AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಆಟವಾಡುತ್ತಿದ್ದ 2 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ, ಕಚ್ಚಿ ಕೊಂದ ಬೀದಿ ನಾಯಿಗಳು!

ಗುರುವಾರ ಸಂಜೆ ಆ ಹುಡುಗಿ ಗುಡಿಸಲಿನ ಹಿಂದೆ ಆಟವಾಡುತ್ತಿದ್ದಳು. ಅಷ್ಟರಲ್ಲಿ ನಾಯಿಗಳ ಹಿಂಡು ಬಂದು ಆ ಹುಡುಗಿಯನ್ನು ಪೊದೆಯ ಕಡೆಗೆ ಎಳೆದುಕೊಂಡು ಹೋಗಿ, ಕಚ್ಚಿ ಹಾಕಿವೆ.

Shocking News: ಆಟವಾಡುತ್ತಿದ್ದ 2 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ, ಕಚ್ಚಿ ಕೊಂದ ಬೀದಿ ನಾಯಿಗಳು!
ಬೀದಿ ನಾಯಿಗಳು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 26, 2022 | 4:00 PM

ನವದೆಹಲಿ: ಹಿಮಾಚಲ ಪ್ರದೇಶದ (Himachal Pradesh) ಹಮೀರ್‌ಪುರದಲ್ಲಿ ಬೀದಿ ನಾಯಿಗಳ (Stray Dogs) ದಾಳಿಗೆ ತುತ್ತಾಗಿ 2 ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಡಿಸಲಿನ ಬಳಿ ಆಟವಾಡುತ್ತಿದ್ದ 2 ವರ್ಷದ ಮಗುವಿನ ಮೇಲೆ ಹಲವಾರು ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿವೆ. ಗುರುವಾರ ಸಂಜೆಯಿಂದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಆ ಬಾಲಕಿಯ ಮೃತದೇಹವು ಗುಡಿಸಲಿನ ಸಮೀಪವಿರುವ ಪೊದೆಯ ಹತ್ತಿರ ಪತ್ತೆಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಮೃತ ಬಾಲಕಿಯ ಪೋಷಕರು ಪಂಜಾಬ್‌ನ ಹೋಶಿಯಾರ್‌ಪುರದ ಭಗತ್ ನಗರದವರಾಗಿದ್ದು, ಗುರುವಾರ ಸಂಜೆಯಿಂದ ಕಾಣೆಯಾಗಿದ್ದ ಮಗುವಿನ ಶವವು ಹುಲ್ಲಿನ ಗುಡಿಸಲಿನ ಸಮೀಪ ಪತ್ತೆಯಾಗಿದೆ. ಆ ಬಾಲಕಿಯ ಪೋಷಕರು ಮುನ್ಸಿಪಲ್ ಕೌನ್ಸಿಲ್ ಹಮೀರ್‌ಪುರದ ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Shocking News: ನಾಯಿಗೆ ನೇಣು ಹಾಕಿ ಸಾಯಿಸಿದ ದುಷ್ಟರ ವಿಡಿಯೋ ವೈರಲ್

ಗುರುವಾರ ಸಂಜೆ ಆ ಹುಡುಗಿ ಗುಡಿಸಲಿನ ಹಿಂದೆ ಆಟವಾಡುತ್ತಿದ್ದಳು. ಅಷ್ಟರಲ್ಲಿ ನಾಯಿಗಳ ಹಿಂಡು ಬಂದು ಆ ಹುಡುಗಿಯನ್ನು ಪೊದೆಯ ಕಡೆಗೆ ಎಳೆದುಕೊಂಡು ಹೋಗಿ, ಕಚ್ಚಿ ಹಾಕಿವೆ. ಆಗ ಆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಆದರೆ, ನಾಯಿಗಳ ಹಿಂಡು ಜೋರಾಗಿ ಬೊಗಳುತ್ತಿದ್ದುದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಲ್ಲ. ನಾಯಿಗಳು ಏಕಾಏಕಿ ದಾಳಿ ಮಾಡಿದ್ದರಿಂದ ದಿಕ್ಕು ತೋಚದಂತಾದ ಆ ಬಾಲಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆಕೆಯ ಮೈತುಂಬ ಕಚ್ಚಿ ಗಾಯಗೊಳಿಸಿದ ನಾಯಿಗಳು ಆಕೆಯನ್ನು ಸಾಯಿಸಿವೆ.

ರಾತ್ರಿಯಾದರೂ ಆಟವಾಡಲು ಹೊರಗೆ ಹೋಗಿದ್ದ ಮಗಳು ಬಾರದಿದ್ದಾಗ ಆಕೆಯ ಮನೆಯವರು ಎಲ್ಲ ಕಡೆ ಹುಡುಕಿದ್ದಾರೆ. ಅಷ್ಟರಲ್ಲಾಗಲೇ ಕತ್ತಲಾಗಿದ್ದರಿಂದ ಮಗಳು ಎಲ್ಲೂ ಕಂಡಿಲ್ಲ. ಮರುದಿನ ಬೆಳಗ್ಗೆ ಗುಡಿಸಲಿನ ಹಿಂದಿನ ಪೊದೆಯ ಬಳಿ ಹುಡುಕುವಾಗ ಅಲ್ಲಿ ಆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆ ಬಾಲಕಿಯ ಶವದ ಬಳಿ ನಾಯಿಗಳು ಇದ್ದುದನ್ನು ನೋಡಿದ ಮನೆಯವರಿಗೆ ತಮ್ಮ ಮಗಳನ್ನು ನಾಯಿಯೇ ಕೊಂದು ಹಾಕಿರುವುದು ಗೊತ್ತಾಯಿತು.

ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ!

ನಾಯಿಗಳನ್ನು ಓಡಿಸಿದ ಆಕೆಯ ಪೋಷಕರು ಆ ಸ್ಥಳದ ಹತ್ತಿರ ಹೋಗುವಷ್ಟರಲ್ಲಿ ಆ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಳು. ನಂತರ ಹಮೀರ್‌ಪುರ ಪೊಲೀಸರಿಗೆ ಈ ಬಗ್ಗೆ ತಿಳಿಸಲಾಯಿತು. ಪೊಲೀಸರು ವಿಚಾರಣೆ ಆರಂಭಿಸಿದರು. ಪೊಲೀಸರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಭೀಕರ ಘಟನೆ ಆ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ