‘ಈ ವರ್ಷವೂ ಸೈನಿಕರೊಂದಿಗೆ ಹಬ್ಬ ಆಚರಣೆ’; ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಮಸ್ತ ಭಾರತೀಯರಿಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದು, ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲೆಂದು ಹಾರೈಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ 50 ಸೆಕೆಂಡುಗಳ ವಿಶೇಷ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಾದ ಜುಬ್ಬ-ಪೈಜಾಮಾ ಧರಿಸಿ, ಹಣೆಗೆ ಕುಂಕುಮವಿಟ್ಟುಕೊಂಡು ವಿಡಿಯೋ ಮಾಡಿರುವ ಪ್ರಧಾನಿ ಮೋದಿ ಈ ಬಾರಿಯೂ ತಾವು ಸೈನಿಕರ ಜೊತೆ ದೀಪಾವಳಿ ಆಚರಿಸುವುದಾಗಿ ಘೋಷಿಸಿದ್ದಾರೆ.

ಈ ವರ್ಷವೂ ಸೈನಿಕರೊಂದಿಗೆ ಹಬ್ಬ ಆಚರಣೆ; ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ
ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ
Image Credit source: PTI

Updated on: Nov 07, 2026 | 6:30 PM

ಮುಖ್ಯಾಂಶಗಳು

  • ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ
  • ಸಾಂಪ್ರದಾಯಿಕ ಉಡುಗೆಯಲ್ಲಿ ಮೋದಿ ವಿಡಿಯೋ
  • ಸೈನಿಕರ ಜೊತೆ ದೀಪಾವಳಿ ಆಚರಿಸಲಿದ್ದಾರೆ ಮೋದಿ

ನವದೆಹಲಿ, ನವೆಂಬರ್ 7: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಸ್ತ ದೇಶವಾಸಿಗಳಿಗೆ ಬೆಳಕಿನ ಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಇದೇ ವೇಳೆ ತಮ್ಮ ಸಾಂಪ್ರದಾಯಿಕ ಶೈಲಿಯನ್ನು ಮುಂದುವರಿಸಿರುವ ಅವರು, ಈ ಬಾರಿಯೂ ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೇನೆಯ ವೀರ ಯೋಧರೊಂದಿಗೆ ದೀಪಾವಳಿ ಆಚರಿಸುವುದಾಗಿ ಘೋಷಿಸಿದ್ದಾರೆ.

ಸಮಸ್ತ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, “ನಿಮ್ಮಂತೆಯೇ ನಾನು ಕೂಡ ದೀಪಾವಳಿಯನ್ನು ಅತ್ಯಂತ ಉತ್ಸಾಹ ಮತ್ತು ಶ್ರದ್ಧೆಯಿಂದ ಆಚರಿಸುತ್ತೇನೆ. ನಿಮಗೆ ತಿಳಿದಿರುವಂತೆ, ಪ್ರತಿಯೊಂದು ದೀಪಾವಳಿಯ ಸಂದರ್ಭದಲ್ಲೂ ನಮ್ಮ ದೇಶದ ಗಡಿಕಾಯುವ ವೀರ ಸೈನಿಕರ ಮಧ್ಯೆ ಸಮಯ ಕಳೆಯುವುದು ನನಗೆ ನಿಯಮಿತ ಅಭ್ಯಾಸ ಮತ್ತು ಪರಂಪರೆಯಾಗಿ ಬೆಳೆದುಬಂದಿದೆ. ಈ ವರ್ಷವೂ ಸಹ ನಾನು ಅದೇ ಸಂಪ್ರದಾಯವನ್ನು ಮುಂದುವರಿಸಲಿದ್ದೇನೆ” ಎಂದು ಹೇಳಿದ್ದಾರೆ.

Loading...

ಇದನ್ನೂ ಓದಿ: ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ

ಯೋಧರ ತ್ಯಾಗ ಮತ್ತು ಸಮರ್ಪಣಾ ಮನೋಭಾವವನ್ನು ಗೌರವಿಸುವ ಉದ್ದೇಶದಿಂದ ಮೋದಿ ಕೈಗೊಳ್ಳುವ ಈ ಕಾರ್ಯಕ್ರಮವು ದೇಶದ ಸೈನಿಕರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಿದೆ.


ಕತ್ತಲೆಯ ವಿರುದ್ಧದ ಸಂಕಲ್ಪ:

ಸಾಂಪ್ರದಾಯಿಕ ಉಡುಪಿನಲ್ಲಿ ಹಣೆಯ ಮೇಲೆ ಕುಂಕುಮ ಇಟ್ಟುಕೊಂಡು ದೀಪಾವಳಿಯ ಸಂದೇಶ ನೀಡಿದ ಪ್ರಧಾನಿ ಮೋದಿ, “ಈ ದೀಪಾವಳಿಯ ಸಂದರ್ಭದಲ್ಲಿ ಇಡೀ ದೇಶವೇ ಬೆಳಕಿನಿಂದ ಕಂಗೊಳಿಸುತ್ತಿದೆ. ಈ ಬೆಳಕಿನ ಹಬ್ಬವು ಕತ್ತಲೆಯ ವಿರುದ್ಧದ ನಮ್ಮ ದೃಢ ಸಂಕಲ್ಪದ ಪ್ರತಿಬಿಂಬವಾಗಿದೆ. ಈ ಹಬ್ಬ ಮತ್ತು ಮುಂಬರುವ ದಿನಗಳು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ” ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ನ.13ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಯೋಧರೊಂದಿಗೆ ದೀಪಾವಳಿ ಆಚರಣೆ:

“ಪ್ರತಿವರ್ಷ ದೇಶದ ವೀರ ಯೋಧರ ಮಧ್ಯೆ ದೀಪಾವಳಿ ಆಚರಿಸುವುದು ನನ್ನ ಅಭ್ಯಾಸವಾಗಿದೆ. ಈ ವರ್ಷವೂ ಸಹ ನಾನು ಅದೇ ಪರಂಪರೆಯನ್ನು ಮುಂದುವರಿಸಲಿದ್ದೇನೆ. ಈ ಬಾರಿ ಕೂಡ ಭಾರತದ ಸೈನಿಕರ ಜೊತೆ ದೀಪಾವಳಿ ಆಚರಿಸಲಿದ್ದೇನೆ” ಎಂದು ತಿಳಿಸಿದ್ದಾರೆ. ಆದರೆ ಈ ಬಾರಿಯ ಆಚರಣೆ ಯಾವ ಗಡಿ ಪ್ರದೇಶದಲ್ಲಿ ನಡೆಯಲಿದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

2014ರಿಂದ ಗಡಿಭಾಗಗಳಲ್ಲಿ ಯೋಧರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ:

ಪ್ರಧಾನಿ ಮೋದಿ ಅವರು ಸಿಯಾಚಿನ್‌ನಿಂದ ಹಿಡಿದು ನೌಕಾಪಡೆಯ ಯುದ್ಧನೌಕೆಯವರೆಗೆ ಭಾರತದ ವಿವಿಧ ಸವಾಲಿನ ಗಡಿಭಾಗಗಳಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಾ ಬಂದಿದ್ದಾರೆ. ಪ್ರಧಾನಿಯಾದಾಗಿನಿಂದ ನರೇಂದ್ರ ಮೋದಿ 11 ವರ್ಷಗಳಿಂದ ಯಾವ ವರ್ಷ ಎಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

2014: ಸಿಯಾಚಿನ್ ಬೇಸ್ ಕ್ಯಾಂಪ್ (ವಿಶ್ವದ ಅತಿ ಎತ್ತರದ ಯುದ್ಧಭೂಮಿ)

 

2015: ಅಮೃತಸರ ಬಳಿಯ ಪಂಜಾಬ್ ಗಡಿ ವಲಯ

 

2016: ಹಿಮಾಚಲ ಪ್ರದೇಶದ ಚೀನಾ ಗಡಿ ಬಳಿಯ ಸುಮ್ಡೋ

 

2017: ಜಮ್ಮು-ಕಾಶ್ಮೀರದ ಗುರೇಜ್ ವಲಯ

 

2018: ಉತ್ತರಾಖಂಡದ ಹರ್ಸಿಲ್

 

2019: ಜಮ್ಮು-ಕಾಶ್ಮೀರದ ರಾಜೌರಿ (ಎಲ್‌ಒಸಿ)

 

2020: ರಾಜಸ್ಥಾನದ ಜೈಸಲ್ಮೇರ್‌ನ ಲೋಂಗೆವಾಲಾ

 

2021: ಜಮ್ಮು-ಕಾಶ್ಮೀರದ ನೌಶೇರಾ

 

2022: ಕಾರ್ಗಿಲ್

 

2023: ಹಿಮಾಚಲ ಪ್ರದೇಶದ ಲೆಪ್ಚಾ

 

2024: ಗುಜರಾತ್‌ನ ಕಚ್ ಪ್ರದೇಶದ ಸಿರ್ ಕ್ರೀಕ್

 

2025: ಗೋವಾ-ಕಾರವಾರ ಕರಾವಳಿಯ ಸ್ವದೇಶಿ ವಿಮಾನವಾಹಕ ನೌಕೆ ‘ಐಎನ್‌ಎಸ್ ವಿಕ್ರಾಂತ್’

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sat, 7 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us