AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರ್ಮುಜ್‌ ಜಲಸಂಧಿಯಲ್ಲಿ 27 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ‘ಮ್ಯಾಗ್ನೆಟಿಕ್ ಬಾಂಬ್’ ದಾಳಿ!

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ನಾವಿಕರಿದ್ದ ತೈಲ ಟ್ಯಾಂಕರ್ ಮೇಲೆ ಲಿಂಪೆಟ್ ಮೈನ್ ಮೂಲಕ ದಾಳಿ ನಡೆಸಲಾಗಿದೆ. ಹಡಗಿನಲ್ಲಿದ್ದ ಎಲ್ಲಾ 27 ಭಾರತೀಯ ಸಿಬ್ಬಂದಿಗಳು ಸಂಪೂರ್ಣ ಸುರಕ್ಷಿತರಾಗಿದ್ದು, ದೊಡ್ಡ ಅನಾಹುತ ತಪ್ಪಿದೆ. ಜಾಗತಿಕ ತೈಲ ಮಾರ್ಗದ ಭದ್ರತೆ ಹಾಗೂ ಪ್ರಸ್ತುತ ಪರಿಸ್ಥಿತಿಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊರ್ಮುಜ್‌ ಜಲಸಂಧಿಯಲ್ಲಿ 27 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ 'ಮ್ಯಾಗ್ನೆಟಿಕ್ ಬಾಂಬ್' ದಾಳಿ!
ಹೊರ್ಮುಜ್‌ನಲ್ಲಿ 27 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ 'ಮ್ಯಾಗ್ನೆಟಿಕ್ ಬಾಂಬ್' ದಾಳಿ!
ಭಾವನಾ ಹೆಗಡೆ
|

Updated on: Oct 31, 2026 | 7:43 AM

Share

ಮುಖ್ಯಾಂಶಗಳು

  • ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯರ ತೈಲ ಟ್ಯಾಂಕರ್ ಮೇಲೆ ಲಿಂಪೆಟ್ ಮೈನ್ ದಾಳಿ ನಡೆದಿದೆ.
  • ಹಡಗಿನಲ್ಲಿದ್ದ ಎಲ್ಲಾ 27 ಭಾರತೀಯ ಸಿಬ್ಬಂದಿಗಳು ಸಂಪೂರ್ಣ ಸುರಕ್ಷಿತರಾಗಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
  • ಜಾಗತಿಕ ಇಂಧನ ಮಾರ್ಗಗಳಲ್ಲಿ ಉಂಟಾದ ಭದ್ರತಾ ಬಿಕ್ಕಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಇರಾನ್, ಅಕ್ಟೋಬರ್ 31: ಹೊರ್ಮುಜ್ ಜಲಸಂಧಿಯಲ್ಲಿ 27 ಭಾರತೀಯ ಸಿಬ್ಬಂದಿಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ಪನಾಮ ಧ್ವಜಯುಕ್ತ ‘ಎಂಟಿ ಲೂಯಿಸ್ 1’ ಎಣ್ಣೆ ಟ್ಯಾಂಕರ್ ಮೇಲೆ ‘ಲಿಂಪೆಟ್ ಮೈನ್’ ಬಳಸಿ ದಾಳಿ ನಡೆಸಲಾಗಿದೆ. ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದು ವ್ಯಾಪಕ ಆತಂಕ ಮೂಡಿಸಿದೆ.

ತಪ್ಪಿದ ಭಾರೀ ಅನಾಹುತ!

ಚಿಕ್ಕ ದೋಣಿಗಳಲ್ಲಿ ಬಂದ ದುಷ್ಕರ್ಮಿಗಳು ಈ ಮ್ಯಾಗ್ನೆಟಿಕ್ ಸ್ಫೋಟಕಗಳನ್ನು ಹಡಗಿನ ಹೊರಮೈಗೆ ಅಂಟಿಸಿ ಪರಾರಿಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ಹಡಗಿನ ಎಂಜಿನ್ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಟ್ಯಾಂಕರ್ ತಾತ್ಕಾಲಿಕವಾಗಿ ಸ್ಥಂಬಿತಗೊಂಡಿತ್ತು. ತಕ್ಷಣವೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದ ಕಾರಣ ದೊಡ್ಡಮಟ್ಟದ ಅನಾಹುತ ತಪ್ಪಿದೆ.

27 ಭಾರತೀಯ ನಾವಿಕರು ಸುರಕ್ಷಿತ

ಈ ಘಟನೆಯ ಕುರಿತು ಮಾಹಿತಿ ನೀಡಿರುವ ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಹಡಗಿನಲ್ಲಿದ್ದ ಎಲ್ಲಾ 27 ಭಾರತೀಯ ನಾವಿಕರು ಸಂಪೂರ್ಣ ಸುರಕ್ಷಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 29 ರಂದು ಮತ್ತೊಂದು ಹಡಗಿನ ಮೇಲೂ ಇಂತಹದೇ ದಾಳಿ ನಡೆದಿದ್ದು, ಒಟ್ಟಾರೆ ಈ ಎರಡು ಘಟನೆಗಳಲ್ಲಿ ಸಿಲುಕಿದ್ದ ಒಟ್ಟು 29 ಭಾರತೀಯರು ಸುರಕ್ಷಿತವಾಗಿದ್ದಾರೆ.

ಹಡಗಿನ ನಿರ್ವಹಣಾ ಕಂಪನಿಗಳೊಂದಿಗೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಸಿಬ್ಬಂದಿಯ ಸುರಕ್ಷತೆಯನ್ನು ಹದ್ದಿನ ಕಣ್ಣಿಟ್ಟು ಗಮನಿಸುತ್ತಿದೆ. ಸುಲಭವಾಗಿ ಬಳಸಬಹುದಾದ ಈ ಲಿಂಪೆಟ್ ಮೈನ್ ದಾಳಿಗಳು ಈ ಪ್ರದೇಶದಲ್ಲಿ ಸಂಚರಿಸುವ ವಾಣಿಜ್ಯ ನೌಕೆಗಳಿಗೆ ಭಾರಿ ಭದ್ರತಾ ಸವಾಲನ್ನು ಒಡ್ಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ