೋಗ್ಯ ಸಂಶೋಧನೆ ಮತ್ತು ನವೀನತೆ ಬಲಪಡಿಸುವಿಕೆ
- ವೈಜ್ಞಾನಿಕ ಜ್ಞಾನ ಮತ್ತು ಉತ್ತಮ ಪದ್ಧತಿಗಳ ವಿನಿಮಯ
- ಭವಿಷ್ಯದ ಆರೋಗ್ಯ ಸವಾಲುಗಳಿಗೆ ಸಿದ್ಧತೆ
ಕಸ್ಟಮ್ಸ್ ಪರಸ್ಪರ ಆಡಳಿತ ಸಹಾಯ ಒಪ್ಪಂದ
- ದ್ವಿಪಕ್ಷೀಯ ವ್ಯಾಪಾರ ಸುಗಮ ಮತ್ತು ಸುರಕ್ಷಿತ ಸಾಗಣೆ
- ಆದಾಯ ರಕ್ಷಣೆ ಮತ್ತು ವ್ಯಾಪಾರಿಗಳಿಗೆ ನ್ಯಾಯ
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ
- ಭಾರತೀಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಡಚ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ/ಬೋಧನೆ ಅವಕಾಶ
- ಜಂಟಿ ಮತ್ತು ಡ್ಯುಯಲ್ ಪ್ರೋಗ್ರಾಂಗಳಿಂದ ಉತ್ತಮ ಪದವಿ ಮತ್ತು ಉದ್ಯೋಗ ಅವಕಾಶ
- ಸಂಯುಕ್ತ ಸಂಶೋಧನಾ ಯೋಜನೆಗಳಿಂದ ಉತ್ತಮ ಸಂಶೋಧನಾ ಫಲಿತಾಂಶಗಳು
- ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನ
ನಳಂದಾ ಮತ್ತು ಗ್ರೊನಿಂಗೆನ್ ವಿಶ್ವವಿದ್ಯಾಲಯಗಳ ನಡುವೆ ಸಹಕಾರ
- ಭಾರತೀಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಜಾಗತಿಕ ಅನುಭವ
- ಉತ್ತಮ ಗುಣಮಟ್ಟದ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಪ್ರಕಟಣೆಗಳು
- ಜಾಗತಿಕ ನೆಟ್‌ವರ್ಕ್ ಮತ್ತು ಸಹಭಾಗಿತ್ವ ವಿಸ್ತರಣೆ
ಲೈಡನ್ ಯೂನಿವರ್ಸಿಟಿ ಲೈಬ್ರರಿಸ್ ಮತ್ತು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡುವೆ ಸಹಕಾರ
- ಚೋಳರ ಇತಿಹಾಸದ ಸಂಶೋಧನೆಗೆ ಉತ್ತೇಜನ
- ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಬಲಪಡಿಕೆ
- ಭಾರತೀಯ ಪರಂಪರೆಯ ಬಗ್ಗೆ ಸಾರ್ವಜನಿಕ ಜಾಗೃತಿ ಹೆಚ್ಚಳ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





