AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಕೇಂದ್ರ ಸರ್ಕಾರ ಒತ್ತಡ ಹಾಕಿದೆ; ಕಾಂಗ್ರೆಸ್ ಆರೋಪ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ನವೆಂಬರ್​ನಲ್ಲಿ ಸೋನಿಯಾ ಗಾಂಧಿಯವರ ಆತ್ಮಕತೆ ಬಿಲಾಂಗಿಂಗ್: ಎ ಜರ್ನಿ ಇನ್ ಲವ್ ಪುಸ್ತಕ ಬಿಡುಗಡೆಯಾಗಬೇಕಿತ್ತು. ಆದರೆ, ಈ ಪುಸ್ತಕವನ್ನು ಪ್ರಕಟಿಸುವುದಿಲ್ಲ ಎಂದು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ನಿನ್ನೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕದ ಪ್ರಕಟಣೆಗೆ ತಡೆ ಒಡ್ಡಲು ಅಥವಾ ಅದರ ವಿಷಯಗಳನ್ನು ಸೆನ್ಸಾರ್ ಮಾಡಲು ಕೇಂದ್ರ ಸರ್ಕಾರವು ಪ್ರಕಾಶಕರ ಮೇಲೆ ನಿರಂತರ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.

ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಕೇಂದ್ರ ಸರ್ಕಾರ ಒತ್ತಡ ಹಾಕಿದೆ; ಕಾಂಗ್ರೆಸ್ ಆರೋಪ
Sonia Gandhi Image Credit source: PTI
ಸುಷ್ಮಾ ಚಕ್ರೆ
|

Updated on: Aug 29, 2026 | 3:27 PM

Share

ನವದೆಹಲಿ, ಆಗಸ್ಟ್ 29: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi Memoir) ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಇನ್ ಲವ್’ (Belonging: A Journey in Love) ಪ್ರಕಟಣೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ತೀವ್ರಗೊಂಡಿದೆ. ಸಂಪಾದಕೀಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (PRHI) ಈ ಪುಸ್ತಕದ ಪ್ರಕಟಣೆಯಿಂದ ಹಿಂದೆ ಸರಿದಿದೆ. ಇದು ಭಾರತದ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಪೆಂಗ್ವಿನ್ ಈ ಪುಸ್ತಕವನ್ನು ಪ್ರಕಟಿಸಲು ಹಿಂದೇಟು ಹಾಕಿರುವುದಕ್ಕೆ ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರವು ಸಂಸ್ಥೆಗಳು ಮತ್ತು ಪ್ರಕಾಶಕರ ಮೇಲೆ ಒತ್ತಡ ತರುವ ಮೂಲಕ ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿರುವ ಪ್ರಮುಖ ಸತ್ಯಗಳು ಹೊರಬರದಂತೆ ತಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕಾಂಗ್ರೆಸ್ ಟೀಕಿಸಿದೆ.

ಅಶೋಕ್ ಗೆಹ್ಲೋಟ್ ಆಕ್ರೋಶ:

ಇದು “ಪ್ರಜಾಪ್ರಭುತ್ವದ ಕೊಲೆ” ಎಂದು ಕರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, “ನರೇಂದ್ರ ಮೋದಿ, ಆರ್‌ಎಸ್‌ಎಸ್ ಹಾಗೂ ಮೋದಿ ಆಡಳಿತಾವಧಿಯಲ್ಲಿ ಭಾರತದ ಗಡಿ ಭಾಗವನ್ನು ಚೀನಾ ವಶಪಡಿಸಿಕೊಂಡ ವಿಷಯಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರವು ಭಾರಿ ಒತ್ತಡ ಹೇರಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

“ಪ್ರಪಂಚದಾದ್ಯಂತ ಪ್ರಕಟವಾಗುತ್ತಿರುವ ಸತ್ಯವನ್ನು ಭಾರತದಲ್ಲಿ ಪ್ರಕಟಿಸಲು ಬಿಡದಿರಲು ಪ್ರಕಾಶಕರ ಮೇಲೆ ಇರುವ ಒತ್ತಡವೇನು? ಭಾರತದ ಜನರಿಂದ ಸತ್ಯವನ್ನು ಮುಚ್ಚಿಡಲು ಮೋದಿ ಸರ್ಕಾರ ಯತ್ನಿಸುತ್ತಿದೆಯೇ? ದೇಶದ ಹಿರಿಯ ನಾಯಕಿ ಹಾಗೂ ಮಾಜಿ ವಿಪಕ್ಷ ನಾಯಕಿಯ ಪುಸ್ತಕವನ್ನು ಹಸಿಹಸಿಯಾಗಿ ಹತೋಟಿಗೆ ತೆಗೆದುಕೊಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯಾಗಿದೆ” ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಆಕ್ರೋಶ ವ್ಯಕ್ತಪಡಿಸಿದರು.

ಕಮಲನಾಥ್ ಹೇಳಿದ್ದೇನು?:

ಕಾಂಗ್ರೆಸ್ ನಾಯಕ ಕಮಲನಾಥ್, “ಸೋನಿಯಾ ಗಾಂಧಿ ಅವರಂತಹ ಹಿರಿಯ ನಾಯಕರು ಏನನ್ನು ಬರೆಯಬೇಕು, ಏನನ್ನು ಬರೆಯಬಾರದು ಎಂಬುದನ್ನು ಪ್ರಕಾಶಕರು ನಿರ್ಧರಿಸುತ್ತಾರೆಯೇ? ಈ ಪ್ರಕಾಶನ ಸಂಸ್ಥೆಯು ಸ್ವತಃ ಈ ನಿರ್ಧಾರ ತಾಗೊಂಡಿದೆಯೋ ಅಥವಾ ಯಾರದ್ದಾದರೂ ಒತ್ತಡವಿದೆಯೋ ಎಂಬ ಸಂಶಯ ಮೂಡುತ್ತದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಗಂಭೀರ ಬೆದರಿಕೆ” ಎಂದಿದ್ದಾರೆ.

ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸಲು ಪೆಂಗ್ವಿನ್ ಇಂಡಿಯಾ ನಿರಾಕರಿಸಿದ್ದೇಕೆ? ಅಸಲಿ ಕಾರಣ ಆರ್‌ಎಸ್‌ಎಸ್, ಚೀನಾ, ಮೋದಿ ಕುರಿತ ವಿಷಯ

ಸೋನಿಯಾ ಗಾಂಧಿ ಅವರ ಸುದೀರ್ಘ ರಾಜಕೀಯ ಜೀವನ, ಯುಪಿಎ ಸರ್ಕಾರದ ಅವಧಿಯ ಪ್ರಮುಖ ನಿರ್ಧಾರಗಳು ಮತ್ತು ಭಾರತೀಯ ರಾಜಕೀಯದ ಕುರಿತಾದ ಅವರ ಅನುಭವಗಳನ್ನು ಒಳಗೊಂಡಿರುವ ಈ ಪುಸ್ತಕವು ಪ್ರಕಟಣೆಗೆ ಮುನ್ನವೇ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷವು ಪುಸ್ತಕದ ಪ್ರಕಟಣೆಗೆ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ಅದನ್ನು ಸಾರ್ವಜನಿಕರ ಮುಂದೆ ತರುವುದಾಗಿ ಸ್ಪಷ್ಟಪಡಿಸಿದೆ.

ಪೆಂಗ್ವಿನ್ ಸಂಸ್ಥೆಯನ್ನು “ಪೆಂಗ್ವಿನ್ ಜನತಾ ಪಾರ್ಟಿ” ಎಂದು ಲೇವಡಿ ಮಾಡಿರುವ ಯುವ ಕಾಂಗ್ರೆಸ್, ನೀವು ಪ್ರಕಟಿಸಲು ಉತ್ಸುಕರಾಗಿದ್ದೀರೋ ಇಲ್ಲವೋ ಎಂಬುದಲ್ಲ, ಯಾವ ಬದಲಾವಣೆಗಳನ್ನು ಮಾಡಲು ಕೋರಿದ್ದಿರಿ ಮತ್ತು ಏಕೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದೆ. ಈ ನಡುವೆ ಕೇರಳ ಕಾಂಗ್ರೆಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, “ಯಾವುದೇ ಶಕ್ತಿಯೂ ‘ಬಿಲಾಂಗಿಂಗ್’ ಪುಸ್ತಕವು ಓದುಗರನ್ನು ತಲುಪುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದೆ.

ಪೆಂಗ್ವಿನ್ ಇಂಡಿಯಾ ಸಂಸ್ಥೆಯ ಸ್ಪಷ್ಟನೆ:

ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI), “ನಾವು ಭಾರತದಲ್ಲಿ ‘ಬಿಲಾಂಗಿಂಗ್’ ಪುಸ್ತಕದ ಪ್ರಕಾಶಕರಲ್ಲ. ಪುಸ್ತಕದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿಯಾಗಿದೆ” ಎಂದು ಹೇಳಿದೆ. ಹೀಗಾಗಿ, ಈ ಪುಸ್ತಕದ ಭಾರತೀಯ ಪ್ರಕಾಶನದ ಹಕ್ಕುಗಳು ಈಗ ಪ್ರಸಿದ್ಧ ಹಾರ್ಪರ್ ಕಾಲಿಯನ್ಸ್ (HarperCollins) ಸಂಸ್ಥೆಯ ಪಾಲಾಗುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಆರಂಭವಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್