ಈ ರಾಜ್ಯದಲ್ಲಿನ್ನು ‘ಬೀದಿ ಹಸು’ ಪದ ಬಳಸುವಂತಿಲ್ಲ; ಕಾರಣ ಇಲ್ಲಿದೆ

ರಾಜಸ್ಥಾನ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಗೋವುಗಳನ್ನು ಅವಮಾನಿಸುವ ರೀತಿಯಲ್ಲಿ 'ಬೀದಿ ಹಸು' ಎಂಬ ಪದವನ್ನು ಬಳಸುವಂತಿಲ್ಲ ಎಂದು ತಿಳಿಸಿದೆ. ಹಾಗೇ, ಅವುಗಳನ್ನು 'ನಿರ್ಗತಿಕ ಹಸುಗಳು' ಎಂದು ಕರೆಯಬೇಕೆಂದು ಹೇಳಿದೆ. ಅದಕ್ಕೆ ಕಾರಣವೇನೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಈ ರಾಜ್ಯದಲ್ಲಿನ್ನು 'ಬೀದಿ ಹಸು' ಪದ ಬಳಸುವಂತಿಲ್ಲ; ಕಾರಣ ಇಲ್ಲಿದೆ
ಹಸು
Follow us
|

Updated on: Oct 28, 2024 | 9:21 PM

ಜೈಪುರ: ರಾಜಸ್ಥಾನದ ಬಿಜೆಪಿ ಸರ್ಕಾರವು ಗೋವುಗಳಿಗೆ ಬಳಸುವ ಭಾಷೆಯ ಬಗ್ಗೆ ಹೊಸ ಆದೇಶವನ್ನು ಹೊರಡಿಸಿದೆ. ಹೊರಗೆ ರಸ್ತೆಗಳಲ್ಲಿ ತಿರುಗಾಡುವ ಹಸುಗಳಿಗೆ ಬೀದಿ ಹಸುಗಳು ಎಂಬ ಪದವನ್ನು ಬಳಸುವುದನ್ನು ಸರ್ಕಾರವು ನಿಷೇಧಿಸಿದೆ. ಅದು ಅವಹೇಳನಕಾರಿಯೆಂದು ಹೇಳಿರುವ ಸರ್ಕಾರ ಅದರ ಬದಲಿಗೆ ಹೆಚ್ಚು ಗೌರವಾನ್ವಿತವಾಗಿ ನಿರ್ಗತಿಕ ಹಸುಗಳು ಎಂಬ ಪದವನ್ನು ಬಳಸಲು ಅಧಿಸೂಚನೆಯನ್ನು ಹೊರಡಿಸಿದೆ.

ಈ ಸಂಬಂಧ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಗೋಪಾಲನಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಗೋವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಇಂದಿನ ಕಾಲದಲ್ಲಿ ನಾನಾ ಕಾರಣಗಳಿಂದ ಕೆಲವು ಹಸುಗಳು ನಿರ್ಗತಿಕರಾಗುತ್ತಿವೆ. ಅವು ಬೀದಿಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಈ ಹಸುಗಳಿಗೆ ಬೀದಿ ಹಸು ಎಂಬ ಪದವನ್ನು ಬಳಸುವುದು ಅನುಚಿತ ಮತ್ತು ಅವಹೇಳನಕಾರಿಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಮುಕ್ತವಾಗಿ ತಿರುಗಾಡುವ ಗೋವುಗಳಿಗೆ ‘ನಿರ್ಗತಿಕ’ ಎಂಬುದು ಸರಿಯಾದ ಪದವಾಗಿದೆ. ಈ ಪರಿಭಾಷೆಯು ಈ ಹಸುಗಳ ಬಗ್ಗೆ ಸಂವೇದನಾಶೀಲತೆ, ಗೌರವ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಒಂದೇ ಒಂದು ಕರುವನ್ನೂ ಹಾಕದೆ ದಿನಕ್ಕೆ 4 ಲೀಟರ್ ಹಾಲು ಕೊಡುತ್ತಿದೆ ಈ ಪವಾಡದ ಹಸು

ಎಲ್ಲಾ ಸರ್ಕಾರಿ ಆದೇಶಗಳು, ಮಾರ್ಗಸೂಚಿಗಳು, ಮಾಹಿತಿ ಪತ್ರಗಳು ಮತ್ತು ವರದಿಗಳಲ್ಲಿ ಡೆಸ್ಟಿಟ್ಯೂಟ್ ಪದವನ್ನು ಬಳಸಲು ಸರ್ಕಾರಿ ಇಲಾಖೆಗಳು, ಗೋಶಾಲಾ ಮತ್ತು ಇತರ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.

ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಗೋವಿಗೆ ರಾಜ್ಯ ಮಾತೆಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿರುವುದು ಇಲ್ಲಿ ಉಲ್ಲೇಖಾರ್ಹ. ಸಿಕರ್‌ನ ಬಿಜೆಪಿ ಶಾಸಕ ಗೋರ್ಧನ್ ವರ್ಮಾ ಅವರು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಪತ್ರ ಬರೆದು ಗೋವಿಗೆ ‘ರಾಜ್ಯ ಮಾತೆ’ ಸ್ಥಾನಮಾನ ಮತ್ತು ಗೋಹತ್ಯೆ ಮಾಡುವವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ